ಚಿತ್ರದುರ್ಗ: ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ಬೇಸತ್ತ ವಾಹನ ಸವಾರರು..!

By Girish Goudar  |  First Published Jun 8, 2024, 8:06 PM IST

ಇಡೀ ಚಿತ್ರದುರ್ಗ ನಗರಕ್ಕೆ ಯುಜಿಡಿ ವ್ಯವಸ್ಥೆ ಕಲ್ಪಿಸಲು‌ ಸರ್ಕಾರ 78.47 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ. 2013 ರಲ್ಲಿ‌ ಈ ಯೋಜನೆ ಆರಂಭವಾಗಿದ್ದು, ಈವರೆಗೆ ಸಂಪೂರ್ಣವಾಗಿಲ್ಲ. 


ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ(ಜೂ.08): ಅದೊಂದು ಐತಿಹಾಸಿಕ ನಗರಿಯ ಕನಸಿನ ಯೋಜನೆ. ಆ ಯೋಜನೆ ಪೂರ್ಣಗೊಂಡ್ರೆ, ನಮ್ಮ‌ ನಗರ ಸುಂದರ ಸ್ಮಾರ್ಟ್ ಸಿಟಿಯಾಗಲಿದೆ ಎಂಬ ಕನಸು ಜನರಲ್ಲಿತ್ತು. ಆದ್ರೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಮಾಡಿರುವ ಕಳಪೆ ಕಾಮಗಾರಿಯಿಂದಾಗಿ ಜನರು ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ಅಷ್ಟಕ್ಕೂ ಅಲ್ಲಾಗಿರುವ ಸಮಸ್ಯೆ ಆದ್ರು ಏನು ಅಂತೀರಾ ಈ ಸ್ಟೋರಿ ನೋಡಿ....

Latest Videos

undefined

ಉದ್ಘಾಟನೆಗೂ ಮುನ್ನವೇ ಶಿಥಿಲಗೊಂಡ ಮ್ಯಾನ್ ಹೋಲ್‌ಗಳು. ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ. ರಸ್ತೆ ಮಧ್ಯೆ ಬಲಿ ಕಾದುನಿಂತ ಕಬ್ಬಿಣದ ಸರಳುಗಳು. ಪ್ರಾಣ ಭಯದಿಂದ ಓಡಾಡುವ ವಾಹನ ಸವಾರರು.‌ ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗದ ರಾಜಬೀದಿ ಎನಿಸಿರುವ ಬಿಡಿ ರಸ್ತೆಯಲ್ಲಿ. 

ಬೇಸಿಗೆಯಲ್ಲಿ ಮನೆ ಹೊರಗೆ ಮಲಗಿದ್ದವನ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಂದ ಕಿರಾತಕರು

ಹೌದು, ಇದು ಕೇವಲ ಇದೊಂದು ರಸ್ತೆ ಕಥೆಯಲ್ಲ. ಇಡೀ ಚಿತ್ರದುರ್ಗ ನಗರಕ್ಕೆ ಯುಜಿಡಿ ವ್ಯವಸ್ಥೆ ಕಲ್ಪಿಸಲು‌ ಸರ್ಕಾರ 78.47 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ. 2013 ರಲ್ಲಿ‌ ಈ ಯೋಜನೆ ಆರಂಭವಾಗಿದ್ದು, ಈವರೆಗೆ ಸಂಪೂರ್ಣವಾಗಿಲ್ಲ. ಅಲ್ದೇ ಕಳೆದ ವರ್ಷ ಸಹ ರಸ್ತೆ ಅಭಿವೃದ್ಧಿಗಾಗಿ ಅಮೃತ್ ಯೋಜನೆಯಡಿ ಕೋಟ್ಯಾಂತರ ಮಧ್ಯೆ ಅವೈಜ್ಞಾನಿಕವಾಗಿ ನಿರ್ಮಾಣ‌ ಮಾಡಲಾಗಿದ್ದ ಡಿವೈಡರನ್ನು ಶಾಸಕ ವೀರೇಂದ್ರ ಪಪ್ಪಿ ನೇತೃತ್ವದಲ್ಲಿ ತೆರವುಗೊಳಿಸಲಾಗಿದೆ. ಆದ್ರೆ ಡಿವೈಡರ್ ಗೆ ಬಳಸಲಾಗಿದ್ದ ಕಬ್ಬಿಣದ‌ ಸರಳುಗಳನ್ನು ಮಾತ್ರ ತೆರವುಗೊಳಿಸದೇ ಹಾಗೆಯೇ ಬಿಡಲಾಗಿದೆ. ಇದರಿಂದಾಗಿ ಅನೇಕ ಬಾರಿ ವಾಹನ ಸವಾರರು ಅಪಘಾತಕ್ಕೀಡಾಗಿ ಯಾತನೆ ಅನುಭವಿಸುವಂತಾಗಿದೆ. ಹೀಗಾಗಿ ಈ ಅಪಾಯಕಾರಿ ಕಬ್ಬಿಣದ ಸರಳುಗಳನ್ನು ತೆರವುಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ಚಿತ್ರದುರ್ಗ: ಹೊರಗಿನವರು ಎಂದವರಿಗೆ ಭರ್ಜರಿ ಗೆಲುವಿನ ಮೂಲಕ ಉತ್ತರ ಕೊಟ್ಟ ಗೋವಿಂದ ಕಾರಜೋಳ

