Mysuru : ಜಿಲ್ಲೆಯಲ್ಲಿ 40 ಅಭ್ಯರ್ಥಿಗಳಿಂದ 51 ನಾಮಪತ್ರ ಸಲ್ಲಿಕೆ

By Kannadaprabha News  |  First Published Apr 18, 2023, 8:08 AM IST

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ 40 ಮಂದಿ ಅಭ್ಯರ್ಥಿಗಳು 51 ನಾಮಪತ್ರ ಸಲ್ಲಿಸಿದ್ದಾರೆ.


  ಮೈಸೂರು :  ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸೋಮವಾರ 40 ಮಂದಿ ಅಭ್ಯರ್ಥಿಗಳು 51 ನಾಮಪತ್ರ ಸಲ್ಲಿಸಿದ್ದಾರೆ.

ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಆಮ್‌ಆದ್ಮಿಯಿಂದ ರಾಜಶೇಖರ್‌, ಕಾಂಗ್ರೆಸ್‌ನಿಂದ ಕೆ. ವೆಂಕಟೇಶ್‌ (ಹೆಚ್ಚುವರಿ ನಾಮಪತ್ರ), ಕೆ.ಆರ್‌. ನಗರ ಕ್ಷೇತ್ರದಿಂದ ಕಾಂಗ್ರೆಸ್‌ನ ಡಿ. ರವಿಶಂಕರ್‌, ಬಿಜೆಪಿಯಿಂದ ಹೊಸಹಳ್ಳಿ ವೆಂಕಟೇಶ್‌, ಹುಣಸೂರು ಕ್ಷೇತ್ರದಿಂದ ಕಾಂಗ್ರೆಸ್‌ನ ಎಚ್‌.ಪಿ. ಮಂಜುನಾಥ್‌ (ಹೆಚ್ಚುವರಿ) ಕೆಆರ್‌ಎಸ್‌ನ ತಿಮ್ಮಾಬೋವಿ (ಹೆಚ್ಚುವರಿ) ಪಕ್ಷೇತರರಾಗಿ ಬೀರೇಶ್‌, ಪಿ.ಎಸ್‌. ಯಡಿಯೂರಪ್ಪ, ಉಮೇಶ್‌, ಎಚ್‌.ಡಿ. ಕೋಟೆ ಕ್ಷೇತ್ರದಲ್ಲಿ ಉತ್ತಮ ಪ್ರಜಾಕೀಯ ಪಕ್ಷದ ಎಚ್‌.ಎಂ. ನಾಗೇಶ್‌, ಜೆಡಿಎಸ್‌ ಸಿ. ಜಯಪ್ರಕಾಶ್‌, ಕಾಂಗ್ರೆಸ್‌ನ ಸಿ. ಅನಿಲ್‌ಕುಮಾರ್‌, ಸಮಾಜವಾದಿ ಜನತಾ ಪಕ್ಷದ ಕೆ.ವಿ. ರಾಜು, ಪಕ್ಷೇತರರಾಗಿ ಎ.ಎಂ. ಬಾಬು, ಗಿರಿಜಾಂಬ ನಾಮಪತ್ರ ಸಲ್ಲಿಸಿದ್ದಾರೆ.

Latest Videos

undefined

ನಂಜನಗೂಡು ಕ್ಷೇತ್ರದಿಂದ ಕಾಂಗ್ರೆಸ್‌ನ ಡಿ. ದರ್ಶನ್‌ 4 ನಾಮಪತ್ರ ಸಲ್ಲಿಸಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಉತ್ತಮ ಪ್ರಜಾಕೀಯ ಪಕ್ಷದ ಎಸ್‌. ಹರೀಶ್‌, ಜೆಡಿಎಸ್‌ನ ಜಿ.ಟಿ. ದೇವೇಗೌಡ, ಸಮಾಜವಾದಿ ಜನತಾ ಪಕ್ಷದ ಮೆಹುಲ್‌ ಜೆ. ಪಟೇಲ್‌, ಆಮ್‌ ಆದ್ಮಿಯ ಕಿರಣ್‌ ನಾಗೇಶ್‌ ಕಲ್ಯಾಣಿ, ಪಕ್ಷೇತರರಾಗಿ ಬಿ. ಪ್ರಕಾಶ್‌, ಕಾಂಗ್ರೆಸ್‌ನ ಎಸ್‌. ಸಿದ್ದೇಗೌಡ, ಕೃಷ್ಣರಾಜ ಕ್ಷೇತ್ರದ ಆಮ್‌ ಆದ್ಮಿಯ ಎ.ಎಸ್‌. ಸತೀಶ್‌, ಪಕ್ಷೇತರರಾಗಿ ಎ.ಎಸ್‌. ಸತೀಶ್‌, ಇಂಡಿಯನ್‌ ಮೂವ್‌ಮೆಂಟ್‌ ಪಕ್ಷದ ಎಂ. ಲಿಂಗರಾಜು, ಕಾಂಗ್ರೆಸ್‌ನ ಎಂ.ಕೆ. ಸೋಮಶೇಖರ್‌ ನಾಮಪತ್ರ ಸಲ್ಲಿಸಿದರು.

