ಹಳೆ ದ್ವೇಷ ಹಿನ್ನೆಲೆ ಕೊಲೆಗೆ ಯತ್ನಿಸಿದ ಇಬ್ಬರು ಯುವಕರನ್ನು ಬಂಧಿಸಲಾಗಿದೆ. ಲಾಂಗು ಮಚ್ಚು ಇರಿಸಿಕೊಂಡು ಬೆದರಿಸುತ್ತಿದ್ದ ಹಿನ್ನೆಲೆ ಕೇಸ್ ದಾಖಲಿಸಲಾಗಿದೆ.
ಚಿಕ್ಕಬಳ್ಳಾಪುರ (ಸೆ.06): ಹಳೆ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಆರೋಪದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವ ಘಟನೆ ಶನಿವಾರ ನಡೆದಿದೆ.
ಬಂಧಿತ ಆರೋಪಿಗಳನ್ನು ನಗರದ ಪ್ರಶಾಂತ ನಗರದ ನಿವಾಸಿ ಪ್ರವೀಣ್ ಹಾಗೂ 16ನೇ ವಾರ್ಡ್‌ನ ರಾಮು ಎಂದು ಗುರುತಿಸಲಾಗಿದೆ. ಇಬ್ಬರು ಸೇರಿ ನಗರದ ಪ್ರಶಾಂತ ನಗರದ ನಿವಾಸಿ ಸೈಯದ್ ಬಿನ್ ಖಾಲದರ್ ಸಾಬ್ ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಹಲ್ಲೆಗೆ ಒಳಗಾಗಿರುವ ಸೈಯದ್‌ನ್ನು ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
ಡ್ರಗ್ಗಿಣಿಗೆ ಬೇಲೋ? ಜೈಲೋ? ಸೋಮವಾರ ನಿರ್ಧಾರವಾಗಲಿದೆ ನಟಿಯ ಭವಿಷ್ಯ..! ...
ಏನಿದು ಘಟನೆ: ಸೈಯದ್ ಹಾಗೂ ರಾಮು ನಡುವೆ ಹಳೆ ದ್ವೇಷ ಇತ್ತು ಎನ್ನಲಾಗಿದೆ. ಈ ಹಿಂದೆ ಸೈಯದ್ ಹಾಗೂ ರಾಮು ಗುಂಪುಗಳ ನಡುವೆ ಜಗಳ ನಡೆದಿತ್ತು. ಈ ವಿಚಾರದಲ್ಲಿ ಬೈಕ್‌ನ್ನು ಸುಟ್ಟು ಹಾಕಲಾಗಿತ್ತು ಎನ್ನಲಾಗಿದೆ. ಇದೇ ವೇಳೆ ನಗರದ ವಾಪಸಂದ್ರದ ಮುಖ್ಯ ರಸ್ತೆಯ ಸಿಟಿಜನ್ ಕ್ಲಬ್ ಸಮೀಪ ಜಗಳ ನಡೆದಿದ್ದು, ಈ ವೇಳೆ ರಾಮು ಆತನ ಸಹಚರರು ಸೇರಿ ಸೈಯದ್ ಮೇಲೆ ಲಾಂಗ್, ಮಚ್ಚಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ತಕ್ಷಣ ಆತನನನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿದ್ದು ಪ್ರಾಣಪಾಯದಿಂದ ಪಾರಾಗಿದ್ದಾನೆ.
ಡ್ರಗ್ಸ್ ಮಾಫಿಯಾ ಹಿಂದೆ ರಾಜಕಾರಣಿ, ಅಧಿಕಾರಿಗಳು ಅಡಗಿದ್ದಾರೆ: ಕೈ ಹಿರಿಯ ನಾಯಕ ಹೊಸ ಬಾಂಬ್ ...
ಇಬ್ಬರ ಬಂಧನ:
ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಠಾಣೆ ಪೊಲೀಸರು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಆರೋಪ ಹಾಗೂ ಕೊಲೆಗೆ ಯತ್ನಿಸಿದ ಆರೋದಡಿ ರಾಮು ಹಾಗೂ ಪ್ರವೀಣ್‌ರನ್ನು ನಗರ ಠಾಣೆ ಪಿಎಸ್‌ಐ ಹೊನ್ನೇಗೌಡ ನೇತೃತ್ವದ ತಂಡ ಬಂಧಿಸಿ ವಿಚಾರಣೆ ನಡೆಸಿದ ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.