ಮುರುಘಾ ಶ್ರೀ ಜೈಲಿಂದ ಬಿಡುಗಡೆ, ಚಿತ್ರದುರ್ಗದಲ್ಲಿ ನೆಲೆ ಇಲ್ಲ, ದಾವಣಗೆರೆಯಲ್ಲಿ ವಾಸ್ತವ್ಯಕ್ಕೆ ತೆರಳಿದ ಶರಣರು!

By Gowthami K  |  First Published Oct 7, 2024, 5:12 PM IST

ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ಮುರುಘಾ ಮಠದ ಶ್ರೀ ಶಿವಮೂರ್ತಿ ಮುರುಘಾ ಶರಣರಿಗೆ ಚಿತ್ರದುರ್ಗದ ನ್ಯಾಯಾಲಯದಿಂದ ಬಿಡುಗಡೆ ಭಾಗ್ಯ ಸಿಕ್ಕಿದೆ.  ಮುರುಘಾ ಶ್ರೀಗಳು ಚಿತ್ರದುರ್ಗದಲ್ಲಿ ಇರದೆ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.


ಅಪ್ರಾಪ್ತರ ಮೇಲೆ ಲೈಂಗಿಕ ಕಿರುಕುಳದ ನೀಡಿದ ಆರೋಪ ಹಿನ್ನೆಲೆ  ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾ ಮಠದ  ಶ್ರೀ ಶಿವಮೂರ್ತಿ ಮುರುಘಾ ಶರಣರ ಬಿಡುಗಡೆಗೆ ಚಿತ್ರದುರ್ಗದ ನ್ಯಾಯಾಲಯ ಆದೇಶಿಸಿದೆ. ಇಂದು ವಿಚಾರಣೆ ನಡೆಸಿದ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯ ಸಾಕ್ಷ ವಿಚಾರಣೆ ಪೂರ್ಣಗೊಂಡ ಹಿನ್ನೆಲೆ ಬಿಡುಗಡೆಗೆ ಆದೇಶಿಸಿದೆ. ಈ ಹಿಂದೆ ಹೈಕೋರ್ಟ್ ಜಾಮೀನು ನೀಡಿತ್ತು. ಆದರೆ ಮೈಸೂರಿನ ಒಡನಾಡಿ ಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಲೇರಿದ ಕಾರಣ ಸಾಕ್ಷ ವಿಚಾರಣೆ ನಡೆಸುವವರೆಗೆ ಬಂಧನದಲ್ಲಿಡಲು ಸುಪ್ರಿಂ ಆದೇಶಿಸಿತ್ತು. ಹೀಗಾಗಿ ಸಂತ್ರಸ್ತೆಯರಿಬ್ಬರು ಸೇರಿ 13 ಮುಖ್ಯ ಸಾಕ್ಷಗಳ ವಿಚಾರಣೆ ಪೂರ್ಣಗೊಂಡ ಕಾರಣ ಶ್ರೀಗಳ ಬಿಡುಗಡೆಯಾಗಿದೆ. ಹೈಕೋರ್ಟ್ ನೀಡಿದ ಷರತ್ತುಬದ್ಧ ಜಾಮೀನಿನ್ವಯ ಬಿಡುಗಡೆಯಾಗಿದೆ. ಪ್ರಕರಣದಲ್ಲಿ ಮುರುಘಾ ಶ್ರೀ ಒಟ್ಟು 2 ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದರು.