ಚಾಮರಾಜ ಕ್ಷೇತ್ರಕ್ಕೆ ಬಿಜೆಪಿಯ ಎಲ್‌. ನಾಗೇಂದ್ರ, ಕೆಆರ್‌ಎಸ್‌ ಪಕ್ಷದ ಡಿ.ಪಿ.ಕೆ. ಪರಮೇಶ್‌, ಕಂಟ್ರಿ ಸಿಟಿಜನ್‌ ಪಕ್ಷದ ಎಂ. ಪಂಚಲಿಂಗು, ನರಸಿಂಹರಾಜ ಕ್ಷೇತ್ರಕ್ಕೆ ಬಿಜೆಪಿಯ ಎಸ್‌. ಸತೀಶ್‌ ಸಂದೇಶ್‌ ಸ್ವಾಮಿ, ರಿಪಬ್ಲಿಕನ್‌ ಪಾರ್ಟಿ ಆಫ್‌ ಇಂಡಿಯಾದ ವಿನೋದ್‌ ಎಂ. ಚಾಕೋ, ಪಕ್ಷೇತರರಾಗಿ ಎಂ. ಗಿರೀಧರ್‌ ಮತ್ತು ಎಂ. ಲಿಂಗರಾಜು ನಾಮಪತ್ರ ಸಲ್ಲಿಸಿದ್ದಾರೆ.

ವರುಣ ಕ್ಷೇತ್ರಕ್ಕೆ ಸಮಾಜವಾದಿ ಪಕ್ಷದ ಕೆ. ನಾಗೇಶ್‌ ನಾಯ್ಕ, ಬಿಜೆಪಿಯಿಂದ ವಿ. ಸೋಮಣ್ಣ, ಕನ್ನಡ ದೇಶ ಪಕ್ಷದ ಅರುಣ್‌ ಲಿಂಗ, ಟಿ. ನರಸೀಪುರ ಕ್ಷೇತ್ರಕ್ಕೆ ಜೆಡಿಎಸ್‌ನ ಎಂ. ಅಶ್ವಿನ್‌ಕುಮಾರ್‌, ಆಮ್‌ ಆದ್ಮಿಯ ಎಂ. ಸಿದ್ದರಾಜು, ಬಿಜೆಪಿಯ ಡಾ.ಎಂ. ರೇವಣ್ಣ ನಾಮಪತ್ರ ಸಲ್ಲಿಸಿದ್ದಾರೆ.

ಇಲ್ಲಿ ಮೂರು ಪಕ್ಷಗಳ ಸಮಬಲದ ಗುದ್ದಾಟ

ಶಿವಮೊಗ್ಗ(ಏ.13):  ಕ್ಷೇತ್ರ ಮರುವಿಂಗಡಣೆ ಬಳಿಕ ಅಸ್ತಿತ್ವಕ್ಕೆ ಬಂದ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ ಜಿಲ್ಲೆಯ ಏಕೈಕ ಮೀಸಲು ಕ್ಷೇತ್ರವಾಗಿದ್ದು, ಇದುವರೆಗೆ ಒಟ್ಟು ಮೂರು ಚುನಾವಣೆಗಳು ನಡೆದಿವೆ. ಎರಡು ಬಾರಿ ಬಿಜೆಪಿ ಮತ್ತು ಒಂದು ಬಾರಿ ಜೆಡಿಎಸ್‌ ಅಭ್ಯರ್ಥಿ ಗೆದ್ದಿದ್ದು, ಈ ಬಾರಿ ಜೆಡಿಎಸ್‌, ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ತ್ರಿಕೋನ ಸ್ಪರ್ಧೆ ಇದ್ದಂತೆ ಭಾಸ ವಾಗುತ್ತಿದ್ದರೂ ಸದ್ಯಕ್ಕಂತೂ ಬಿಜೆಪಿ ಮತ್ತು ಜೆಡಿಎಸ್‌ ನಡುವೆಯೇ ಜಂಗಿ ಕುಸ್ತಿ ಇದ್ದಂತಿದೆ. ಯಾರೇ ಗೆದ್ದರೂ ಬಹಳ ಅಂತರದ ಗೆಲುವು ಇಲ್ಲ ಎನ್ನುವುದು ಕ್ಷೇತ್ರದಲ್ಲಿ ಕೇಳಿ ಬರುತ್ತಿರು ಮಾತು.

