ಕಾರಲ್ಲೇ ಕೂತು ಪ್ರವಾಹ ವೀಕ್ಷಿಸಿದ ಅನಂತ್ : ರೈತರ ಮನವಿಗೆ ಡೋಂಡ್ ಕೇರ್

Kannadaprabha News   | Asianet News
Published : Aug 19, 2020, 08:23 AM ISTUpdated : Aug 19, 2020, 08:31 AM IST
ಕಾರಲ್ಲೇ ಕೂತು ಪ್ರವಾಹ ವೀಕ್ಷಿಸಿದ ಅನಂತ್  : ರೈತರ ಮನವಿಗೆ ಡೋಂಡ್ ಕೇರ್

ಸಾರಾಂಶ

ಪ್ರವಾಹ ಪೀಡಿತ ಪ್ರದೇಶಕ್ಕೆ ಆಗಮಿಸಿದ್ದ ವೇಳೆ ರೈತರ ಮನವಿಗೂ ಡೋಂಟ್ ಕೇರ್ ಎಂದು ಕಾರಲ್ಲೆ ಕುಳಿತು ತೆರಳುತ್ತಿದ್ದ ಸಂಸದ ಅನಂತ್ ಕುಮಾರ್ ಹೆಗಡೆಗೆ ತೀವ್ರ ತರಾಟೆ ತೆಗೆದುಕೊಳ್ಳಲಾಗಿದೆ.

ಚನ್ನಮ್ಮನ ಕಿತ್ತೂರು (ಆ.19): ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಸಲ್ಲಿಸಲು ಬಂದ ಮನವಿಯನ್ನು ಸ್ವೀಕರಿಸದೇ ತೆರಳುತ್ತಿದ್ದ ಸಂಸದ ಅನಂತಕುಮಾರ ಹೆಗಡೆ ಅವರ ವಾಹನವನ್ನು ರೈತ ಸಂಘಟನೆಯ ಮುಖಂಡರು ಅಡ್ಡಗಟ್ಟಿಪ್ರತಿಭಟಿಸಿದ ಘಟನೆ ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಬಳಿ ನಡೆದಿದೆ.

ಗ್ರಾಮಕ್ಕೆ ಆಗಮಿಸಿದ್ದ ಸಂಸದರಿಗೆ ಉತ್ತರ ಕರ್ನಾಟಕದ ರೈತ ಸಂಘಟನೆಯ ಪದಾಧಿಕಾರಿಗಳು ಹಲವಾರು ಬೇಡಿಕೆಗಳಿರುವ ಮನವಿ ನೀಡಲು ದೌಡಾಯಿಸಿದಾಗ ಅನಂತಕುಮಾರ ಹೆಗಡೆ ರೈತರತ್ತ ಗಮನ ಹರಿಸಲಿಲ್ಲ.

ಒಂದೂವರೆ ಗಂಟೆ ಆಕಾಶದಲ್ಲೇ ಸುತ್ತಾಡಿ ಲ್ಯಾಂಡ್‌ ಆದ ಅನಂತ್ ಕುಮಾರ್ ಹೆಗಡೆ ಇದ್ದ ವಿಮಾನ...

 ವಾಹನವನ್ನೇರಿ ಗ್ಲಾಸ್‌ಗಳನ್ನು ಏರಿಸಿಕೊಂಡಿದ್ದರಿಂದ ಸಿಟ್ಟಿಗೆದ್ದ ರೈತ ಸಂಘಟನೆಯವರು ಸಂಸದರ ವಾಹನವನ್ನು ಅಡ್ಡಗಟ್ಟಿಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಪೊಲೀಸರು ಆಗಮಿಸಿ ಪ್ರತಿಭಟನಾಕಾರರನ್ನು ಚದುರಿಸಿದರು.

PREV
click me!

Recommended Stories

ಡೆವಿಲ್ ಬ್ಯಾನರ್‌ನಲ್ಲಿ 'ಡಾ.ಅಂಬೇಡ್ಕರ್ ತಲೆಮೇಲೆ ಕೊಲೆ ಆರೋಪಿ' ಕೂರಿಸಿದ ಅಂದಾಭಿಮಾನಿಗಳು!
ರೈಲ್ವೆ ಮೂಲಸೌಕರ್ಯ ಅಭಿವೃದ್ಧಿಪಡಿಸಲು ಮೋದಿಯಿಂದ ಬದ್ಧತೆಯ ಕಾರ್ಯ: ಸಂಸದ ಬಿ.ವೈ.ರಾಘವೇಂದ್ರ