ಮುಸ್ಲಿಮರ ತುಷ್ಟಿಕರಣಕ್ಕೆ ಕೇಸ್ ವಾಪಸ್: ಜಗದೀಶ ಶೆಟ್ಟರ್‌

By Kannadaprabha News  |  First Published Oct 13, 2024, 8:12 AM IST

ರೈತರ ಮೇಲಿನ ಪ್ರಕರಣ ಮರಳಿ ಪಡೆದರೆ ಸರಿ. ಆದರೆ, ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣ ಹಿಂಪಡೆಯುವುದು ಸರಿಯಲ್ಲ. ಇದು ಮತ್ತಷ್ಟು ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವೂ ಆಗಲಿದೆ ಎಂದು ಎಚ್ಚರಿಸಿದ ಮಾಜಿ ಮುಖ್ಯಮಂತ್ರಿ, ಬೆಳಗಾವಿ ಬಿಜೆಪಿ ಸಂಸದ ಜಗದೀಶ ಶೆಟ್ಟರ್‌
 


ಧಾರವಾಡ(ಅ.13): ಹಳೇ ಹುಬ್ಬಳ್ಳಿ ಗಲಭೆ ಪ್ರಕರಣ ಹಿಂಪಡೆದ ರಾಜ್ಯ ಸರ್ಕಾರದ ನಿರ್ಧಾರ ಅಕ್ಷಮ್ಯ. ಯಾವ ಪ್ರಕರಣ ಮರಳಿ ಪಡೆಯಬೇಕು ಎಂಬ ಕನಿಷ್ಠ ಜ್ಞಾನವೂ ಕೈ ಸರ್ಕಾರಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಬೆಳಗಾವಿ ಬಿಜೆಪಿ ಸಂಸದ ಜಗದೀಶ ಶೆಟ್ಟರ್‌ ಕಿಡಿ ಕಾರಿದರು. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಮೇಲಿನ ಪ್ರಕರಣ ಮರಳಿ ಪಡೆದರೆ ಸರಿ. ಆದರೆ, ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣ ಹಿಂಪಡೆಯುವುದು ಸರಿಯಲ್ಲ. ಇದು ಮತ್ತಷ್ಟು ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವೂ ಆಗಲಿದೆ ಎಂದು ಎಚ್ಚರಿಸಿದರು. 

Tap to resize

Latest Videos

undefined

ಮುಡಾ ಹಗರಣ: ಭಂಡತನವಿದ್ದರೆ ಏನು ಮಾಡಲು ಸಾಧ್ಯ, ಜಗದೀಶ ಶೆಟ್ಟರ

ಪ್ರಕರಣ ಹಿಂಪಡೆಯುವ ಮುನ್ನ ಕೈ ಸರ್ಕಾರ ಯೋಚಿಸದೆ, ಮುಸ್ಲಿಮರ ತುಷ್ಟಿಕ ರಣ ಮಾಡಿದೆ. ಸೂಕ್ಷ್ಮವಾಗಿ ಗಮನಿಸಿದರೆ ಪ್ರಕರಣ ಹಿಂಪಡೆಯಲು ಬರುವುದಿಲ್ಲ. ಆದಾಗ್ಯೂ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. ಇದು ಕಾನೂನು ಬಾಹಿರವಾಗಿದೆ ಎಂದರು. 

ಪ್ರಕರಣ ಹಿಂಪಡೆದ ಬಗ್ಗೆ ಕೋರ್ಟ್‌ನಲ್ಲಿ ಯಾರಾದರೂ ಪ್ರಶ್ನಿಸಿದರೆ ಈ ನಿರ್ಧಾರ ಗಟ್ಟಿಯಾಗಿ ನಿಲ್ಲುವುದಿಲ್ಲ. ರಾಜಕೀಯ ಲಾಭಕ್ಕಾಗಿ ವ್ಯವಸ್ಥೆ ಹದಗೆಡಿಸುವುದು ಕಾಂಗ್ರೆಸ್ ಹುನ್ನಾರವಿದೆ. ಕೈ ಸರ್ಕಾರ ತಪ್ಪು ನಿರ್ಧಾರ ಕೈಗೊಂಡಿದೆ ಎಂದು ಹೇಳಿದರು. 

ಅನೇಕ ವರ್ಷಗಳಿಂದ ರೌಡಿಶೀಟರ್‌ ಇದ್ದಾರೆ. ಅವರು ಪರಿವರ್ತನೆ ಆದಾಗ್ಯೂ ರೌಡಿ ಶೀಟರ್‌ ಪಟ್ಟಿಯಲ್ಲಿಯೇ ಮುಂದುವರಿದಿದೆ. ಕೆಲವರು ಅಮಾಯಕರಿದ್ದು, ಅವರನ್ನು ರೌಡಿಶೀಟರ್ ನಿಂದ ತೆಗೆದು, ಒಳ್ಳೆಯದು ಮಾಡಲಿ ಎಂದು ಸಲಹೆ ನೀಡಿದರು. ಅದು ಬಿಟ್ಟು ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ದಾಳಿ ಜತೆ ಪೊಲೀಸರ ಮೇಲೆ ಗುಂಡಾಗಿರಿ ಮಾಡಿದ ಪ್ರಕರಣ ಹಿಂಪಡೆದ ಸರ್ಕಾರದ ನಿರ್ಧಾರ ನಾಚಿಗೇಡು ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದರು.
 

click me!