ವಿಷಪೂರಿತ ನಾಗಹಾವು ಕಡಿತಕ್ಕೊಳಗಾದ ತಾಯಿಯನ್ನ ಮಗಳೇ ಹಾವಿನ ವಿಷ ಹೀರಿ ರಕ್ಷಿಸಿಕೊಂಡ ಘಟನೆ ತಾಲೂಕಿನ ಕೆಯೂರಿನಲ್ಲಿ ನಡೆದಿದೆ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಹಾಗೂ ಸ್ಕೌಟ್ಸ್ ಅಂಡ್ ಗೈಡ್ ರೇಂಜರ್ ಆಗಿರುವ ಶ್ರಮ್ಯಾ ತನ್ನ ಸಾಹಸ, ಸಮಯಪ್ರಜ್ಞೆಯಿಂದ ತಾಯಿಯನ್ನು ಉಳಿಸಿಕೊಂಡಿದ್ದಾರೆ. ಶ್ರಮ್ಯಾಳ ಧೈರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಪುತ್ತೂರು (ಮಾ.21) ವಿಷಪೂರಿತ ನಾಗಹಾವು ಕಡಿತಕ್ಕೊಳಗಾದ ತಾಯಿಯನ್ನ ಮಗಳೇ ಹಾವಿನ ವಿಷ ಹೀರಿ ರಕ್ಷಿಸಿಕೊಂಡ ಘಟನೆ ತಾಲೂಕಿನ ಕೆಯೂರಿನಲ್ಲಿ ನಡೆದಿದೆ.
ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಹಾಗೂ ಸ್ಕೌಟ್ಸ್ ಅಂಡ್ ಗೈಡ್ ರೇಂಜರ್ ಆಗಿರುವ ಶ್ರಮ್ಯಾ ತನ್ನ ಸಾಹಸ, ಸಮಯಪ್ರಜ್ಞೆಯಿಂದ ತಾಯಿಯನ್ನು ಉಳಿಸಿಕೊಂಡಿದ್ದಾರೆ. ಶ್ರಮ್ಯಾಳ ಧೈರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಕೆಯ್ಯುರಿನ ಗ್ರಾಪಂ ಸದಸ್ಯೆಯಾಗಿರುವ ಶ್ರಮ್ಯಾಳ ತಾಯಿ ಮಮತಾ ರೈ ಹಾವಿನ ಕಡಿತಕ್ಕೊಳಗಾದವರು. ಶ್ರಮ್ಯಾಳ ತಾಯಿ ಮನೆ ಕೆಯ್ಯೂರಿನ ತಮ್ಮ ಮನೆಯ ಸಮೀಪವೇ ಇದ್ದು, ಇಲ್ಲಿಗೆ ಶ್ರಮ್ಯಾ ಹಾಗೂ ಅವಳ ತಾಯಿ ಮಮತಾ ರೈ ಹೋಗಿದ್ದರು. ಈ ವೇಳೆ ಪಂಪ್‌ಸೆಟ್ ಆನ್ ಮಾಡಲು ತೋಟಕ್ಕೆ ಹೋಗಿದ್ದಾರೆ. ಸ್ವಿಚ್ ಹಾಕಿ ತೋಟದಿಂದ ಮನೆಯ ಕಡೆ ವಾಪಸ್ಸಾಗುವಾಗ ಕೆರೆದಾರಿಗೆ ನಾಗರಹಾವು ಇರುವುದು ತಿಳಿಯದೆ ಅದನ್ನು ತುಳಿದಿರುವ ಮಮತಾ ರೈ. ತುಳಿಯುತ್ತಿದ್ದಂತೆ ನಾಗರಹಾವು ಕಚ್ಚಿದೆ. ಭಯಗೊಂಡು ಮನೆಗೆ ಓಡಿಬಂದಿರುವ ಮಮತಾ ರೈ. ವಿಷ ಮೇಲೇರದಂತೆ ಮನೆಯ ಕೆಲಸದಾಳು ಕಚ್ಚಿದ ಭಾಗಕ್ಕೆ ಬಿಗಿಯಾಗಿ ಕಟ್ಟಿದ್ದಾರೆ. ಹೀಗೆ ಕಟ್ಟಿದಾಗಲೂ ವಿಷವೇರುವ ಸಾಧ್ಯತೆ ಹಿನ್ನೆಲೆ ಮಗಳು ಕಚ್ಚಿದ ಭಾಗಕ್ಕೆ ಬಾಯಿ ಹಾಕಿ ವಿಷ ಹೀರಿ ತೆಗೆದಿದ್ದಾಳೆ. ಶ್ರಮ್ಯಾಳ ಪ್ರಥಮ ಚಿಕಿತ್ಸೆ, ಸಮಯಪ್ರಜ್ಞೆಯಿಂದ ವಿಷ ಹೊರಬಂದಿದೆ. ಬಳಿಕ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ಸಹ ವಿಷ ತೆಗೆದು ಒಳ್ಳೆಯದೆ ಆಗಿದೆ. ಇಲ್ಲದಿದ್ರೆ ಪ್ರಾಣಕ್ಕೆ ಆಪಾಯವಿತ್ತು ಎಂದಿದ್ದಾರೆ.
ಶ್ರಮ್ಯಾಳ ಧೈರ್ಯ, ಸಮಯಪ್ರಜ್ಞೆಯಿಂದ ತಾಯಿ ಜೀವ ಕಾಪಾಡಿರುವುದು ಎಲ್ಲೆಡೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಕಟ್ಟಿದರೆ ವಿಷ ಏರುವುದಿಲ್ಲ ಎಂಬುದರಲ್ಲಿ ನನಗೆ ನಂಬಿಕೆ ಇರಲಿಲ್ಲ. ಹೀಗಾಗಿ ಸಿನಿಮಾಗಳಲ್ಲಿ ನೋಡಿದಹಾಗೆ ಮತ್ತು ಇತತರಿಂದ ಕೇಳಿ, ಓದಿ ತಿಳಿದಂತೆ ನಾನು ತಾಯಿಗೆ ಕಚ್ಚಿದ ಭಾಗಕ್ಕೆ ಬಾಯಿ ಹಾಕಿ ವಿಷ ಹೀರಿದ್ದೇನೆ. ತಾಯಿ ಸುರಕ್ಷಿತವಾಗಿರುವುದು ಸಂತೋಷವಾಗಿದೆ.ಶ್ರಮ್ಯಾ