'ಮದುವೆಯಾಗಲು ಜಾತಕ ಸರಿ ಇಲ್ಲ..' ಎಂದು ಬಂದ ಯುವತಿಯನ್ನ ಮಂಚದಲ್ಲಿ ಅನುಭವಿಸಿದ ಅರ್ಚಕ ಕೃಷ್ಣರಾವ್‌ ಅರೆಸ್ಟ್‌!

Published : Feb 03, 2026, 09:08 PM IST
Chikkamagaluru

ಸಾರಾಂಶ

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ, ಜಾತಕ ದೋಷ ನಿವಾರಣೆ ಮಾಡುವ ನೆಪದಲ್ಲಿ ದೇವಸ್ಥಾನದ ಅರ್ಚಕನೊಬ್ಬ ಯುವತಿಯ ಮೇಲೆ ನಿರಂತರವಾಗಿ ಅತ್ಯಾ*ರ ಎಸಗಿದ್ದಾನೆ. ಸಂತ್ರಸ್ತೆಯ ದೂರಿನ ಮೇರೆಗೆ ಬಣಕಲ್ ಪೊಲೀಸರು ಆರೋಪಿ ಅರ್ಚಕ ಕೃಷ್ಣರಾವ್‌ನನ್ನು ಬಂಧಿಸಿದ್ದಾರೆ.

ಮೂಡಿಗೆರೆ (ಫೆ.3): ಧರ್ಮ ಮತ್ತು ನಂಬಿಕೆಯ ಹೆಸರಿನಲ್ಲಿ ಯುವತಿಯ ಮೇಲೆ ದೇವಸ್ಥಾನದ ಅರ್ಚಕನೊಬ್ಬ ನಿರಂತರವಾಗಿ ಅತ್ಯಾ*ರ ಎಸಗಿರುವ ಲಜ್ಜೆಗೆಟ್ಟ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಜಾತಕ ದೋಷದ ಹೆಸರಲ್ಲಿ ಯುವತಿಯನ್ನು ನಂಬಿಸಿ ವಂಚಿಸಿದ ಅರ್ಚಕ ಕೃಷ್ಣರಾವ್ ಎಂಬಾತನನ್ನು ಬಣಕಲ್ ಪೊಲೀಸರು ಬಂಧಿಸಿದ್ದಾರೆ.

ಹೊರಟ್ಟಿ ಗ್ರಾಮದ ಪುರಾತನ ಈಶ್ವರ-ಪಾರ್ವತಿ ದೇವಸ್ಥಾನದ ಅರ್ಚಕನಾಗಿದ್ದ ಕೃಷ್ಣರಾವ್ ಬಳಿ 23 ವರ್ಷದ ಯುವತಿ ತನ್ನ ಮದುವೆ ವಿಚಾರವಾಗಿ ಜಾತಕ ತೋರಿಸಲು ಹೋಗಿದ್ದರು. ಈ ಸಂದರ್ಭವನ್ನು ಬಳಸಿಕೊಂಡ ಅರ್ಚಕ, "'ನಿನ್ನ ಜಾತಕದಲ್ಲಿ ಗಂಭೀರ ದೋಷವಿದೆ, ಅದನ್ನು ಸರಿಪಡಿಸಲು ಪೂಜೆ ಅಥವಾ ತಡೆ ಹೊಡೆಯಬೇಕು' ಎಂದು ಯುವತಿಯನ್ನು ನಂಬಿಸಿದ್ದಾನೆ.

ಹಲವು ಬಾರಿ ಅತ್ಯಾ*ರ ಮಾಡಿದ್ದ ಅರ್ಚಕ

ದೋಷ ನಿವಾರಣೆಯ ಹೆಸರಿನಲ್ಲಿ 2025ರ ನವೆಂಬರ್ 23 ರಿಂದ 2026ರ ಫೆಬ್ರವರಿ 2ರವರೆಗಿನ ಅವಧಿಯಲ್ಲಿ ಯುವತಿಯ ಮೇಲೆ ಅರ್ಚಕ ಹಲವು ಬಾರಿ ಅತ್ಯಾ*ರ ಎಸಗಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಭಕ್ತಿ ಮತ್ತು ನಂಬಿಕೆಯಿಂದ ಹೋದ ಯುವತಿಗೆ ದೇವಸ್ಥಾನದ ಆವರಣದಲ್ಲಿಯೇ ನರಕದರ್ಶನ ಮಾಡಿಸಿದ್ದಾನೆ.

ಅರ್ಚಕನ ಕಾಮದೃಷ್ಠಿ ಮತ್ತು ದೌರ್ಜನ್ಯ ತಾಳಲಾರದೆ ನೊಂದ ಯುವತಿ ಅಂತಿಮವಾಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ತಕ್ಷಣ ಕಾರ್ಯಪ್ರವೃತ್ತರಾದ ಬಣಕಲ್ ಪೊಲೀಸರು ಆರೋಪಿ ಅರ್ಚಕ ಕೃಷ್ಣರಾವ್‌ನನ್ನು ಬಂಧಿಸಿ, ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

PREV
Read more Articles on
click me!

Recommended Stories

ದಿನವೂ 700 ಜನರಿಗೆ ಉಚಿತ ಊಟ ಹಾಕುತ್ತಿದ್ದ ಕಮಲಾಕರ್ ಭಟ್; ಸುಚಿತ್ರಾ ಸಹವಾಸದಿಂದ ಜೈಲೂಟಕ್ಕೆ ತಟ್ಟೆ ಹಿಡಿಬೇಕಾಯ್ತು!
ಬೆಳಗಾವಿಯಲ್ಲಿ ಮರಗಳ ಮಾರಣ ಹೋಮ, ಸೌರ ಯೋಜನೆ ಹೆಸರಲ್ಲಿ ಅರಣ್ಯ ಇಲಾಖೆಗೆ ತಿಳಿಸದೆ ಬರೋಬ್ಬರಿ 40 ಎಕರೆ ಕಾಡು ನಾಶ!