ಯಡಿಯೂರಪ್ಪಗಾಗಿ ರಮೇಶ ಜಾರಕಿಹೊಳಿ‌ ಗೆಲ್ಲಿಸಿ: ಪ್ರಭಾಕರ್ ಕೋರೆ

Published : Nov 30, 2019, 04:39 PM IST
ಯಡಿಯೂರಪ್ಪಗಾಗಿ ರಮೇಶ ಜಾರಕಿಹೊಳಿ‌ ಗೆಲ್ಲಿಸಿ: ಪ್ರಭಾಕರ್ ಕೋರೆ

ಸಾರಾಂಶ

ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ ಅಂತಾ ರಮೇಶ್‌ಗೆ ನಾನು ಹಿಂದೆ ಹೇಳಿದ್ದೆ| ನಾವಿದ್ದ ಕಾಂಗ್ರೆಸ್ ಬೇರೆ ಇತ್ತು, ಈಗ ಬೇರೆ ಕಾಂಗ್ರೆಸ್ ಇದೆ| ರಮೇಶ್ ಜಾರಕಿಹೊಳಿ‌ ಕಾರಣ ಯಡಿಯೂರಪ್ಪ ಮುಖ್ಯಮಂತ್ರಿ ಆದ್ರು| ಪಾಪ ಎಂತಾ ದೊಡ್ಡ ತ್ಯಾಗ ಮಾಡಿದ್ದಾನೆ ರಮೇಶ ಎಂದ ಕೋರೆ| 

ಬೆಳಗಾವಿ(ನ.30): ನನಗೆ ಹಾಗೂ ರಮೇಶ ಜಾರಕಿಹೊಳಿ‌ ಇಬ್ಬರಿಗೂ ವಿರೇಂದ್ರ ಪಾಟೀಲ್ ಅವರು ಕಾಂಗ್ರೆಸ್ ಟಿಕೆಟ್ ಕೊಟ್ಟಿದ್ದರು. ನಾನು‌ ಸದಲಗಾ ಟಿಕೆಟ್ ಕೇಳಿದ್ದೆ, ರಮೇಶ್ ಗೋಕಾಕ ಟಿಕೆಟ್ ಕೇಳಿದ್ದರು. ಇಲ್ಲಿಗೆ ಬರುವಷ್ಟರಲ್ಲಿಯೇ ಟಿಕೆಟ್ ಬದಲಾವಣೆ ಆಗಿತ್ತು, ರಮೇಶ, ನಾನು ಇಬ್ಬರು ಕಾಂಗ್ರೆಸ್‌ನಲ್ಲಿದ್ದವರು, ಕಾಂಗ್ರೆಸ್ ನಲ್ಲಿ ಇರಲು ಸಾಧ್ಯವಿಲ್ಲದೇ ಓಡಿ ಬಂದೆ ಎಂದು ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ ಅವರು ಹೇಳಿದ್ದಾರೆ. 

ಶನಿವಾರ ಜಿಲ್ಲೆಯ ಗೋಕಾಕ್ ನಗರದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ರೈಟ್ ಪರ್ಸನ್ ಇನ್ ರಾಂಗ್ ಪಾರ್ಟಿ ಅಂತಾ ರಮೇಶ್‌ಗೆ ನಾನು ಹಿಂದೆ ಹೇಳಿದ್ದೆ, ನಾವಿದ್ದ ಕಾಂಗ್ರೆಸ್ ಬೇರೆ ಇತ್ತು, ಈಗ ಬೇರೆ ಕಾಂಗ್ರೆಸ್ ಇದೆ. ರಮೇಶ್ ಜಾರಕಿಹೊಳಿ‌ ಕಾರಣ ಯಡಿಯೂರಪ್ಪ ಮುಖ್ಯಮಂತ್ರಿ ಆದ್ರು, ಪಾಪ ಎಂತಾ ದೊಡ್ಡ ತ್ಯಾಗ ಮಾಡಿದ್ದಾನೆ ರಮೇಶ ಎಂದು ಹೇಳಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಯಡಿಯೂರಪ್ಪಗಾಗಿ ರಾಜೀನಾಮೆ ಕೊಟ್ಟು ಬಿಜೆಪಿ ಸೇರಿದ್ದಾರೆ. ನಾನು ರಮೇಶ ಇಬ್ಬರು ಒಂದೇ ಪಕ್ಷದಲ್ಲಿ ಇರೋದು ಖುಷಿಯಾಗಿದೆ. ಅಶೋಕ್ ಪೂಜಾರಿ ನಮ್ಮವರೇ ಆದರೇ ಸಂದರ್ಭ ಇದಲ್ಲ, ಯಡಿಯೂರಪ್ಪಗಾಗಿ ರಮೇಶ ಜಾರಕಿಹೊಳಿ‌ ಗೆಲ್ಲಿಸಿ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗೋಕಾಕ್ ಕ್ಷೇತ್ರಕ್ಕೆ ಖಾಯಂ ಮಂತ್ರಿ ಇಟ್ಟುಕೊಂಡಿದ್ದೀರಿ, ಗೋಕಾಕ್ ಜತೆಗೆ ನಾನು ಕೆಲಸ ಮಾಡಬೇಕು ಎಂದು ಹೇಳಿದ್ದಾರೆ. 

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.
 

PREV
click me!

Recommended Stories

ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ
ತಂತ್ರಜ್ಞಾನದ ನೆರವಿನಿಂದ ಜೈಲುಗಳಲ್ಲಿ ಸುಧಾರಣೆ ತರಲು ಅಲೋಕ್ ಕುಮಾರ್ ನೇತೃತ್ವ