ಅಕ್ರಮ ಗೋ ಸಾಗಾಟ ತಡೆ: ಹಿಂದೂ ಮಾದರಿಯಲ್ಲೇ ಮುಸ್ಲಿಂ ಸಂಘಟನೆ

Published : Jun 18, 2019, 03:47 PM ISTUpdated : Jun 18, 2019, 03:58 PM IST
ಅಕ್ರಮ ಗೋ ಸಾಗಾಟ ತಡೆ: ಹಿಂದೂ ಮಾದರಿಯಲ್ಲೇ ಮುಸ್ಲಿಂ ಸಂಘಟನೆ

ಸಾರಾಂಶ

ಕೋಮು ಸಂಘರ್ಷಕ್ಕೆ ಕಾರಣವಾಗುವ ಅಕ್ರಮ ಗೋ ಸಾಗಾಟ ತಡೆಗೆ ಮುಸ್ಲಿಮರಿಂದಲೇ ಸಂಘಟನೆ| ಕರಾವಳಿಯಲ್ಲಿ ತಲೆ ಎತ್ತಿದ 'ಅಕ್ರಮ ‌ಗೋ ಸಾಗಾಟ ಸಂರಕ್ಷಣಾ ಸಮಿತಿ'|ಮುಸ್ಲಿಂ ಸಂಘಟನೆಯ ನಿರ್ಧಾರಕ್ಕೆ ಹಿಂದೂ ಸಂಘಟನೆಯ ಪ್ರಮುಖರಿಂದ ಶ್ಲಾಘನೆ| ಕರಾವಳಿಯಲ್ಲಿ ಹಿಂದೂ-ಮುಸಲ್ಮಾನರ ಸಾಮರಸ್ಯಕ್ಕೆ ಸಾಕ್ಷಿಯಾಗುತ್ತಾ ಈ ಸಂಘಟನೆ?

ಮಂಗಳೂರು, (ಜೂ.18): ಕರಾವಳಿಯಲ್ಲಿ ಗೋವುಗಳ ಅಕ್ರಮ ಸಾಗಾಟಕ್ಕೆ ಕಡಿವಾಣ ಹಾಕಲು ಮುಸ್ಲಿಂ ಸಂಘಟನೆ ಮುಂದಾಗಿವೆ. 
ಮುಸ್ಲಿಂ ಯೂತ್ ಲೀಗ್ ಕರ್ನಾಟಕ‌ದ ನೇತೃತ್ವದಲ್ಲಿ ಹೊಸ ಸಂಘಟನೆಯನ್ನು ಹುಟ್ಟುಹಾಕಲು ತೀರ್ಮಾನಿಸಿವೆ.

 ಕರಾವಳಿಯಲ್ಲಿ ಅಕ್ರಮ ಗೋಸಾಗಾಟದ ವಿರುದ್ಧ ಈವರೆಗೆ ಹಿಂದೂ ಸಂಘಟನೆಗಳು ರಸ್ತೆಗಿಳಿದಿದ್ದವು. ಆದರೆ ಈಗ ಮುಸ್ಲಿಂ ಸಂಘಟನೆಗಳೂ ಮುಂದಾಗಿದ್ದು, ರಾವಳಿಯಲ್ಲಿ ಸಂಚಲನ ‌ಮೂಡಿಸಿದೆ.

ಅಕ್ರಮ ಗೋ ಸಾಗಣೆಗೆ ಮಂಗಳೂರು ಮುಸ್ಲಿಮರ ವಿರೋಧ

'ಅಕ್ರಮ ಗೋ ಸಾಗಾಟ ಸಂರಕ್ಷಣಾ ಸಮಿತಿ' ಹೆಸರಿನಲ್ಲಿ ಶೀಘ್ರದಲ್ಲಿಯೇ ಸಂಘಟನೆಯೊಂದು ಅಸ್ತಿತ್ವಕ್ಕೆ ಬರಲಿದ್ದು, ರಾಜ್ಯ ಮುಸ್ಲಿಂ ಲೀಗ್ ನ ಯುವವಿಭಾಗ ಇದರ ನೇತೃತ್ವ ವಹಿಸಲಿದೆ.

ಅಕ್ರಮ ಗೋವುಗಳ ಸಾಗಾಟದ ವಿಚಾರದಲ್ಲಿ ದಕ್ಷಿಣ ಕನ್ನಡ  ಪದೇ ಪದೇ ಹಿಂದೂ-ಮುಸ್ಲಿಂ ನಡುವೆ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿತ್ತು. ಆದರೆ, ಇದೀಗ ಹಿಂದೂ ಸಂಘಟನೆಗಳ ಮಾದರಿಯಲ್ಲೇ ಮುಸ್ಲಿಂ ಸಂಘಟನೆ ಅಕ್ರಮ ಗೋವುಗಳ ಸಾಗಾಟ ತಡೆಯಲು ಮುಂದಾಗಿದ್ದು ನಿಜಕ್ಕೂ ಸಂತಸ ಸಂಗತಿ.

ಮುಸ್ಲಿಂ ಸಂಘಟನೆಯ ಈ ನಿರ್ಧಾರಕ್ಕೆ ಹಿಂದೂ ಸಂಘಟನೆಯ ಪ್ರಮುಖರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಸಂಘಟನೆಯಿಂದ ಕರಾವಳಿಯಲ್ಲಿ ಹಿಂದೂ-ಮುಸಲ್ಮಾನರ ಸಾಮರಸ್ಯಕ್ಕೆ ಸಾಕ್ಷಿಯಾಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

PREV
click me!

Recommended Stories

ವಿದ್ಯಾರ್ಥಿಗಳೇ ತಂತ್ರಜ್ಞಾನ ಯುಗದಲ್ಲಿ ಪ್ರಶ್ನೆ ಮಾಡುವ ಧೈರ್ಯ ಬೆಳೆಸಿಕೊಳ್ಳಿ: ರಶ‍್ಮಿ ಮಹೇಶ್
Shivamogga News: ಹೊಸನಗರ ಕಾಲೇಜು ಪ್ರತಿಭಾವಂತ ವಿದ್ಯಾರ್ಥಿನಿ ರಚನಾ ನೇಣಿಗೆ ಶರಣು!