ಎಲ್ಲ ವೈದ್ಯರು ಜೆನರಿಕ್ ಔಷಧಿ ಬರೆಯಲಿ

By Web DeskFirst Published Oct 22, 2018, 8:07 PM IST
Highlights

ಒಂದು ಬಾರಿ ಕಾಣಿಸಿಕೊಂಡ ನಂತರ ಉಲ್ಬಣಗೊಳ್ಳುವ ರೋಗದಲ್ಲಿ ಕ್ಯಾನ್ಸರ್ ಸಹ ಒಂದು. ಪ್ರತಿ ವರ್ಷಕ್ಕೆ 5 ಲಕ್ಷ ಗ್ರಾಮೀಣ ಭಾಗದ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಸಾವಿಗೀಡಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಅತ್ಯಗತ್ಯವಾಗಿದೆ.

ಹುಬ್ಬಳ್ಳಿ[ಅ.22]: ಮಹಾನಗರದಲ್ಲಿ ಒಟ್ಟು ಇಪ್ಪತ್ತೈದು ಜೆನರಿಕ್ ಔಷಧಿ ಕೇಂದ್ರಗಳಿದ್ದು, ಕೆಲವೇ ಕೆಲವು ವೈದ್ಯರು ಮಾತ್ರ ಜೆನರಿಕ್ ಔಷಧಿಗಳನ್ನು ಬರೆದುಕೊಡುತ್ತಾರೆ. ಹೀಗಾಗಿ ಎಲ್ಲ ವೈದ್ಯರೂ ಜೆನರಿಕ್ ಔಷಧಿಗಳನ್ನು ಬರೆಯಬೇಕು ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದರು.

ನವನಗರದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಭಾನುವಾರ ನಡೆದ ನೋವು ಉಪಶಮನಗೊಳಿಸುವ ವಿಶ್ರಾಂತಿಧಾಮದ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಕಿಮ್ಸ್ ನಲ್ಲಿ ತಲೆಯೆತ್ತಲಿರುವ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆ ಕಟ್ಟಡಕ್ಕೆ ಮೊದಲ ಬಾರಿಗೆ ಕೇಂದ್ರ ಸರ್ಕಾರದಿಂದ 100 ಕೋಟಿ ರೂ. ಅನುದಾನ ತರಲಾಗಿದೆ. ಅದೇ ರೀತಿ ಕ್ಯಾನ್ಸರ್ ಆಸ್ಪತ್ರೆಯಿಂದ ಪ್ರಸ್ತಾವನೆ ಸಲ್ಲಿಸಿದರೆ, ಕೇಂದ್ರದಿಂದ ಅನುದಾನ ತಂದು ಉತ್ತರ ಕರ್ನಾಟಕ ಭಾಗದ ಏಕೈಕ ಕ್ಯಾನ್ಸರ್  ಆಸ್ಪತ್ರೆಯ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಸಂಸದ ಪ್ರಹ್ಲಾದ್ ಜೋಶಿ ಹೇಳಿದರು.

ಒಂದು ಬಾರಿ ಕಾಣಿಸಿಕೊಂಡ ನಂತರ ಉಲ್ಬಣಗೊಳ್ಳುವ ರೋಗದಲ್ಲಿ ಕ್ಯಾನ್ಸರ್ ಸಹ ಒಂದು. ಪ್ರತಿ ವರ್ಷಕ್ಕೆ 5 ಲಕ್ಷ ಗ್ರಾಮೀಣ ಭಾಗದ ಮಹಿಳೆಯರು ಸ್ತನ ಕ್ಯಾನ್ಸರ್‌ನಿಂದ ಸಾವಿಗೀಡಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ರೋಗಿಗಳಿಗೆ ಸಹಾಯವಾಗಲೆಂದು ಕ್ಯಾನ್ಸರ್ ಆಸ್ಪತ್ರೆ ಹಾಗೂ ಮಜೇಥಿಯಾ ಫೌಂಡೇಶನ್ ಸಹಯೋಗದಲ್ಲಿ ಚಿಕಿತ್ಸೆಯೇ ಇರದ ರೋಗಿಗಳಿಗೆ ವಿಶೇಷ ಸೌಕರ್ಯ ಒದಗಿಸುವಲ್ಲಿ ಮುಂದಾಗಿದೆ. ಇದು ಪುಣ್ಯದ ಕೆಲಸ. ರೋಗಿಗಳಿಗೆ ಉತ್ತಮ ಸೌಕರ್ಯ, ಪ್ರೀತಿ ವಿಶ್ವಾಸ ನೀಡಿದರೆ ಸಾಯುವ ನೋವು ಸಹ ಮರೆಯಾಗುವುದು ಎಂದರು.

ಯುವ ಬ್ರಿಗೇಡ್‌ನ ಮುಖಂಡ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸಾವನ್ನು ಸುಂದರಗೊಳಿಸುವುದು ಹೌಸ್‌ಪೈಸ್. ಹೌಸಪೈಸ್ ನಿರ್ಮಾಣ ಕಾರ್ಯಕ್ಕೆ ಕ್ಯಾನ್ಸರ್ ಆಸ್ಪತ್ರೆ ಹಾಗೂ ಮಜೇಥಿಯಾ ಫೌಂಡೇಶನ್ ಜತೆಯಾಗಿ ಮುಂದಾಗಿರುವುದು ಶ್ಲಾಘನೀಯ ಎಂದರು.

ಡಾ. ಆರ್.ಬಿ. ಪಾಟೀಲ, ಡಾ. ಬಿ.ಆರ್. ಪಾಟೀಲ, ಜೀತೇಂದ್ರ ಮಜೇಥಿಯಾ, ಡಾ. ನಿಟಾಲಿ, ಡಾ. ಮಂಜುಳಾ ಹುಗ್ಗಿ, ಸುಭಾಶ್ ಸಿಂಗ್ ಇದ್ದರು.

click me!