Namo Bharat Rapid Rail: ಬೆಂಗಳೂರು, ಮೈಸೂರು, ತುಮಕೂರಿಗೆ ಬರಲಿದೆ ನಮೋ ಭಾರತ್‌ ರಾಪಿಡ್‌ ರೈಲ್‌!

By Santosh Naik  |  First Published Oct 7, 2024, 4:01 PM IST

ಬೆಂಗಳೂರು, ಮೈಸೂರು ಹಾಗೂ ತುಮಕೂರು ನಡುವಿನ ಕನೆಕ್ಟಿವಿಟಿಯನ್ನು ಹೆಚ್ಚಿಸುವ ಸಲುವಾಗಿ, ಈ ನಗರಗಳು ನಮೋ ಭಾರತ್‌ ರಾಪಿಡ್‌ ರೈಲ್‌ ವ್ಯವಸ್ಥೆಯನ್ನು ಪಡೆದುಕೊಳ್ಳಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.


ಬೆಂಗಳೂರು (ಅ.7): ಇಂಟರ್‌ಸಿಟಿ ಸಂಪರ್ಕವನ್ನು ಹೆಚ್ಚಿಸುವ ಮಹತ್ವದ ಕ್ರಮದಲ್ಲಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಬೆಂಗಳೂರು, ಮೈಸೂರು ಮತ್ತು ತುಮಕೂರುಗಳನ್ನು ಸಂಪರ್ಕಿಸಲು ನಮೋ ಭಾರತ್ ರಾಪಿಡ್ ರೈಲು ವ್ಯವಸ್ಥೆಯನ್ನು ಪರಿಚಯಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಈ ಬೆಳವಣಿಗೆಯು ಪ್ರಾದೇಶಿಕ ಸಾರಿಗೆಯನ್ನು ಪರಿವರ್ತಿಸಲು ಮತ್ತು ಕರ್ನಾಟಕದ ಈ ಪ್ರಮುಖ ನಗರ ಕೇಂದ್ರಗಳ ನಡುವೆ ಆರ್ಥಿಕ ಸಂಬಂಧಗಳನ್ನು ಹೆಚ್ಚಿಸಲು ಸಾಧ್ಯವಾಗಲಿದೆ ಎಂದಿದ್ದಾರೆ. ನಮೋ ಭಾರತ್ ರಾಪಿಡ್ ರೈಲ್ ಅನ್ನು ಹಿಂದೆ ವಂದೇ ಭಾರತ್ ಮೆಟ್ರೋ ಎಂದು ಕರೆಯಲಾಗುತ್ತಿತ್ತು, ಇದನ್ನು ಕಡಿಮೆ-ದೂರ ಇಂಟರ್‌ಸಿಟಿ ಪ್ರಯಾಣಕ್ಕಾಗಿಯೇ ವಿನ್ಯಾಸ ಮಾಡಲಾಗಿದೆ. ಸಾಮಾನ್ಯವಾಗಿ 100-250 ಕಿಮೀ ದೂರ ಕ್ರಮಿಸಲು ಇದನ್ನು ರಚಿಸಲಾಗಿದೆ. ಸಚಿವ ವೈಷ್ಣವ್ ಅವರು ಬೆಂಗಳೂರು-ಮೈಸೂರು ಮಾರ್ಗ (135 ಕಿಮೀ) ಮತ್ತು ಬೆಂಗಳೂರು-ತುಮಕೂರು ಮಾರ್ಗಕ್ಕೆ (70 ಕಿಮೀ) ಈ ರೈಲು ವ್ಯವಸ್ಥೆ ಅತ್ಯುತ್ತಮವಾಗಿದ್ದು, ದಕ್ಷವಾಗಿ ಸೇವೆ ನೀಡಲು ಸಾಧ್ಯವಾಗಲಿದೆ ಎಂದಿದ್ದಾರೆ.

