ಅಧಿಕಾರ ಸಿಕ್ಕಿತೆಂದು ದರ್ಬಾರ್‌ ಮಾಡ್ಬೇಡಿ: ಮಹಿಳಾ ಮೇಯರ್‌ಗೆ ಸಂಸದ ಕಿವಿಮಾತು

By Kannadaprabha News  |  First Published Jan 31, 2020, 7:29 AM IST

ತುಮಕೂರು ನಗರಸಭೆಯ ಮೇಯರ್ ಆಗಿ ಫರೀದ ಬೇಗಂ ಹಾಗೂ ಉಪಮೇಯರ್‌ ಶಶಿಕಲಾ ಆಯ್ಕೆಯಾಗಿದ್ದು, ಇವರಿಗೆ ಸಂಸದ ಜಿ.ಎಸ್‌. ಬಸವರಾಜು ಶುಭಕೋರಿದ್ದಾರೆ. ಹಾಗೆಯೇ ಆಡಳಿತ ಸಂಬಂಧ ಕಿವಿಮಾತು ಹೇಳಿದ್ದಾರೆ.


ತುಮಕೂರು(ಜ.31): ತುಮಕೂರು ನಗರಸಭೆಯ ಮೇಯರ್ ಆಗಿ ಫರೀದ ಬೇಗಂ ಹಾಗೂ ಉಪಮೇಯರ್‌ ಶಶಿಕಲಾ ಆಯ್ಕೆಯಾಗಿದ್ದು, ಇವರಿಗೆ ಸಂಸದ ಜಿ.ಎಸ್‌. ಬಸವರಾಜು ಶುಭಕೋರಿದ್ದಾರೆ. ಹಾಗೆಯೇ ಆಡಳಿತ ಸಂಬಂಧ ಕಿವಿಮಾತು ಹೇಳಿದ್ದಾರೆ.

ಅಧಿಕಾರ ಸಿಕ್ಕಿತೆಂದು ದರ್ಬಾರ್‌ ಮಾಡದೆ, ಹೇಳಿಕೆ ಮಾತು ಕೇಳದೆ ಜನರ ಸಮಸ್ಯೆಗಳನ್ನು ಅರಿತು ಕೆಲಸ ಮಾಡಬೇಕೆಂದು ನೂತನವಾಗಿ ಆಯ್ಕೆಯಾದ ಮೇಯರ್‌ ಫರೀದ ಬೇಗಂ ಹಾಗೂ ಉಪಮೇಯರ್‌ ಶಶಿಕಲಾ ಅವರಿಗೆ ಶುಭ ಕೋರಿ ಸಂಸದ ಜಿ.ಎಸ್‌. ಬಸವರಾಜು ಸಲಹೆ ನೀಡಿದ್ದಾರೆ.

Tap to resize

Latest Videos

undefined

ಹೆಂಡತಿಗೆ ಪ್ರವಾಸದ ಹುಚ್ಚು-ಗಂಡನಿಗೆ ಬೆಟ್ಟಿಂಗ್ ಗೀಳು; ಉಗುರು ಕಿತ್ತು ಗಂಡನ ಕೊಂದ ಸುಂದರಿ

ಪಾಲಿಕೆಯು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚಿನ ಸಸವಲತ್ತುಗಳನ್ನು ಪಡೆದುಕೊಂಡು ಜನ ಮೆಚ್ಚುವಂತೆ ಅತ್ಯುತ್ತಮವಾಗಿ ಕೆಲಸ ಮಾಡಬೇಕು. ಪಕ್ಷಭೇದ ಮರೆತು ಮೇಯರ್‌, ಉಪಮೇಯರ್‌ ಹಾಗೂ ಸದಸ್ಯರೆಲ್ಲ ಒಂದಾಗಿ ನಗರದ ಅಭಿವೃದ್ಧಿಗೆ ಶ್ರಮಿಸಬೇಕೆಂದರು.

ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ:

ಮುಂದಿನ 1 ವರ್ಷಗಳ ಕಾಲ ಹರಿಯುವ ನೀರಿನಂತೆ ಕೆಲಸ ಮಾಡಬೇಕು. ಸದಸ್ಯರೆಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ವಾರ್ಡುಗಳ ಅಭಿವೃದ್ಧಿ ಕೆಲಸಗಳಿಗೆ ಸಮಾನವಾಗಿ ಅನುದಾನ ಹಂಚಿಕೆ ಮಾಡಬೇಕು. ನಗರದಲ್ಲಿರುವ ಮರಗಳನ್ನು ಕತ್ತರಿಸದೆ ಹೊಸದಾಗಿ ಗಿಡಗಳನ್ನು ನೆಡುವ ಮೂಲಕ ಹಸಿರು ತುಮಕೂರನ್ನಾಗಿ ನಿರ್ಮಾಣ ಮಾಡಬೇಕು ಎಂದು ನೂತನ ಮೇಯರ್‌, ಉಪಮೇಯರ್‌ಗಳಿಗೆ ಮಾರ್ಗದರ್ಶನ ನೀಡಿದರು.

click me!