ಮೈಸೂರು: ಗಜಪಡೆ, ಪೊಲೀಸ್ ತುಕಡಿ ತಾಲೀಮು

Published : Oct 06, 2019, 08:39 AM IST
ಮೈಸೂರು: ಗಜಪಡೆ, ಪೊಲೀಸ್ ತುಕಡಿ ತಾಲೀಮು

ಸಾರಾಂಶ

ದಸರಾ ಜಂಬೂಸವಾರಿಯಲ್ಲಿ ಸಾಗುವ ಗಜಪಡೆ, ಅಶ್ವರೋಹಿದಳ ಹಾಗೂ ವಿವಿಧ ಪೊಲೀಸ್‌ ತುಕಡಿಗಳು ಮೈಸೂರು ಅರಮನೆ ಮುಂಭಾಗ ಶನಿವಾರ ತಾಲೀಮು ನಡೆಸಿದವು. ಖಾಸಗಿ ದರ್ಬಾರ್‌ನಲ್ಲಿ ಭಾಗವಹಿಸಿರುವ ವಿಕ್ರಮ ಮತ್ತು ಗೋಪಿ ಆನೆಗಳು ಮಾತ್ರ ತಾಲೀಮಿಗೆ ಗೈರಾಗಿದ್ದವು.

ಮೈಸೂರು(ಅ.06): ನಾಡಹಬ್ಬ ದಸರಾ ಜಂಬೂಸವಾರಿಯಲ್ಲಿ ಸಾಗುವ ಗಜಪಡೆ, ಅಶ್ವರೋಹಿದಳ ಹಾಗೂ ವಿವಿಧ ಪೊಲೀಸ್‌ ತುಕಡಿಗಳು ಮೈಸೂರು ಅರಮನೆ ಮುಂಭಾಗ ಶನಿವಾರ ತಾಲೀಮು ನಡೆಸಿದವು.

ದಸರಾ ವಿಜಯದಶಮಿ ಮೆರವಣಿಗೆಯಲ್ಲಿ ಅಂಬಾರಿ ಹೊರುವ ಅರ್ಜುನ ಆನೆಗೆ ಮೇಯರ್‌ ಪುಷ್ಪಲತಾ ಜಗನ್ನಾಥ್‌, ಡಿಸಿಪಿಗಳಾದ ಎಂ. ಮುತ್ತುರಾಜು, ಚನ್ನಯ್ಯ ಅವರು ಪುಷ್ಪಾರ್ಚನೆ ಮಾಡುವ ಮೂಲಕ ಜಂಬೂಸವಾರಿ ತಾಲೀಮಿಗೆ ಚಾಲನೆ ನೀಡಿದರು. ಈ ವೇಳೆ ರಾಷ್ಟ್ರಗೀತೆ ನುಡಿಸಲಾಯಿತು. ಅಲ್ಲದೆ, 21 ಸುತ್ತು ಕುಶಾಲ ತೋಪು ಸಿಡಿಸಲಾಯಿತು. ಆನೆಗಳು ಹಾಗೂ ಕುದುರೆಗಳು ಜಗ್ಗದೆ ನಿಂತವು.

ವಿಕ್ರಮ ಮತ್ತು ಗೋಪಿ ಗೈರು:

ಅಂಬಾರಿ ಆನೆ ಅರ್ಜುನಗೆ ಕುಮ್ಕಿ ಆನೆಗಳಾಗಿ ಕಾವೇರಿ ಮತ್ತು ವಿಜಯ ಸಾಗಿದವು. ಬಲರಾಮ, ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ, ಜಯಪ್ರಕಾಶ್‌, ಈಶ್ವರ, ದುರ್ಗಾಪರಮೇಶ್ವರಿ ಮತ್ತು ಲಕ್ಷ್ಮಿ ಆನೆಗಳು ತಾಲೀಮಿಲ್ಲಿ ಪಾಲ್ಗೊಂಡಿದ್ದವು. ಖಾಸಗಿ ದರ್ಬಾರ್‌ನಲ್ಲಿ ಭಾಗವಹಿಸಿರುವ ವಿಕ್ರಮ ಮತ್ತು ಗೋಪಿ ಆನೆಗಳು ಮಾತ್ರ ತಾಲೀಮಿಗೆ ಗೈರಾಗಿದ್ದವು.

ಯುವ ದಸರಾ ವೇದಿಕೆಯಲ್ಲಿ ಪ್ರಪೋಸ್​: ನಿವೇದಿತಾ-ಚಂದನ್ ಶೆಟ್ಟಿಗೆ ಸಂಕಷ್ಟ

ಗಜಪಡೆಯೊಂದಿಗೆ ಅಶ್ವರೋಹಿದಳದ ಕುದುರೆಗಳು, ಕೆಎಸ್‌ಆರ್‌ಪಿ, ಸಿಎಆರ್‌, ಡಿಎಆರ್‌, ಆರ್‌ಪಿಎಫ್‌, ಗೃಹ ರಕ್ಷಕ ದಳ ಸೇರಿದಂತೆ ವಿವಿಧ ಪೊಲೀಸ್‌ ತುಕಡಿಗಳು ಹಾಗೂ ಪೊಲೀಸ್‌ ಬ್ಯಾಂಡ್‌ ಸಿಬ್ಬಂದಿ ತಾಲೀಮಿನಲ್ಲಿ ಭಾಗವಹಿಸಿದ್ದರು. ದಸರಾ ಆನೆ ವೈದ್ಯ ಡಾ.ಡಿ.ಎನ್‌. ನಾಗರಾಜು, ಅರಮನೆ ಎಸಿಪಿ ಚಂದ್ರಶೇಖರ್‌, ಇನ್ಸ್‌ಪೆಕ್ಟರ್‌ ಆನಂದ್‌ ಮೊದಲಾದವರು ಇದ್ದರು.

ಬಿಜೆಪಿ ಸಂಸದರಿಗೆ ಬಳೆ, ಕುಂಕುಮ ಕಳಿಸಿದ ಕೈ ಕಾರ್ಯಕರ್ತರು..!.

PREV
click me!

Recommended Stories

ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆ ಶೀಘ್ರ ಸಂಚಾರಕ್ಕೆ ಮುಕ್ತ: 30 ಕೇಬಲ್‌ ಅಳವಡಿಕೆ ಮಾತ್ರ ಬಾಕಿ
‘ಶಿಕ್ಷಣ ಹಬ್‌’ ಮಂಗಳೂರು ಈಗ ಡ್ರಗ್ಸ್‌ಗೂ ಕುಖ್ಯಾತ: ವಿದ್ಯಾರ್ಥಿಗಳೇ ಬಲಿಪಶು!