ಗಂಗಾವತಿ: ಕೊರೋನಾಗೆ ತಾಯಿ ಬಲಿ, ವೈದ್ಯರಿಗೆ ಪುತ್ರನ ಕೊಲೆ ಬೆದರಿಕೆ

Kannadaprabha News   | Asianet News
Published : Jun 10, 2021, 08:33 AM IST
ಗಂಗಾವತಿ: ಕೊರೋನಾಗೆ ತಾಯಿ ಬಲಿ, ವೈದ್ಯರಿಗೆ ಪುತ್ರನ ಕೊಲೆ ಬೆದರಿಕೆ

ಸಾರಾಂಶ

 * ಕೊಪ್ಪಳ ಜಿಲ್ಲೆಯ ಗಂಗಾವಾತಿ ನಗರದಲ್ಲಿ ನಡೆದ ಘಟನೆ * ಮೇ 19ರಂದು ಮೃತಪಟ್ಟಿದ ಕೊರೋನಾ ಸೋಂಕಿಗೆ ತುತ್ತಾಗಿದ್ದ ಮಹಿಳೆ  * ನಿಮ್ಮ ಕುಟುಂಬದವರನ್ನು ಇಲ್ಲದಂತೆ ಮಾಡುತ್ತೇನೆ 

ಗಂಗಾವತಿ(ಜೂ.10): ಕೋವಿಡ್‌ ಆಸ್ಪತ್ರೆಯಲ್ಲಿ ತನ್ನ ತಾಯಿಗೆ ಸರಿಯಾದ ಚಿಕಿತ್ಸೆ ನೀಡಲಿಲ್ಲ ಎಂದು ಆರೋಪಿಸಿದ ಮೃತಳ ಪುತ್ರ ಇಬ್ಬರು ವೈದ್ಯರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ನಗರದಲ್ಲಿ ನಿನ್ನೆ(ಬುಧವಾರ) ನಡೆದಿದೆ. 

ಕೊರೋನಾ ಸೋಂಕಿಗೆ ತುತ್ತಾಗಿದ್ದ ಮಹಿಳೆ ನಗರದ ಎಂಸಿಎಚ್‌ ಆಸ್ಪತ್ರೆಗೆ ದಾಖಲಾಗಿದ್ದರು. ಅವರು ಮೇ 19ರಂದು ಮೃತಪಟ್ಟಿದ್ದರು. 

ಲಾಕ್‌ಡೌನ್‌ ಎಫೆಕ್ಟ್‌: ಮನೆ ಮನೆಯಲ್ಲಿ ಮದ್ಯ, ಮಾಂಸ ಮಾರಾಟ..!

ಮಹಿಳೆಯ ಪುತ್ರ ಸೈಯದ್‌ ಇಸ್ಮಾಯಿಲ್‌ ವೈದ್ಯಾಧಿಕಾರಿ ಡಾ. ಸಲಾವುದ್ದೀನ್‌ ಖಾಲೀದ್‌ ಮತ್ತು ಡಾ. ರೇಣುಕಾರಾಧ್ಯ ಹಿರೇಮಠ ಎನ್ನುವವರಿಗೆ ಮೊಬೈಲ್‌ ಮೂಲಕ ಬೆದರಿಕೆ ಹಾಕಿ, ನಿಮ್ಮ ಕುಟುಂಬದವರನ್ನು ಇಲ್ಲದಂತೆ ಮಾಡುತ್ತೇನೆ ಎಂದು ಹೇಳಿದ್ದಾನೆ. ಈ ಸಂಬಂಧ ಗಂಗಾವತಿ ನಗರ ಪೊಲೀಸ್‌ ಠಾಣೆಯಲ್ಲಿ ವೈದ್ಯರು ದೂರು ದಾಖಲಿಸಿದ್ದಾರೆ.
 

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!