ಕಾರವಾರ: ಕರಾವಳಿ ಭದ್ರತೆಗೆ ಕೋಸ್ಟ್‌ ಗಾರ್ಡ್‌ನ ಅತ್ಯಾಧುನಿಕ ಹಡಗುಗಳ ನಿಯೋಜನೆ

By Kannadaprabha News  |  First Published Apr 3, 2021, 10:43 AM IST

ಐಸಿಜಿಎಸ್‌ ಸಾವಿತ್ರಿಬಾಯಿ ಫುಲೆ ಮತ್ತು ಐಸಿಜಿಎಸ್‌ ಕಸ್ತೂರಬಾ ಗಾಂಧಿ ಎಂಬ ಎರಡು ಫಾಸ್ಟ್‌ ಪೆಟ್ರೋಲ್‌ ಹಡಗು| ಉಪಗ್ರಹ ಸಂವಹನ ಮತ್ತು ಸಂಚರಣೆ ವ್ಯವಸ್ಥೆ ಅಳವಡಿಕೆ| ಹಲವಾರು ಸಂದರ್ಭಗಳಲ್ಲಿ ಸಮುದ್ರದಲ್ಲಿರುವ ಮೀನುಗಾರರಿಗೆ ಇವುಗಳ ಮೂಲಕ ನೆರವು| 


ಕಾರವಾರ(ಏ.03):  ಕರಾವಳಿ ಕಾವಲು ಪಡೆ ಎರಡು ಗಸ್ತು ಹಡಗುಗಳನ್ನು ಉತ್ತರ ಕನ್ನಡದ ಕರಾವಳಿಯಲ್ಲಿ ನಿಯೋಜಿಸುವ ಮೂಲಕ ಕರಾವಳಿಯ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಐಸಿಜಿಎಸ್‌ ಸಾವಿತ್ರಿಬಾಯಿ ಫುಲೆ ಮತ್ತು ಐಸಿಜಿಎಸ್‌ ಕಸ್ತೂರಬಾ ಗಾಂಧಿ ಎಂಬ ಎರಡು ಫಾಸ್ಟ್‌ ಪೆಟ್ರೋಲ್‌ ಹಡಗುಗಳನ್ನು ಏ.1ರಿಂದ ನಿಯೋಜಿಸಲಾಗಿದೆ.

ಈ ಎರಡೂ ಹಡಗುಗಳು ಗೋವಾ ಶಿಪ್‌ಯಾರ್ಡ್‌ ಲಿಮಿಟೆಡ್‌ ನಿರ್ಮಿಸಿದ ಫಾಸ್ಟ್‌ ಪೆಟ್ರೋಲ್‌ ಹಡಗುಗಳಾಗಿವೆ. ಇವು ಗಂಟೆಗೆ 35 ನಾಟ್ಸ್‌ ವೇಗವನ್ನು ಕ್ರಮಿಸಬಲ್ಲ ಸಾಮರ್ಥ್ಯ ಹೊಂದಿವೆ. 30 ಎಂಎಂ ಸಿಆರ್‌ ಎನ್‌ ಗನ್‌ ಕೂಡ ಇದರಲ್ಲಿದೆ. ಇವುಗಳಲ್ಲಿ ಉಪಗ್ರಹ ಸಂವಹನ ಮತ್ತು ಸಂಚರಣೆ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಹಡಗುಗಳನ್ನು ಕಣ್ಗಾವಲು, ಗಸ್ತು ತಿರುಗಲು ವಿನ್ಯಾಸಗೊಳಿಸಲಾಗಿದೆ ಮತ್ತು ಆಳವಿಲ್ಲದ ನೀರಿನಲ್ಲೂ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿವೆ. ಎರಡೂ ಹಡಗುಗಳು ಕಳ್ಳಸಾಗಣೆ ವಿರೋಧಿ ಕಾರ್ಯಾಚರಣೆ, ಕಡಲ್ಗಳ್ಳತನ ವಿರೋಧಿ ಗಸ್ತು, ಮೀನುಗಾರರ ರಕ್ಷಣೆ, ಶೋಧ ಮತ್ತು ವಿವಿಧ ಕಾರ್ಯಾಚರಣೆಗಳಿಗೆ ಸಹ ಸಮರ್ಥವಾಗಿವೆ.

Tap to resize

Latest Videos

ಗೋವಾದಿಂದ ಕಾರವಾರಕ್ಕೆ ಎಲೆಕ್ಟ್ರಿಕ್‌ ಬಸ್‌ ಸೇವೆ

ಎರಡೂ ಹಡಗುಗಳು ಈಗಾಗಲೇ ಹಲವು ಕಾರ್ಯಾಚರಣೆಗಳು, ಕಡಲ್ಗಳ್ಳತನ ವಿರೋಧಿ ಗಸ್ತು ಮತ್ತು ಕಣ್ಗಾವಲು ಪ್ರಯತ್ನಗಳಲ್ಲಿ ಭಾಗಿಯಾಗಿವೆ. ಇದಲ್ಲದೆ, ಹಲವಾರು ಸಂದರ್ಭಗಳಲ್ಲಿ ಸಮುದ್ರದಲ್ಲಿರುವ ಮೀನುಗಾರರಿಗೆ ಇವುಗಳ ಮೂಲಕ ನೆರವು ನೀಡಲಾಗಿದೆ.

ಕರಾವಳಿ ಕಾವಲು ಪಡೆಯ ಕಾರವಾರ ಘಟಕವು ಜಿಲ್ಲೆಯಲ್ಲಿ ಕಾರವಾರದ ಮಾಜಾಳಿಯಿಂದ ದಕ್ಷಿಣದ ಭಟ್ಕಳದ ತನಕ ತನ್ನ ವ್ಯಾಪ್ತಿಯನ್ನು ಹೊಂದಿದೆ. ಕರಾವಳಿ ಕಾವಲು ಪಡೆ 2009ರಂದು ಜಿಲ್ಲೆಯಲ್ಲಿ ಸ್ಥಾಪನೆಯಾದ ಮೇಲೆ 2 ಇಂಟ್ರಾಸೆಪ್ಟರ್‌ ಬೋಟ್‌ಗಳು ಹಾಗೂ 2 ಇಂಟರ್‌ ಸೆಪ್ಟರ್‌ ಕ್ರಾಪ್ಟ್‌ಗಳೊಂದಿಗೆ ಕಾರ್ಯಾಚರಣೆಗಿಳಿದಿತ್ತು.
 

click me!