ಭವಿಷ್ಯದ ಯೋಜನೆಗಳು: ಅಹಮದಾಬಾದ್ ಮತ್ತು ಭುಜ್ ನಡುವೆ ಯಶಸ್ವಿಯಾಗಿ ಅನುಷ್ಠಾನ ಮಾಡಲಾಗಿದೆ. ಸಚಿವರು, ಬೆಂಗಳೂರು ಪ್ರದೇಶಕ್ಕೆ ಹಂತ ಹಂತದ ವಿಧಾನವನ್ನು ವಿವರಿಸಿದರು. ಯೋಜನೆಯು ಮೊದಲ ಕೆಲವು ರೈಲುಗಳನ್ನು ಸುಮಾರು ಒಂದು ವರ್ಷದವರೆಗೆ ನಿರ್ವಹಿಸುತ್ತದೆ, ನಂತರ ಇತರ ನಗರಗಳಿಗೆ ಸೇವೆಗಳನ್ನು ವಿಸ್ತರಿಸಲು ದೊಡ್ಡ ಪ್ರಮಾಣದ ಪ್ರೊಡಕ್ಷನ್‌ ಒಳಗೊಂಡಿರುತ್ತದೆ.

ಉಪನಗರ ವಿಸ್ತರಣೆ ಮತ್ತು ರೈಲ್ವೆ ಮಂಡಳಿಯ ನಿಲುವು: ಬೆಂಗಳೂರಿನ ಉಪನಗರ ರೈಲ್ವೆ ಯೋಜನೆಯ ಅನುಷ್ಠಾನ ಸಂಸ್ಥೆಯಾದ K-RIDE, ಕೋಲಾರ, ಹೊಸೂರು ಮತ್ತು ಚಿಕ್ಕಬಳ್ಳಾಪುರದಂತಹ ನೆರೆಯ ನಗರಗಳಿಗೆ ಸೇವೆಗಳನ್ನು ವಿಸ್ತರಿಸಲು ಪ್ರಸ್ತಾಪ ಮಾಡಿದ್ದರೆ, ರೈಲ್ವೆ ಮಂಡಳಿಯು ಇದನ್ನು ತಿರಸ್ಕರಿಸಿದೆ. ಅದರ ಬದಲು ಲೇನ್ ದ್ವಿಗುಣ,  ರೈಲು ವೇಗವನ್ನು ಹೆಚ್ಚಿಸುವುದು ಮತ್ತು ವಂದೇ ಭಾರತ್ ಪರಿಚಯಿಸುವ ಪರವಾಗಿ ಮಾತನಾಡಿದೆ. ಉಪನಗರ ಪ್ರಯಾಣವನ್ನು ಹೆಚ್ಚಿಸಲು ಮೆಟ್ರೋ ರೈಲುಗಳು ಪ್ರಸ್ತಾಪಿಸಿದೆ.

ವೃತ್ತಾಕಾರದ ರೈಲ್ವೆ ಜಾಲ: ವೈಷ್ಣವ್ ಅವರು ಬೆಂಗಳೂರಿಗೆ ಪ್ರಸ್ತಾವಿತ ವೃತ್ತಾಕಾರದ ರೈಲ್ವೆ ಜಾಲದ ಬಗ್ಗೆ ಅಪ್‌ಡೇಟ್‌ಅನ್ನೂ ನೀಡಿದ್ದಾರೆ. 23,000 ಸಾವಿರ ಕೋಟಿ ರೂಪಾಯಿ ಯೋಜನೆಗೆ ವಿವರವಾದ ಯೋಜನಾ ವರದಿ (ಡಿಪಿಆರ್) ಡಿಸೆಂಬರ್ 2024 ರ ವೇಳೆಗೆ ಅಂತಿಮಗೊಳ್ಳುವ ನಿರೀಕ್ಷೆಯಿದೆ. 287 ಕಿಮೀ ವ್ಯಾಪ್ತಿಯ ಈ ನೆಟ್‌ವರ್ಕ್ ಬೆಂಗಳೂರಿನ ಸುತ್ತಮುತ್ತಲಿನ ವಿವಿಧ ಉಪನಗರಗಳನ್ನು ಸಂಪರ್ಕಿಸುತ್ತದೆ, ನಗರದ ರೈಲು ಸಾಮರ್ಥ್ಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಮತ್ತು ಅಸ್ತಿತ್ವದಲ್ಲಿರುವ ಅಡೆತಡೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ.