ಬಿಡುಗಡೆ ಬಳಿಕ ಚಿತ್ರದುರ್ಗ ಜಿಲ್ಲೆ ವ್ಯಾಪ್ತಿಯಲ್ಲಿ ಮುರುಘಾಶ್ರೀ ಇರುವಂತಿಲ್ಲ ಹೀಗಾಗಿ ಮುರುಘಾ ಮಠಕ್ಕೆ ಹೋಗಲು ಅನುಮತಿ ಇಲ್ಲದ ಕಾರಣ ಚಿತ್ರದುರ್ಗ ಜೈಲಿನಿಂದ ಬಿಡುಗಡೆಯಾಗಿ ದಾವಣಗೆರೆ ಮಠಕ್ಕೆ ತೆರಳಿದ್ದಾರೆ. ದಾವಣಗೆರೆಯ ಶಿವಯೋಗಿ ಮಂದಿರಕ್ಕೆ ತೆರಳಿ ಅಲ್ಲಿ  ವಾಸ್ತವ್ಯ ಮಾಡಲಿದ್ದಾರೆ.

Tap to resize

Latest Videos

undefined

ಹೃದಯದ ಆರೋಗ್ಯಕ್ಕೆ 7 ಅದ್ಭುತ ಹಣ್ಣುಗಳು: ಈ ಫ್ರೂಟ್‌ ತಿನ್ನಿ ಹಾರ್ಟ್ ಅಟ್ಯಾಕ್ ತಪ್ಪಿಸಿ

ಇನ್ನು ಜೈಲಿನಿಂದ ಮುರುಘಾ ಶ್ರೀ ಬಿಡುಗಡೆಯಾಗುತ್ತಿದ್ದಂತೆಯೇ ಕಾರಾಗೃಹ ಬಳಿ ಹಾರ ಹಾಕಿ  ಭಕ್ತರು ಸ್ವಾಗತಿಸಿದರು. ದಾವಣಗೆರೆ ವಿರಕ್ತಮಠದ ಬಸವಪ್ರಭುಶ್ರೀ ಸೇರಿ ಹಲವರು ಉಪಸ್ಥಿತಿ ಇದ್ದರು.   ಬಸವಪ್ರಭುಶ್ರೀ,‌ ಮಠದ ಉತ್ತರಾಧಿಕಾರಿ ಬಸವಾದಿತ್ಯ ಮುರುಘಾಶ್ರೀ ಕಾಲಿಗೆ ನಮಸ್ಕರಿಸಿದರು. ಬಳಿಕ ಶ್ರೀಗಳು ಭಕ್ತರತ್ತ ಕೈಬೀಸಿ ದಾವಣಗೆರೆಗೆ  ತೆರಳಿದರು. 

ಬಿಡುಗಡೆ ಬಳಿಕ ಹೇಳಿಕೆ ನೀಡಿದ ಮುರುಘಾ ಶ್ರೀ, ನಮ್ಮ ವಿರುದ್ಧದ ಪ್ರಕರಣದ ಬಗ್ಗೆ ಕಾನೂನು ಹೋರಾಟ ನಡೆಸುತ್ತೇವೆ. ಸತ್ಯಕ್ಕೆ ಜಯ ಸಿಗುತ್ತದೆಂಬ ನಿರೀಕ್ಷೆ ನಮಗಿದೆ. ಬಸವೇಶ‌ ಮತ್ತು ಮುರುಘೇಶನ ಆಶೀರ್ವಾದದಿಂದ. ಇಂದು ಬಂಧೀಖಾನೆಯಿಂದ ನಾವು ಬಿಡುಗಡೆ ಆಗಿದ್ದೇವೆ. ದಾವಣಗೆರೆಯ ಶಿವಯೋಗಿ ಆಶ್ರಮಕ್ಕೆ ಹೋಗುತ್ತೇವೆ. ಮುರುಘಾಮಠದಲ್ಲಿ ಶರಣ ಸಂಸ್ಕೃತಿ ಉತ್ಸವ ವೇಳೆ ಬಿಡುಗಡೆಗೊಂಡಿದ್ದೇವೆ. ನೋಡೋಣ ಮುಂದೆ ವಿಚಾರ ಮಾಡಿ ಹೆಜ್ಜೆ ಇಡೋಣ. ಜೈಲಿನ ಅನುಭವದ ಬಗ್ಗೆ ಮುಂದೆ ಹೇಳುತ್ತೇವೆ. ಇದು ಸಕಾಲ ಅಲ್ಲ, ಮೌನ ವಹಿಸುವಂತ ಕಾಲವಿದು ಎಂದರು. 

