ನಾಡಹಬ್ಬದಲ್ಲಿ ಹೆಜ್ಜೆಗೆ ಹೆಜ್ಜೆ ಹಾಕೋಣ ಬನ್ನಿ| ಯುವ ಸಮುದಾಯವನ್ನು ಸೆಳೆಯುತ್ತಿರುವ ಯುವ ದಸರಾ| ಯುವ ದಸರಾ ಕಾರ್ಯಕ್ರಮದಡಿ ವಿಜೃಂಭಿಸುತ್ತಿರುವ ಸಾಂಸ್ಕೃತಿಕ ವೇದಿಕೆ| ಪ್ರೇಕ್ಷಕರ ಮನಸೂರೆಗೊಂಡ ದೇಶಿ ಸೊಗಡಿನ ನೃತ್ಯಗಳು| ಸ್ಯಾಂಡಲ್’ವುಡ್ ಚಿತ್ರಗಳ ಹಾಡಿಗೆ ಸಿಳ್ಳೆ ಹಾಕಿ ಸಂಭ್ರಮಿಸಿದ ಪ್ರೇಕ್ಷಕರು|
ಮೈಸೂರು(ಅ.05): ನಾಡ ಹಬ್ಬ ಮೈಸೂರು ದಸರಾಗೆ ಅದ್ದೂರಿ ಚಾಲನೆ ದೊರೆತಿದೆ. ನಿತ್ಯವೂ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಗಮನ ಸೆಳೆಯುತ್ತಿದ್ದು, ಪ್ರಮುಖವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳು ಯುವ ಸಮುದಾಯವನ್ನು ಸೆಳೆಯುತ್ತಿದೆ.
ಯುವ ದಸರಾ ಕಾರ್ಯಕ್ರಮದಡಿ ಸಾಂಸ್ಕೃತಿಕ ವೇದಿಕೆ ವಿಜೃಂಭಿಸುತ್ತಿದ್ದು, ದೇಶಿ ಸೊಗಡಿನ ನೃತ್ಯಗಳು ಮನಸೂರೆಗೊಳ್ಳುತ್ತಿವೆ.
ಅಲ್ಲದೇ ಸ್ಯಾಂಡಲ್’ವುಡ್ ಚಿತ್ರಗಳ ಹಾಡಿಗೆ ಗಾಯಕರು ಧ್ವನಿಯಾದಾಗ ಪ್ರೇಕ್ಷಕ ಗಣ ಸಿಳ್ಳೆ ಹೊಡೆಯುವ ಮೂಲಕ ಸಾಥ್ ನೀಡಿದರು.
ಅದರಲ್ಲೂ ತಮ್ಮ ನೆಚ್ಚಿನ ಸಿನಿ ನಟರ ಹಾಡುಗಳು ಮತ್ತು ಅಚರ ಭಾವಚಿತ್ರ ಪರದೆ ಮೇಲೆ ಕಂಡಾಗ ಜನ ಹುಚ್ಚೆದ್ದು ಕುಣಿದರು.