Shivamogga: ಶಿವಮೊಗ್ಗಕ್ಕೆ ಬರಲಿದೆ ವಂದೇ ಭಾರತ್‌ ರೈಲು!

ವಿಮಾನ ನಿಲ್ದಾಣ ಸಂಪರ್ಕಕ್ಕೆ ವ್ಯವಸ್ಥೆ: ವಿಮಾನ ನಿಲ್ದಾಣದ ಸಂಪರ್ಕವನ್ನು ಸುಧಾರಿಸುವ ಕ್ರಮದಲ್ಲಿ, ಸಚಿವರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹಾಲ್ಟ್‌ ಸ್ಟೇಷನ್‌ಅನ್ನು ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶಕ್ಕೆ ಹತ್ತಿರಕ್ಕೆ ಸ್ಥಳಾಂತರಿಸುವ ಯೋಜನೆಯನ್ನು ಪ್ರಕಟಿಸಿದರು. ಈ ಬದಲಾವಣೆಯು ಪ್ರಯಾಣಿಕರಿಗೆ ಹೆಚ್ಚು ಅನುಕೂಲಕರ ಪ್ರವೇಶವನ್ನು ಒದಗಿಸುವ ಗುರಿಯನ್ನು ಹೊಂದಿದೆ, ಪ್ರಕ್ರಿಯೆಯನ್ನು ತ್ವರಿತಗೊಳಿಸಲು ವಿಮಾನ ನಿಲ್ದಾಣದ ಅಧಿಕಾರಿಗಳೊಂದಿಗೆ ಆರಂಭಿಕ ಮಾತುಕತೆಗಳು ಪ್ರಾರಂಭವಾಗಲಿವೆ.

Tap to resize

Latest Videos

ಭಾರತೀಯ ರೈಲ್ವೆ ಸೂಪರ್ ಆ್ಯಪ್, ಒಂದರಲ್ಲಿಯೇ ಪ್ರಯಾಣಿಕರಿಗೆ ಸಿಗುತ್ತೆ ಎಲ್ಲಾ ಸೇವೆ

ನಮೋ ಭಾರತ್ ರಾಪಿಡ್ ರೈಲು ವ್ಯವಸ್ಥೆ ಮತ್ತು ಮತ್ತು ವೃತ್ತಾಕಾರದ ರೈಲ್ವೆ ಜಾಲದ ಅಭಿವೃದ್ಧಿಯು ಬೆಂಗಳೂರಿನ ಸಾರಿಗೆ ವಿಕಾಸದಲ್ಲಿ ಮಹತ್ವದ ಹೆಜ್ಜೆಗಳನ್ನು ಗುರುತಿಸುತ್ತದೆ. ಈ ಉಪಕ್ರಮಗಳು ಇಂಟರ್‌ಸಿಟಿ ಮತ್ತು ಇಂಟ್ರಾಸಿಟಿ ಸಂಪರ್ಕವನ್ನು ವರ್ಧಿಸಲು ಭರವಸೆ ನೀಡುವುದಲ್ಲದೆ, ಸುಸ್ಥಿರ ನಗರಾಭಿವೃದ್ಧಿ ಮತ್ತು ಪ್ರದೇಶದ ಆರ್ಥಿಕ ಬೆಳವಣಿಗೆಯ ವಿಶಾಲ ಗುರಿಗಳೊಂದಿಗೆ ಹೊಂದಾಣಿಕೆ ಮಾಡುತ್ತವೆ.

click me!