ದಾವಣಗೆರೆ (ಜೂ.10):‘ಯಡಿಯೂರಪ್ಪ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದಾಗ ನೀವು ಯಾವ ವೇಷ ಹಾಕಿಕೊಂಡಿದ್ದಿರಿ? ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಯಡಿಯೂರಪ್ಪ ವಿರುದ್ಧ ನನ್ನನ್ನು ನೀವು ಎತ್ತಿ ಕಟ್ಟಲಿಲ್ಲವಾ?’ ಇದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪರವಾಗಿ ಶಾಸಕರ ಸಹಿ ಸಂಗ್ರಹ ವಿಚಾರಕ್ಕೆ ಸಂಬಂಧಿಸಿದಂತೆ ತಮ್ಮನ್ನು ಟೀಕಿಸಿರುವ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಶಾಸಕ ಎಂ.ಪಿ.ರೇಣುಕಾಚಾರ್ಯ ನೀಡಿರುವ ತಿರುಗೇಟು.
ಎಲ್ಲೂ ಈಶ್ವರಪ್ಪ ಅವರ ಹೆಸರು ಪ್ರಸ್ತಾಪಿಸದೆ ತೀಕ್ಷ್ಣ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಹುಲಿ ವೇಷ ಎಂಬುದಾಗಿ ನನ್ನ ಬಗ್ಗೆ, ಸಹಿ ಸಂಗ್ರಹದ ಬಗ್ಗೆ ಮಾತನಾಡಿದ್ದೀರಿ.
ರಾಜ್ಯ ಸಂದಿಗ್ಧತೆಗೆ ಸಿಲುಕಿರುವ ಈ ಹೊತ್ತಿನಲ್ಲಿ ಇದೆಂಥ ರಾಜಕೀಯ? ಎಚ್‌ಡಿಕೆ ಕ್ಲಾಸ್ ...
ನೀವು ಚುನಾವಣೆ ಪೂರ್ವದಲ್ಲಿ ಏನು ಮಾಡಿದ್ದಿರಿ ಅಂತಾ ನನಗೂ ಗೊತ್ತಿದೆ. ನನ್ನನ್ನು ಯಡಿಯೂರಪ್ಪ ವಿರುದ್ಧ ಎತ್ತಿ ಕಟ್ಟಿದ್ದೇ ಮರೆತು ಹೋಯ್ತಾ? ರಾಜ್ಯಪಾಲರಿಗೆ ಯಾವ ಕಾರಣಕ್ಕೆ ಪತ್ರ ಬರೆದಿದ್ದಿರಿ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಬಿ ಎಸ್ ಯಡಿಯೂರಪ್ಪ ರಾಜೀನಾಮೆ ವಿಚಾರ ಪ್ರಸ್ತಾಪಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ರಾಜಕೀಯದಲ್ಲಿ ಹಲವು ಚರ್ಚೆಗಳು ಭುಗಿಲೆದ್ದಿವೆ. ಇದೇ ವೇಳೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.