ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡ ಆರೋಗ್ಯ ಸಿಬ್ಬಂದಿ| ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಹುರುಳಿಹಾಳ್ ಮ್ಯಾಸರಹಟ್ಟಿ ಗ್ರಾಮದ ಗರ್ಭಿಣಿಗೆ ಹೆರಿಗೆ| ಚಿಕ್ಕಜೋಗಿಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ತಾಯಿ, ಮಗುವಿಗೆ ಆರೈಕೆ|
ಕೂಡ್ಲಿಗಿ(ಡಿ.21): ತಾಲೂಕಿನ ಹುರುಳಿಹಾಳ್ ಮ್ಯಾಸರಹಟ್ಟಿ ಗ್ರಾಮದ ಗರ್ಭಿಣಿ ಹೆರಿಗೆಗೆಂದು ಆಸ್ಪತ್ರೆಗೆ ತೆರಳುತ್ತಿದ್ದಾಗ ಆ್ಯಂಬುಲೆನ್ಸ್‌ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.
ಆರೋಗ್ಯ ಸಿಬ್ಬಂದಿ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ್ದಾರೆ. ರೂಪಾ ಎಂಬ ಮಹಿಳೆ ಹೆರಿಗೆ ನೋವು ಕಾಣಿಸಿಕೊಂಡಾಗ ಸ್ಥಳೀಯ 108 ಆ್ಯಂಬುಲೆನ್ಸ್‌ನಲ್ಲಿ ಸಿಬ್ಬಂದಿ ಜಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದಾಗ ಶನಿವಾರ ರಾತ್ರಿ ಹೆರಿಗೆ ಆಗಿದೆ.
ಅವಧಿಗೂ ಪೂರ್ವ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ
ಆರೋಗ್ಯ ಸಿಬ್ಬಂದಿ ಜ್ಯೋತಿ, ಚಾಲಕ ಖಾಜಾಸಾಬ್ ಅವರು ಹೆರಿಗೆ ಮಾಡಿಸಿದ್ದಾರೆ. ಆನಂತರ ಚಿಕ್ಕಜೋಗಿಹಳ್ಳಿ ಸರ್ಕಾರಿ ಆಸ್ಪತ್ರೆಗೆ ಕರೆತಂದು ತಾಯಿ, ಮಗುವಿಗೆ ಆರೈಕೆ ಮಾಡಲಾಗಿದೆ.