ಮುಸ್ಲಿಂರು ನಮ್ಮ ಅಣ್ಣ ತಮ್ಮಂದಿರು ಇದ್ದಂತೆ: ಸಂಸದ ಕರಡಿ

By Kannadaprabha News  |  First Published May 29, 2022, 7:36 AM IST

*  ಮುಸ್ಲಿಂರನ್ನು ಓಲೈಸಿದ ಬಿಜೆಪಿ ಸಂಸದ ಕರಡಿ ಸಂಗಣ್ಣ 
*  ಭಾರತವು ಆಧ್ಯಾತ್ಮಿಕ ಹಿನ್ನೆಲೆ ಇರುವ ದೇಶ
*  ಇತಿಹಾಸ ತಿಳಿಯದ ವ್ಯಕ್ತಿ ಹೊಸ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ


ಕೊಪ್ಪಳ(ಮೇ.29): ಮುಸ್ಲಿಂರು ಬೇರೆಯವರಲ್ಲ ನಮ್ಮ ಅಣ್ಣ ತಮ್ಮಂದಿರು ಇದ್ದಂತೆ ಎಂದು ಸಂಸದ ಕರಡಿ ಸಂಗಣ್ಣ ಹೇಳಿದರು. ನಗರದ ಸಾಹಿತ್ಯ ಭವನದಲ್ಲಿ ಜರುಗಿದ ಅಮೃತ ಭಾರತಿಗೆ ಕನ್ನಡದಾರತಿ ಎನ್ನುವ ಅಭಿಯಾನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಮ್ಮ ಭಾಷಣದ ವೇಳೆ ಮುಸ್ಲಿಂರನ್ನು ಓಲೈಸಿದ ಸಂಸದರು, ಅವರವರು ತಮ್ಮ ಧರ್ಮವನ್ನು ಮನೆಯಲ್ಲಿ ಆಚರಿಸಬೇಕು. ಅವರನ್ನು ದೇಶದಿಂದ ಓಡಿಸಲು ಆಗುವುದಿಲ್ಲ ಎಂದರು. ಭಾರತವು ಆಧ್ಯಾತ್ಮಿಕ ಹಿನ್ನೆಲೆ ಇದೆ. ಇತಿಹಾಸ ತಿಳಿಯದ ವ್ಯಕ್ತಿ ಹೊಸ ಇತಿಹಾಸ ನಿರ್ಮಿಸಲು ಸಾಧ್ಯವಿಲ್ಲ. ಸ್ವತಂತ್ರ್ಯದ ಸವಿ ನೆನಪು ಮೆಲಕು ಹಾಕಬೇಕಾಗಿದೆ. ವಲಸೆ ಬಂದವರು ನಮ್ಮ ಸಂಸ್ಕೃತಿ ಹಾಳು ಮಾಡುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಭಾರತದ ಕೀರ್ತಿ ಹೆಚ್ಚಿಸಿದ್ದು ಮೋದಿ ಸರ್ಕಾರ. ಅಂದಿನ ಸರ್ಕಾರ ತಪ್ಪು ನಿರ್ಧಾರದಿಂದ ಮುಂದಕ್ಕೆ ಹೋಗಲು ಸಾಧ್ಯವಾಗಲಿಲ್ಲ ಎಂದರು.

Tap to resize

Latest Videos

ರಸ್ತೆ ಅಪಘಾತದಲ್ಲಿ ಬಿಜೆಪಿ ಸಂಸದ ಕರಡಿ ಸಂಗಣ್ಣ ಸಹೋದರ ಸಾವು

ಸಂಸದ ಕರಡಿ ಹೇಳಿಕೆಗೆ ಬಿಜೆಪಿಯಲ್ಲಿ ಭಾರೀ ಸಂಚಲನ..!

ಕೊಪ್ಪಳ: ಸಂಸದ ಸಂಗಣ್ಣ ಕರಡಿ ಅವರು ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಸ್ಪರ್ಧೆ ಮಾಡುತ್ತಾರೆ ಎನ್ನುವ ಕುರಿತು ವದಂತಿ ಆಗಾಗ ಹರಡುತ್ತಿತ್ತು. ಆದರೆ, ಸ್ವತಃ ಸಂಗಣ್ಣ ಕರಡಿ ಅವರೇ ಸಿಂಧನೂರು ತಾಲೂಕಿನ ತುರುವಿಹಾಳ ಗ್ರಾಮದ ಕಾರ್ಯಕ್ರಮವೊಂದರಲ್ಲಿ ವರಿಷ್ಠರು ಅವಕಾಶ ನೀಡಿದರೆ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿರುವುದು ಭಾರಿ ಸಂಚಲನ ಮೂಡಿದೆ.

Union Budget ಪ್ರತಿಪಕ್ಷಕ್ಕೂ ಟೀಕಿಸದಂಥ ಸ್ಥಿತಿ: ಸಂಸದ ಕರಡಿ

ಎಂಎಲ್‌ಎ ಚುನಾವಣೆಯಲ್ಲಿ ಸ್ಪರ್ಧೆ ವದಂತಿ ಕುರಿತು ಪ್ರಶ್ನೆ ಕೇಳಿದಾಗಲೆಲ್ಲಾ ನಾನೀಗ ಸಂಸದನಿದ್ದೇನೆ ಎನ್ನುತ್ತಿದ್ದರು. ಆದರೆ ‘ಜೆಡಿಎಸ್‌ ಸೇರಿದಂತೆ ಬೇರೆ ಪಕ್ಷದಿಂದಲೂ ಸ್ಪರ್ಧೆ ಮಾಡುವುದಿಲ್ಲ. ಬಿಜೆಪಿ ವರಿಷ್ಠರು ಅವಕಾಶ ನೀಡಿದರೆ ಕೊಪ್ಪಳ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ’ ಎಂದು ಸಂಗಣ್ಣ ಹೇಳಿದ್ದರು. 

ಸಂಗಣ್ಣ ಅವರಿಗೆ ಬಿಜೆಪಿ ಟಿಕೆಟ್‌ ಸಿಗುವುದು ಕಷ್ಟ. ಹೀಗಾಗಿ ಅವರು ಜೆಡಿಎಸ್‌ದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧೆ ಮಾಡುತ್ತಾರೆ ಎಂಬ ಕುರಿತು ಗುಸುಸು ಚರ್ಚೆ ಕೇಳಿಬಂದಿತ್ತು. ಆದರೆ, ಇದನ್ನು ಸಂಸದ ಸಂಗಣ್ಣ ಕರಡಿ ಅವರು ತಳ್ಳಿ ಹಾಕಿದ್ದಾರೆ. ಪಕ್ಷ ನನ್ನನ್ನು ಒಂದು ಬಾರಿ ಶಾಸಕನನ್ನು ಮಾಡಿದೆ ಮತ್ತು ಎರಡು ಬಾರಿ ಸಂಸದನನ್ನಾಗಿ ಮಾಡಿದೆ. ಹೀಗಾಗಿ ಪಕ್ಷದ ವರಿಷ್ಠರು ಅವಕಾಶ ನೀಡಿದರೆ ಮಾತ್ರ ಬಿಜೆಪಿಯಿಂದಲೇ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎನ್ನುವುದು ಜನರ ಆಸೆಯಾಗಿದೆ ಎನ್ನುವ ಮೂಲಕ ಅವರು ಜೆಡಿಎಸ್‌ ಬಾಗಿಲು ತಟ್ಟುತ್ತಿದ್ದಾರೆ ಎನ್ನುವುದನ್ನು ಅಲ್ಲಗಳೆದಿದ್ದಾರೆ.
 

click me!