* ಸಿದ್ದರಾಮಯ್ಯನಂಥ ಕಟುಕ ಯಾರಿದ್ದಾರೆ: ಕಂದಾಯ ಸಚಿವ ಅಶೋಕ ಕಿಡಿ
* ಬೀಫ್ ತಿನ್ನುವ ಹೇಳಿಕೆ ವಿಚಾರವಾಗಿ ಸಿದ್ದು ವಿರುದ್ಧ ಸಿಡಿಮಿಡಿ
* ಗೋವುಗಳೆಂದರೆ ಅವುಗಳಲ್ಲಿ ದೇವರಿದ್ದಾರೆ ಎಂಬ ಭಾವನೆ
ಬೀದರ್(ಮೇ.29): ಸಿದ್ದರಾಮಯ್ಯಗೆ ತಾಕತ್ ಇದ್ರೆ ನಮ್ ಮುಂದೆ ಬೀಫ್ ತಿನ್ನಲಿ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸವಾಲೆಸೆದಿದ್ದಾರೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನಾನು ಹಿಂದು ನಾನು ದನದ ಮಾಂಸ ತಿನ್ನುತ್ತೇನೆ, ಕಾಂಗ್ರೆಸ್ ಸರ್ಕಾರ ಬಂದ್ರೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೀತೇವೆ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ಸಿದ್ದರಾಮಯ್ಯ ಅವರಿಗೆ ಆಹ್ವಾನ ಮಾಡ್ತೇನೆ. ಅವರಿಗೆ ತಾಕತ್ ಇದ್ರೆ ನಮ್ಮ ಮುಂದೆ ಬೀಫ್ ತಿಂದು ತೋರಿಸಲಿ ಎಂದು ವಡಗಾಂವ ದæೕಶಮುಖ ಗ್ರಾಮದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ ಸವಾಲೆಸದರು. ಈ ಸಂದರ್ಭದಲ್ಲಿ ಕಂದಾಯ ಸಚಿವ ಆರ್. ಅಶೋಕ ಇದ್ದರು.
ಸಿದ್ದರಾಮಯ್ಯನಂಥ ಕಟುಕ ಯಾರಿದ್ದಾರೆ: ಕಂದಾಯ ಸಚಿವ ಅಶೋಕ ಕಿಡಿ
ಸಿದ್ದರಾಮಯ್ಯನಂಥ ಕಟುಕರು ಈ ದೇಶದಲ್ಲಿ ಯಾರಿದ್ದಾರæ. ಹಿಂದೂಗಳ ಭಾವನೆಗಳನ್ನು ಕೆರಳಿಸಲು ಮುಸ್ಲಿಂ ಸಮುದಾಯದ ಓಟುಗಳನ್ನು ಪಡೆಯಲು ಸಲ್ಲದ ಹೇಳಿಕೆ ನೀಡ್ತಿದ್ದಾರೆ ಎಂದು ಕಂದಾಯ ಸಚಿವ ಆರ್ ಅಶೋಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರಶ್ನೆ ಮಾಡಿದ್ದು RSS ಎಂಬ ಸಂಸ್ಥೆಯನ್ನ, ಬಿಜೆಪಿ ನಾಯಕರು ಏಕೆ ಎದೆ ಬಡಿದುಕೊಳ್ಳುತ್ತಿದ್ದಾರೆ?
ಜಿಲ್ಲೆಯ ವಡಗಾಂವ ದೇಶಮುಖ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಮುಗಿಸಿ ಶನಿವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ನಾನು ಹಿಂದು ನಾನು ದನದ ಮಾಂಸ ತಿನ್ನುತ್ತೇನೆ, ಕಾಂಗ್ರೆಸ್ ಸರ್ಕಾರ ಬಂದ್ರೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೀತೇವೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಆರ್ ಅಶೋಕ ಕಿಡಿಕಿಡಿಯಾದರು.
ಗೋವುಗಳೆಂದರೆ ಅವುಗಳಲ್ಲಿ ದೇವರಿದ್ದಾರೆ ಎಂಬ ಭಾವನೆ ಇದೆ. ಸಿದ್ದರಾಮಯ್ಯವರು ಹೋಗದಿದ್ರೂ ಅವರ ಹೆಂಡ್ತಿ ಮಕ್ಕಳೆಲ್ಲರೂ ಗೃಹ ಪ್ರವೇಶ ಮಾಡಬೇಕಾದರೆ ಮೊದಲು ಹಸುವನ್ನೇ ಮನೆಯೊಳಗೆ ಬಿಟ್ಟಿರೋದು. ಆ ಹಸುವನ್ನೇ ನಾನು ತಿನ್ನುತ್ತೇನೆ ಅಂದ್ರೆ ಅವರಂಥ ಕಟುಕರು ಈ ದೇಶದಲ್ಲಿ ಯಾರಿದ್ದಾರೆ. ಇದು ನಿಮಗೂ ಒಳ್ಳೆಯದಲ್ಲ, ಈ ಸಮಾಜಕ್ಕೂ ಒಳ್ಳೆಯದಲ್ಲ ಎಂದು ಸಿದ್ದರಾಮಯ್ಯ ಅವರಿಗೆ ತೀಕ್ಷವಾಗಿ ಎಚ್ಚರಿಸಿದರು. ಈ ಸಂದರ್ಭದಲ್ಲಿ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಇದ್ದರು.