ಕೆಲವೇ ಗಂಟೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ವರ್ಗ ಆದೇಶ ರದ್ದು

Published : Aug 23, 2019, 10:16 AM IST
ಕೆಲವೇ ಗಂಟೆಯಲ್ಲಿ ಮೈಸೂರು ಜಿಲ್ಲಾಧಿಕಾರಿ ವರ್ಗ ಆದೇಶ ರದ್ದು

ಸಾರಾಂಶ

ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ಆದೇಶ ಕೇವಲ ಎರಡು ಗಂಟೆಯಲ್ಲಿ ರದ್ದಾಗಿದೆ. ಜನರ ಒತ್ತಾಯದ ಮೇರೆಗೆ ವರ್ಗ ಆದೇಶ ರದ್ದು ಮಾಡಲಾಗಿದೆ. 

ಮೈಸೂರು [ಆ.23]: ವರ್ಗಾವಣೆ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳ ಒತ್ತಾಯದಿಂದ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ವರ್ಗಾವಣೆ ರದ್ದಾದ ಪ್ರಸಂಗ ಗುರುವಾರ ನಡೆಯಿತು. 

ಪ್ರತಿ ಸರ್ಕಾರ ಬಂದಾಗಲು ತಮಗೆ ಬೇಕಾದ ಅಧಿಕಾರಿ ಗಳನ್ನು ವರ್ಗಾಯಿಸಿಕೊಳ್ಳುವುದು ಸಾಮಾನ್ಯ. ಅದರಂತೆ ಬಿಜೆಪಿ ಅಧಿಕಾರ ಬಂದ ಬಳಿಕ ಅಧಿಕಾರಿಗಳ ವರ್ಗಾವಣೆ ನಡೆಯುತ್ತಿದೆ. 

ಗುರುವಾರ ಮಧ್ಯಾಹ್ನ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರನ್ನು ವಾಣಿಜ್ಯ ತೆರಿಗೆ ಇಲಾಖೆಯ ಹೆಚ್ಚುವರಿ ಆಯುಕ್ತರನ್ನಾಗಿ ನೇಮಿಸಿ, ಆ ಹುದ್ದೆಯಲ್ಲಿದ್ದ ನಿತೇಶ್ ಪಟೇಲ್ ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿತ್ತು. 

PREV
click me!

Recommended Stories

ಅಕ್ರಮ ಬಾಂಗ್ಲಾ ವಲಸಿಗರ ಮಾಹಿತಿ ಕೊಟ್ಟಿದ್ದ ವೈದ್ಯನ ಮೇಲಿನ ಎಫ್‌ಐಆರ್ ರದ್ದುಗೊಳಿಸಿದ ಹೈಕೋರ್ಟ್!
ಬೆಂಗಳೂರಿನಲ್ಲಿ ಭಾರತ-ವೆಸ್ಟ್ ಇಂಡೀಸ್ ಪಂದ್ಯ ವೀಕ್ಷಿಸುವವರಿಗೆ ಗುಡ್‌ನ್ಯೂಸ್; ಮುಂಜಾನೆ 1.30ರವರೆಗೆ ಮೆಟ್ರೋ ಸಂಚಾರ!