ಹಾವೇರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡದಿರುವುದರಿಂದ ನಿರಾಸೆಯಾಗಿದೆ: ಸಂಸದ ಬೊಮ್ಮಾಯಿ

Published : Apr 24, 2026, 06:43 PM IST
basavaraj bommai

ಸಾರಾಂಶ

ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಆಗ ಸಕಾರಾತ್ಮವಾಗಿ ಸ್ಪಂದನೆ ಮಾಡಿದ್ದ ಅವರು, ಬಜೆಟ್‌ನಲ್ಲಿ ಘೋಷಣೆ ಮಾಡದ್ದಕ್ಕೆ ನಿರಾಸೆಯಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು.

ಹಾವೇರಿ (ಏ.24): ಹಾವೇರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನೀಡದಿರುವುದಕ್ಕೆ ಜಿಲ್ಲೆಯ ಜನತೆಗೆ, ಎಲ್ಲ ಪಕ್ಷದ ನಾಯಕರಿಗೆ ನಿರಾಸೆಯಾಗಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಏಕೆ ಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೆವು. ಆಗ ಸಕಾರಾತ್ಮವಾಗಿ ಸ್ಪಂದನೆ ಮಾಡಿದ್ದ ಅವರು, ಬಜೆಟ್‌ನಲ್ಲಿ ಘೋಷಣೆ ಮಾಡದ್ದಕ್ಕೆ ನಿರಾಸೆಯಾಗಿದೆ ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಬೇಸರ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾವೇರಿಗೆ ಮೆಡಿಕಲ್ ಕಾಲೇಜು, ಯುನಿವರ್ಸಿಟಿ, ಎಂಜಿನಿಯರಿಂಗ್ ಕಾಲೇಜು, ಲಾ ಕಾಲೇಜು ಮಾಡಿದ್ದು ಬಿಜೆಪಿ, ನಮ್ಮ ಜಿಲ್ಲೆ ರಾಷ್ಟ್ರೀಯ ಹೆದ್ದಾರಿಯಲ್ಲಿದೆ. ಏನಾದರೂ ಅನಾಹುತ ಆದರೆ ಬಹಳ ಜನರು ಹುಬ್ಬಳ್ಳಿ ಅಥವಾ ದಾವಣಗೆರೆಗೆ ಹೋಗಬೇಕು. ಆಗ ಬಹಳಷ್ಟು ಜನ ಜೀವ ಕಳೆದುಕೊಳ್ಳುತ್ತಾರೆ. ಹೀಗಾಗಿ ಸೂಪರ್ ಸ್ಪೆಷಾಲಿಟಿ ಆಗಬೇಕೆಂದು ಹೇಳಿದ್ದೇವು.

ಅವರದು ಕೇವಲ ಮಾತಿನ ಸಹಾನುಭೂತಿಯಾಗಿದೆ. ಈಗಲೂ ಅವರು ಮಾಡಿರುವ ಅನ್ಯಾಯ ಸರಿಪಡಿಸಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅನುಮತಿ ಕೊಟ್ಟು ಪೂರಕ ಬಜೆಟ್‌ನಲ್ಲಾದರೂ ಹಣ ಒದಗಿಸಿದರೆ ಕೆಲಸ ಆರಂಭವಾಗುತ್ತದೆ. ಈಗಲೂ ಕೂಡ ಸಿಎಂಗೆ ಆಗ್ರಹಿಸುತ್ತೇನೆ. ಈಗಾಗಲೇ ಶಾಸಕರು ಜಿಲ್ಲಾ ಉಸ್ತುವಾರಿ ಸಚಿವರು ಒತ್ತಡ ಮಾಡಿದ್ದಾರೆ. ಆ ಒತ್ತಡಕ್ಕೆ ಸಿಎಂ ಮನ್ನಣೆ ಕೊಡಬೇಕು ಎಂದು ಆಗ್ರಹಿಸಿದರು.

ಬೇಡ್ತಿ-ವರದಾ ಡಿಪಿಆರ್‌ಗೆ ಏಜೆನ್ಸಿ ಫಿಕ್ಸ್‌ ಮಾಡಲಿ

ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ಬಗ್ಗೆ ನಾನು ಹೆಚ್ಚಿನ ಆಸಕ್ತಿ ತೋರಿದ್ದೇನೆ. ನಾನು ಸಿಎಂ ಇದ್ದಾಗಲೇ ಯೋಜನೆಗೆ ಡಿಪಿಆರ್‌ ಮಾಡಿಸಿದ್ದೆ. ಆದರೆ ತಾಂತ್ರಿಕ ಕಾರಣದಿಂದ ಅದು ವಾಪಸ್‌ ಆಗಿತ್ತು. ಈಗ ಮತ್ತೆ ಯೋಜನೆ ಜಾರಿಗೆ ಕ್ರಮ ವಹಿಸಲಾಗಿದೆ. ಆದಷ್ಟು ಬೇಗ ರಾಜ್ಯ ಸರ್ಕಾರವು ಡಿಪಿಆರ್‌ಗೆ ಏಜೆನ್ಸಿ ನಿಗದಿ ಮಾಡಬೇಕು. ಜಿಲ್ಲೆಯಲ್ಲಿ ನೀರು ಸಂಗ್ರಹಣೆಯಾಗಿ ಸದ್ಬಳಕೆಯಾಗಬೇಕು. ಅದು ಡಿಪಿಆರ್‌ನಲ್ಲಿ ಸೇರಿಸಲು ಕ್ರಮ ಕೈಗೊಳ್ಳಲಾಗುವುದು. ಪಶ್ಚಿಮ ಘಟ್ಟ ಪ್ರದೇಶದ ಜೀವವೈವಿಧ್ಯ ಮತ್ತು ಪರಿಸರ ನಾಶವಾಗದ ರೀತಿಯಲ್ಲಿ ಯೋಜನೆ ಜಾರಿ ಮಾಡಲಾಗುವುದು ಎಂದು ಹೇಳಿದರು.

PREV
Read more Articles on
click me!

Recommended Stories

ಬೀದರ್‌ನಲ್ಲಿ ಅಚ್ಚರಿ: ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಾ ತಾಯಿ, ಅಮ್ಮನಿಗಿದು ಎರಡನೇ ಹೆರಿಗೆ
ಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ಮಗು ಪ್ರಕರಣ, ಆರೋಪಿ ತಿಂಗಳಿಗೆ 75,000 ರೂ ಪರಿಹಾರ ನೀಡಲು ಹೈಕೋರ್ಟ್ ಆದೇಶ