ಇನ್ನು ದಾವಣೆಗೆರೆಗೆ ತಲುಪಿದ ಶಿವಮೂರ್ತಿ ಶರಣರನ್ನು ವಿರಕ್ತ ಮಠದ ಸ್ವಾಮೀಜಿಗಳು, ಮಠದ ಭಕ್ತರು ಬರಮಾಡಿಕೊಂಡರು. ಜಯದೇವ ಸರ್ಕಲ್ ಬಳಿ ಇರುವ ಶಿವಯೋಗಿ ಮಂದಿರಕ್ಕೆ ಭೇಟಿ ನೀಡಿ ಜಯದೇವ ಶ್ರೀಗಳ ಗದ್ದುಗೆ ಗೆ ಪೂಜೆ ಸಲ್ಲಿಸಿದರು. ಷರತ್ತು ಬದ್ದ ಜಾಮೀನಿನ ಮೇಲೆ ಎರಡನೇ ಬಾರಿ ಬಿಡುಗಡೆಯಾಗಿರುವ ಮುರುಘಾ ಶ್ರೀ ಈ ಮಠಕ್ಕೆ ಎರಡನೇ ಬಾರಿ ವಾಸ್ತವ್ಯಕ್ಕೆ ಬರುತ್ತಿದ್ದಾರೆ.

ಪವನ್ ಕಲ್ಯಾಣ್ ನಿಜವಾದ ಹೆಸರೇನು? ತಾಯಿ ಅಂಜನಾ ದೇವಿ ಬಹಿರಂಗಪಡಿಸಿದ ಕುತೂಹಲಕಾರಿ ಕಥೆ

2022ರ ಆಗಸ್ಟ್ 26ರಂದು ಮುರುಘಾಶ್ರೀ ವಿರುದ್ಧ ಮೊದಲ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಸೆ.1ರಿಂದ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ನಂತರ 2022 ರ ಅಕ್ಟೋಬರ್ 13 ರಂದು 2ನೇ ಪೋಕ್ಸೋ ಕೇಸ್ ದಾಖಲಾಗಿತ್ತು. ಮೊದಲ ಪೋಕ್ಸೋ ಪ್ರಕರಣದಲ್ಲಿ ಹೈಕೋರ್ಟ್ ನ.3ರಂದು ಜಾಮೀನು ನೀಡಿತ್ತು. ಹೈಕೋರ್ಟ್ ನೀಡಿದ ಜಾಮೀನು ಪ್ರಶ್ನಿಸಿ ಮೈಸೂರಿನ ಒಡನಾಡಿ ಸಂಸ್ಥೆಯವರು ಸುಪ್ರಿಂ ಕೋರ್ಟ್ ಮೆಟ್ಟಿಲೇರಿದ್ದರು. ಪರಿಣಾಮ ಸುಪ್ರೀಂಕೋರ್ಟ್ ಜಾಮೀನು ರದ್ದು ಪಡಿಸಿ ನ್ಯಾಯಾಂಗ ಬಂಧನದಲ್ಲಿರಿಸಿ ವಿಚಾರಣೆ ನಡೆಸಲು ಸೂಚಿಸಿತ್ತು. ಬೆಂಗಳೂರಿನಿಂದ ವಕೀಲ ಸಿ.ವಿ. ನಾಗೇಶ್ ಬಂದು ಸ್ವಾಮೀಜಿ ಪರ ವಾದ ನಡೆಸಿದರು. ಸಂತ್ರಸ್ತೆ ಕ್ರಾಸ್ ಎಕ್ಸಾಮಿನೇಷನ್ ಕೂಡ ಮುಗಿಸಿದರು. 

click me!