ತಾಯಿ ಮಗ ಸೇರಿ ಕುಡುಕರಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಿಲ್ ಕೊಡುವ ವಿಚಾರದಲ್ಲಿ ಬಾರ್ ಕ್ಯಾಷಿಯರ್ ನವೀನ್ ಜೊತೆ ಕುಡುಕರು ಕಿರಿಕ್ ತೆಗೆದಿದ್ದರು. ಅದೇ ಸಮಯಕ್ಕೆ ಮಗನಿಗೆ ಊಟ ಕೊಡಲೆಂದು ತಾಯಿ ಪ್ರೇಮ ಅವರು ಬಾರ್‌ಗೆ ಬಂದಿದ್ದರು. ಮಗನ ಮೇಲೆ ಹಲ್ಲೆ ಆಗುತ್ತಿರುವುದನ್ನು ಕಂಡ ತಾಯಿ ಮಗನ ರಕ್ಷಣೆಗೆ ದೌಡಾಯಿಸಿದ್ದರು.
ಚಿಕ್ಕಮಗಳೂರು(ಜ.26): ಮದ್ಯದ ಅಮಲಿನಲ್ಲಿ ಕುಡುಕರು ಬಾರ್ ಕ್ಯಾಶಿಯರ್‌ನೊಂದಿಗೆ ಕಿರಿಕ್ ತಗೆದ ಘಟನೆ ನಗರದ ನಂದಿನಿ ಬಾರ್ ಬಳಿ ನಡೆದಿದೆ. ಮಗನಿಗೆ ಊಟ ಕೊಡಲು ಬಂದ ತಾಯಿಯ ಮೇಲೂ ಕುಡುಕರು ಹಲ್ಲೆಗೆ ಮುಂದಾಗಿದ್ದರು.
ಇದರಿಂದ ರೊಚ್ಚಿಗೆದ್ದ ತಾಯಿ ಮಗ ಸೇರಿ ಕುಡುಕರಿಗೆ ನಡು ರಸ್ತೆಯಲ್ಲೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಿಲ್ ಕೊಡುವ ವಿಚಾರದಲ್ಲಿ ಬಾರ್ ಕ್ಯಾಷಿಯರ್ ನವೀನ್ ಜೊತೆ ಕುಡುಕರು ಕಿರಿಕ್ ತೆಗೆದಿದ್ದರು. ಅದೇ ಸಮಯಕ್ಕೆ ಮಗನಿಗೆ ಊಟ ಕೊಡಲೆಂದು ತಾಯಿ ಪ್ರೇಮ ಅವರು ಬಾರ್‌ಗೆ ಬಂದಿದ್ದರು. ಮಗನ ಮೇಲೆ ಹಲ್ಲೆ ಆಗುತ್ತಿರುವುದನ್ನು ಕಂಡ ತಾಯಿ ಮಗನ ರಕ್ಷಣೆಗೆ ದೌಡಾಯಿಸಿದ್ದರು.
ಚಿಕ್ಕಮಗಳೂರು ಡಿಸಿ ಕಚೇರಿ ಬಳಿ ಹೋಮ ಮಾಡಿ ಮುತ್ತಿಗೆ ಹಾಕಿದ್ದ ಹಿಂದೂ ಕಾರ್ಯಕರ್ತರ ಮೇಲೆ ಕೇಸ್
ಈ ವೇಳೆ ಕ್ಯಾಶಿಯರ್ ತಾಯಿ ಪ್ರೇಮ ಅವರ ಮೇಲೂ ಕುಡುಕರು ಹಲ್ಲೆಗೆ ಮುಂದಾಗಿದ್ದರು. ಅಮ್ಮಾ... ನೀನು ಒಳಗೆ ಹೋಗು ಅಮ್ಮಾ... ಎಂದು ತಾಯಿ ರಕ್ಷಣೆಗೆ ಮಗ ಮುಂದಾಗಿದ್ದಾನೆ. ಮಗನ ಮೇಲಿನ ಹಲ್ಲೆ ಕಂಡು ಮಗನ ರಕ್ಷಣೆಗೆ ತಾಯಿ ಪ್ರೇಮ ಅವರು ನಿಂತಿದ್ದಾರೆ. ಕುಡುಕರಿಗೆ ಹೆಲ್ಮೆಟ್‌ನಿಂದ ಬಾರಿಸಿ ಮಗನನ್ನ ತಾಯಿ ರಕ್ಷಣೆ ಮಾಡಿದ್ದಾರೆ. ಈ ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.