ಕೊರೋನಾ ವಿರುದ್ಧ ಹೋರಾಟ: 'ರಂಜಾನ್‌ ಹಬ್ಬಕ್ಕೆ ಖರ್ಚು ಮಾಡುವ ಹಣ ಬಡವರಿಗೆ ನೀಡಿ'

Kannadaprabha News   | Asianet News
Published : May 10, 2020, 09:46 AM ISTUpdated : May 18, 2020, 05:52 PM IST
ಕೊರೋನಾ ವಿರುದ್ಧ ಹೋರಾಟ: 'ರಂಜಾನ್‌ ಹಬ್ಬಕ್ಕೆ ಖರ್ಚು ಮಾಡುವ ಹಣ ಬಡವರಿಗೆ ನೀಡಿ'

ಸಾರಾಂಶ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಧಾರ್ಮಿಕ ಕಾರ್ಯಕ್ರಮಗಳು ನಿಂತು ಹೋಗಿವೆ| ಸಮಸ್ತ ಮುಸ್ಲಿಂ ಸಮುದಾಯವು ಈ ಬಾರಿಯ ರಂಜಾನ್‌ ಹಬ್ಬವನ್ನು ಆಚರಿಸಿದೇ ರಂಜಾನ್‌ ಹಬ್ಬದ ಅಂಗವಾಗಿ ಖರ್ಚು ಮಾಡುವ ಹಣವನ್ನು ಬಡವರಿಗೆ, ಹಸಿವಿನಿಂದ ಬಳಲುತ್ತಿರುವವವರಿಗೆ ನೆರವು ನೀಡಿ| ಮುಸ್ಲಿಂ ಸಮುದಾಯದ ಧರ್ಮಗುರು ಮುಫ್ತಿ ಶಬಿರಸಾಬ್‌ ಮನವಿ|

ಗದಗ(ಮೇ.10): ಮಹಾಮಾರಿ ಕೊರೊನಾ ವೈರಸ್‌ನಿಂದಾಗಿ ದೇಶವೇ ತತ್ತರಿಸಿ ಹೋಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಧಾರ್ಮಿಕ ಕಾರ್ಯಕ್ರಮಗಳು ನಿಂತು ಹೋಗಿದ್ದರಿಂದ ಸಮಸ್ತ ಮುಸ್ಲಿಂ ಸಮುದಾಯವು ಈ ಬಾರಿಯ ರಂಜಾನ್‌ ಹಬ್ಬವನ್ನು ಆಚರಿಸಿದೇ ರಂಜಾನ್‌ ಹಬ್ಬದ ಅಂಗವಾಗಿ ಖರ್ಚು ಮಾಡುವ ಹಣವನ್ನು ಬಡವರಿಗೆ, ಹಸಿವಿನಿಂದ ಬಳಲುತ್ತಿರುವವವರಿಗೆ ನೆರವು ನೀಡುವ ಮಹತ್ವದ ತೀರ್ಮಾನವನ್ನು ಗದಗ-ಬೆಟಗೇರಿ ಮುಸ್ಲಿಂ ಸಮುದಾಯವು ತಗೆದುಕೊಂಡಿದೆ ಎಂದು ಮುಸ್ಲಿಂ ಸಮುದಾಯದ ಧರ್ಮಗುರು ಮುಫ್ತಿ ಶಬಿರಸಾಬ್‌ ಹೇಳಿದರು.

ಅವರು ಶುಕ್ರವಾರ ಗದಗ ಈದ್ಗಾ ಮೈದಾನದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕೊರೋನಾ ತಡೆಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಲಾಕ್‌ಡೌನ್‌ ನಿಯಮವನ್ನು ಈಗಾಗಲೇ ಎಲ್ಲರೂ ಕಟ್ಟುನಿಟ್ಟಿನಿಂದ ಪಾಲಿಸುತ್ತಿದ್ದೇವೆ. ಕೊರೋನಾ ಆರ್ಭಟದ ಈ ಸಂದರ್ಭದಲ್ಲಿ ಮುಸ್ಲಿಂರ ಪವಿತ್ರ ಹಬ್ಬವಾದ ರಂಜಾನ್‌ ಆಚರಣೆ ಮಾಡದೇ ಹಬ್ಬಕ್ಕಾಗಿ ಬಟ್ಟೆಸೇರಿದಂತೆ ಇನ್ನಿತರ ವಸ್ತುಗಳನ್ನು ಖರೀದಿಸದಿರಲು ತೀರ್ಮಾನಿಸಲಾಗಿದ್ದು, ಹಬ್ಬದ ಖರ್ಚಿಗಾಗಿ ಕೂಡಿಟ್ಟಆ ಹಣವನ್ನು ನೆರೆ ಹೊರೆ, ಅಕ್ಕಪಕ್ಕದ ಎಲ್ಲ ಧರ್ಮದ ಬಡಜನರಿಗೆ ಆರ್ಥಿಕ ಸಹಾಯ ಮಾಡುವ ಮಹತ್ವದ ನಿರ್ಣಯ ಮಾಡಿದ್ದೇವೆ.