ಇನ್ನು ನಗರದಾದ್ಯಂತ ಸಂಪೂರ್ಣವಾಗದ ಯುಜಿಡಿಯ ಕಾಮಗಾರಿ‌ ಸಹ ಕಳಪೆಯಾಗಿದ್ದು, ಶಿಥಿಲಾವಸ್ಥೆಯಲ್ಲಿರುವ  ಮ್ಯಾನ್ ಹೋಲ್ ಗಳು ನಾಗರಿಕರ ಬಲಿಗೆ ಮೃತ್ಯಕೂಪಗಳೆನಿಸಿವೆ. ಹೀಗಾಗಿ ಆ ಮ್ಯಾನ್ ಹೋಲ್ ಗಳ ಬಳಿ‌ ಓಡಾಡುವ ಜನರು, ಬ್ಯಾರಿಕೇಡ್ ಹಾಗೂ ಕಲ್ಲುಗಳನ್ನಿಟ್ಟು ತಾತ್ಕಾಲಿಕ ರಿಲೀಫ್ ಪಡೆದಿದ್ದಾರೆ. ಆದರೆ ಈ ರಸ್ತೆಗಳಲ್ಲಿ ಸಂಚರಿಸುವ ವಾಹನ ಸವಾರರು ಹಾಗೂ ಶಾಲಾ ವಿದ್ಯಾರ್ಥಿಗಳು ನಿತ್ಯ ಆತಂಕದಿಂದ ಓಡಾಡುವಂತಾಗಿದೆ‌. ಆದ್ರೆ   ನಿರ್ವಹಣೆ ಮಾಡಬೇಕಾದ ನಗರಸಭೆ ಹಾಗೂ ಕಿರು ನೀರು‌ ಸರಬರಾಜು ಇಲಾಖೆ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆಂದು ನಾಗರಿಕರು‌ ಕಿಡಿಕಾರಿದ್ದಾರೆ.

ಒಟ್ಟಾರೆ ಒಳಚರಂಡಿ ಯೋಜನೆಯಿಂದಾಗಿ‌ ಸ್ಮಾರ್ಟ್ ಸಿಟಿಯಾಗಬೇಕಿದ್ದ ಚಿತ್ರದುರ್ಗ, ಕಳಪೆ ಯುಜಿಡಿ ಕಾಮಗಾರಿ ಹಾಗೂ ಅವೈಜ್ಞಾನಿಕ‌ ಡಿವೈಡರ್ ನಿಂದಾಗಿ ನರಕಯಾತನೆ ಅನುಭವಿಸ್ತಿದ್ದಾರೆ. ಇನ್ನಾದ್ರು ಸಂಬಂಧಪಟ್ಟವರು ಎಚ್ಚೆತ್ತು ಯೋಜನಾ ಬದ್ಧವಾಗಿ ಈ ಕಾಮಗಾರಿ ಮುಗಿಸಿ, ಜನರ ಯಾತನೆಗೆ ಬ್ರೇಕ್ ಹಾಕಬೇಕಿದೆ. 

click me!