ಲಿಂಗಾಯಿತರು ಮತ್ತು ಪರಿಶಿಷ್ಟವರ್ಗದವರು ಹೆಚ್ಚಾಗಿ ಇರುವ ಈ ಕ್ಷೇತ್ರದಲ್ಲಿ ಯಡಿಯೂರಪ್ಪ ಪ್ರಭಾವ ದಟ್ಟವಾಗಿತ್ತು. ಹೀಗಾಗಿ 2008 ರಲ್ಲಿ ಬಿಜೆಪಿಯ ಕೆ.ಜಿ.ಕುಮಾರ ಸ್ವಾಮಿ ಗೆದ್ದಿದ್ದರು. 2013ರಲ್ಲಿ ಬಿಜೆಪಿ-ಕೆಜೆಪಿ ನಡುವಿನ ಪೈಪೋಟಿಯಲ್ಲಿ ಜೆಡಿಎಸ್‌ನ ಶಾರದಾ ಪೂರಾರ‍ಯನಾಯ್ಕ್‌ ಸುಲಭವಾಗಿ ಗೆದ್ದು ಬಂದರು. ಆದರೆ ಮತ ಗಳಿಕೆಯ ಒಟ್ಟಾರೆ ಲೆಕ್ಕಾ ಚಾರದಲ್ಲಿ ಬಿಜೆಪಿ ಮತ್ತು ಕೆಜೆಪಿ ಒಟ್ಟಾಗಿ ಗಳಿಸಿದ ಮತ ಶಾರದಾ ಪೂರಾರ‍ಯನಾಯ್ಕ್‌ ಅವರು ಗಳಿಸಿದ ಮತಕ್ಕಿಂತ ಸುಮಾರು 2 ಸಾವಿರ ಹೆಚ್ಚಾಗಿತ್ತು. 2018ರಲ್ಲಿ ಬಿಜೆಪಿಯ ಕೆ. ಬಿ. ಅಶೋಕ್‌ ನಾಯ್ಕ್‌ ಅವರು ಜೆಡಿಎಸ್‌ನ ಶಾರದಾ ಪೂರಾರ‍ಯನಾಯ್ಕ್‌ ಅವರನ್ನು ಸುಮಾರು 4 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದರು.

ನನ್ನ ಮಗಳು ಎದೆಗೆ ಚೂರಿ ಹಾಕಿದ್ದಾಳೆ: ಅಪ್ಪ ಕಾಂಗ್ರೆಸ್‌- ಮಗಳು ಬಿಜೆಪಿ

ಆದರೆ ಈಗಿನ ಪರಿಸ್ಥಿತಿ ಸುಲಭವಾಗಿಲ್ಲ. ಬಂಜಾರ ಸಮುದಾಯ ಸ್ವಲ್ಪ ಸಿಟ್ಟಾಗಿದೆ. ಶಾಸಕ ಅಶೋಕ್‌ ನಾಯ್ಕ್‌ ಅವರ ವಿರುದ್ಧ ಸಣ್ಣ ಅಲೆಯೊಂದು ಎದ್ದಿದೆ ಎಂದು ಆ ಪಕ್ಷದವರೇ ಹೇಳುತ್ತಾರೆ. ಕೆಲಸ ಮಾಡಿದರೂ ಸೀಮಿತ ಪ್ರದೇಶದಲ್ಲಷ್ಟೇ ಸಂಪರ್ಕ ಇಟ್ಟುಕೊಂಡಿದ್ದಾರೆ. ಕೈಗೆ ಸಿಗುವುದಿಲ್ಲ ಎನ್ನುವುದು ಅವರ ಮೇಲಿನ ಆರೋಪ. ಇನ್ನು ಈಗಾಗಲೇ ಅಧಿಕೃತ ವಾಗಿ ಜೆಡಿಎಸ್‌ ಟಿಕೆಟ್‌ ಪಡೆದಿರುವ ಶಾರದಾ ಪೂರಾರ‍ಯನಾಯ್ಕ್‌ ಅವರು ಚುನಾವಣೆಯಲ್ಲಿ ಸೋತ ಬಳಿಕವೂ ಇಡೀ ಕ್ಷೇತ್ರದಾದ್ಯಂತ ಓಡಾಡಿಕೊಂಡು ಪಕ್ಷ ಸಂಘಟಿಸಿದ್ದಾರೆ. ಇದು ಅವರಿಗೆ ಲಾಭವಾಗಬಹುದು. ಜೊತೆಗೆ ಪರಿಶಿಷ್ಟಸಮುದಾಯದ ಎಡಗೈ ಸಮುದಾಯ ಅವರ ಜೊತೆಗೆ ನಿಲ್ಲಬಹುದು ಎಂದು ಅವರ ಲೆಕ್ಕಾಚಾರ.

click me!