ಚುನಾವಣಾ ಪ್ರಚಾರದಲ್ಲೇ ನಿವೃತ್ತಿ ಘೋಷಿಸಿದ ಎಂಟಿಬಿ

By Kannadaprabha News  |  First Published Nov 30, 2019, 10:00 AM IST

ಚುನಾವಣೆ ಪ್ರಚಾರದ ವೇಳೆಯೇ ಹೊಸಕೋಟೆ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ನಿವೃತ್ತಿ ಘೋಷಿಸಿದ್ದಾರೆ. 


ಸೂಲಿಬೆಲೆ [ನ.30]: ಹೊಸಕೋಟೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ಎಂಟಿಬಿ ನಾಗರಾಜ್‌ ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿದ್ದಾರೆ.

ಹೊಸಕೋಟೆ ತಾಲೂಕು ಸತ್ಯವಾರ ಗ್ರಾಮದಲ್ಲಿ ಚುನಾವಣೆ ಪ್ರಚಾರದ ವೇಳೆ ಮಾಧ್ಯಮದೊಂದಿಗೆ ಮಾತನಾಡಿರುವ ಅವರು, ನಾನು ಮುಂದಿನ ಚುನಾವಣೆಯಲ್ಲಿ ನಿಲ್ಲಲ್ಲು ಸಾಧ್ಯವಿಲ್ಲ. ಈಗ ನನ್ನಗೆ 69 ವರ್ಷ ವಯಸ್ಸು. ಮುಂದಿನ ಚುನಾವಣೆಗೆ ನನ್ನಗೆ 74 ವರ್ಷ ವಯಸ್ಸಾಗುತ್ತೆ. 74 ವರ್ಷ ಆದ ಮೇಲೆ ಕೆಲಸ ಮಾಡೋಕ್ಕೆ ಆಗೋಲ್ಲ. ನಾನು ರಾಜಕೀಯವಾಗಿ ರಿಟರ್ಡ್‌ ಆದ್ರೆ ನನ್ನ ಮಗ ಇದ್ದಾನೆ. ಚುನಾವಣೆಯಲ್ಲಿ ಓಡಾಡುತ್ತಿದ್ದಾನೆ. ಸುಮ್ಮನೆ ಎಂಎಲ್‌ಎ ಆಗಿ ಮನೆಯಲ್ಲಿ ಕುಳಿತುಕೊಳ್ಳಕ್ಕೆ ಎಂಎಲ್‌ಎ ಆಗೋದಿಲ್ಲ. ನನ್ನ ಮುಂದಿನ ತಲೆಮಾರು ನನ್ನ ಮಗ ಇದ್ದಾನೆ ಎಂದು ಹೇಳಿದ್ದಾರೆ.

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಾನು ಯಾವತ್ತು ಯಾರಿಗೂ ಉಂಗುರ, ಬೆಳ್ಳಿ ಇನ್ನೊಂದು ಏನು ಕೊಟ್ಟಿಲ್ಲ. ಬೇರೆ ಯಾರೋ ಮಾತನ್ನು ಕೇಳಿ ಶರತ್‌ ಬಚ್ಚೇಗೌಡ ಕೆಟ್ಟರು. ಇನ್ನೂ 34 ವರ್ಷ ವಯಸ್ಸು. ಒಳ್ಳೆ ಭವಿಷ್ಯ ಇತ್ತು. ಅದನ್ನು ಅವರ ಕೈಯಾರೆ ಅವರೇ ಹಾಳು ಮಾಡಿಕೊಂಡು ಅಷ್ಟೇ. ಈಗ ನಾನು ಚಿನ್ನ ಬೆಳ್ಳಿ ಕೊಟ್ಟೆಅಂತ ಏನೇನೋ ಹೇಳುತ್ತಿದ್ದಾರೆ ಎಂದು ಪಕ್ಷೇತರರ ಅಭ್ಯರ್ಥಿ ಶರತ್‌ ಬಚ್ಚೇಗೌಡರ ಆರೋಪಗಳಿಗೆ ತಿರುಗೇಟು ನೀಡಿದರು.

ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.

click me!