ಗದಗ ಜಿಲ್ಲೆ ಸದ್ಯಕ್ಕೆ ಕೊರೋನಾ ಮುಕ್ತ..!

ಅಲ್ಲದೇ ಕೊರೋನಾ ಸಂಕಷ್ಟಸಮಯದಲ್ಲಿ ಕೊರೋನಾ ವಾರಿಯ​ರ್‍ಸ್ಗಳಾಗಿ ಶ್ರಮಿಸುತ್ತಿರುವ ಡಾಕ್ಟ​ರ್‍ಸ್, ನರ್ಸ್‌, ಪೊಲೀಸ್‌ ಸಿಬ್ಬಂದಿ ಹಾಗೂ ಪೌರ ಕಾರ್ಮಿಕರಿಗೆ ಮುಸ್ಲಿಂ ಸಮಾಜದಿಂದ ಗೌರವ ಪೂರ್ವಕವಾಗಿ ಅಭಿನಂದನೆ ಸಲ್ಲಿಸಲಿದ್ದೇವೆ. ಮೇ 17ರವರೆಗೆ ಇರುವ ಲಾಕ್‌ಡೌನ್‌ ಮೇ 30ರವರೆಗೆ ವಿಸ್ತಿರಿಸಿ ಕೊರೊನಾ ಹೋಗಲಾಡಿಸಬೇಕೆಂದು ಇದೇ ವೇಳೆ ರಾಜ್ಯ ಸರ್ಕಾರ ಹಾಗೂ ಗದಗ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಮೌಲಾನಾ ಇನಾಯುತ್ತಾಲ್ಲಾಸಾಬ್‌, ಮೌಲಾನಾ ಅಬ್ದುಲ್‌ ರಹೀಂಸಾಬ್‌, ಮೌಲಾನಾ ಝಕರಿಯಾಸಾಬ್‌, ಮುಫ್ತಿ ಆರೀಫಸಾಬ್‌, ಮೌಲಾನಾ ಶಮಸುದ್ದೀನಸಾಬ್‌, ಹಾಫೀಜ ಹುಸೇನಸಾಬ್‌, ಜಾಕೀರಸಾಬ್‌ ಮುಜಾವರ, ಹಾಜಿ ಮಕಬೂಲಸಾಬ್‌ ಶಿರಹಟ್ಟಿ, ಅಕ್ಬರಸಾಬ್‌ ಬಬರ್ಚಿ, ನ್ಯಾಯವಾದಿ, ಎನ್‌.ಬಿ. ದಾಯಮನವರಸಾಬ್‌, ಹಾಜಿ ಇಕ್ಬಾಲಸಾಬ್‌ ಹಣಗಿ, ಶಫೀಸಾಬ್‌ ಕುದರಿ, ಅಬುಬಕರಸಾಬ್‌ ರಾಟಿ, ಶಿರಾಜಸಾಬ್‌ ಬಳ್ಳಾರಿ, ಅಸಮಲಸಾಬ್‌ ನರೇಗಲ್ಲ, ಯೂಸೂಫಸಾಬ್‌ ನಮಾಜಿ, ಜುನೇದಸಾಬ್‌ ಉಮಚಗಿ, ಹಾಜಿ ಗುಲಾಮಸಾಬ್‌ ಬನ್ನೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
 

PREV
click me!

Recommended Stories

ಪ್ರಧಾನಿಗೆ ಪತ್ರ ಬರೆಯುವುದರಲ್ಲಿ ಸಿದ್ದರಾಮಯ್ಯ, ಡಿಕೆಶಿ ನಿಸ್ಸೀಮರು: ಬಿ.ವೈ.ವಿಜಯೇಂದ್ರ
ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