ಬಿಜೆಪಿ, ಜೆಡಿಎಸ್‌ನ 500ಕ್ಕೂ ಅಧಿಕ ಮುಖಂಡರು ಕಾಂಗ್ರೆಸ್ ಸೇರ್ಪಡೆ

By Kannadaprabha News  |  First Published Aug 19, 2021, 12:13 PM IST
  • ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್‌ನ 500ಕ್ಕೂ ಹೆಚ್ಚು ಮುಖಂಡರು ಕೈ ಸೇರ್ಪಡೆ
  • ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮ

 ಮೈಸೂರು (ಆ.19):  ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಬಿಜೆಪಿ ಮತ್ತು ಜೆಡಿಎಸ್‌ನ 500ಕ್ಕೂ ಹೆಚ್ಚು ಮುಖಂಡರು, ಯುವಕರು, ಮಹಿಳೆಯರು, ಕಾರ್ಯಕರ್ತರು ಯುವಮುಖಂಡರಾದ ಚೇತನ್‌, ಪುಟ್ಟು, ಮಾದಪ್ಪ ನೇತೃತ್ವದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್‌ ವಿವಿಧ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್‌ ಬರಮಾಡಿಕೊಂಡರು. ಬಳಿಕ ಮಾತನಾಡಿದ ಅವರು, ಇಂದು ಇಲ್ಲಿ ಸೇರಿರುವ ಯುವಕರೆಲ್ಲರು ಕಾಂಗ್ರೆಸ್‌ ಸೇನಾನಿಗಳಾಗಿ ಬಂದಿದ್ದೀರಿ. ಅಂದು ಕಾಂಗ್ರೆಸ್‌ ಸ್ವಾತಾಂತ್ರ್ಯದ ಹೋರಾಟದಲ್ಲಿ ಯುವಪಡೆಯನ್ನು ಹೊಂದಿತ್ತು. ಆ ದಿಸೆಯಲ್ಲಿ ತಾವೆಲ್ಲರೂ ಒಳ್ಳೆಯ ಉದ್ದೇಶಗಳನ್ನಿಟ್ಟುಕೊಂಡು ಮುಕ್ತ ಮನಸ್ಸಿನಿಂದ ಪಕ್ಷಕ್ಕೆ ಸೇರ್ಪಡೆಯಾಗಿದ್ದೀರಿ. ಎಲ್ಲರೂ ಜಾತಿ, ಧರ್ಮ ಮರೆತು, ದ್ವೇಷ, ಅಸೂಯೆ ಬಿಟ್ಟು ಕಾಂಗ್ರೆಸ್‌ ಪಕ್ಷ ಇತಿಹಾಸದುದ್ದಕ್ಕೂ ಹಾಕಿಕೊಟ್ಟಿರುವ ಮಾರ್ಗದಲ್ಲಿ ಸಾಗೋಣಾ ಎಂದರು.

Latest Videos

undefined

300 ಕಾರ್ಯಕರ್ತರೊಂದಿಗೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿರುವ ಮುಖಂಡ

ಈ ದೇಶದಲ್ಲಿ ಶೇ. 12 ಸಾಕ್ಷರತೆ ಇತ್ತು. ಇಂದು ಶೇ. 75 ಸಾಕ್ಷರತೆ ಇದೆ. ಕಾಂಗ್ರೆಸ್‌ ರೂಪಿಸಿದ ನೂರಾರು ಶಿಕ್ಷಣ ಸಂಸ್ಥೆ, ಐಐಟಿ, ತಂತ್ರಜ್ಞಾನ ಸಂಸ್ಥೆಗಳು ಮೂಲ ಕಾರಣ. ಇವತ್ತು ದಿನ ಬಳಕೆ, ಗೃಹ ಬಳಕೆ ವಸ್ತು, ಪೆಟ್ರೋಲ್, ಡೀಸೆಲ್‌ ಬೆಲೆ ಗಗನ ಮುಟ್ಟುತ್ತಿವೆ. ಬಿಜೆಪಿ ಸರ್ಕಾರ ಕಣ್ಣುಮುಚ್ಚಿ ಕೂತಿವೆ. ಲಕ್ಷಾಂತರ ಮಂದಿ ವಿದ್ಯಾವಂತವರಿಗೆ ಉದ್ಯೋಗ ನೀಡದೆ ಬೀದಿಗೆ ತಳ್ಳಿವೆ. ಇನ್ನೂ ಕೋವಿಡ್‌ ವಿಷಮ ಪರಿಸ್ಥಿತಿಯಲ್ಲೂ ಅಸಹಾಯಕತೆ ತೋರಿ ಜನರನ್ನು ದಿಕ್ಕು ತಪ್ಪಿಸುತ್ತಿವೆ. ಇಂತಹ ನೂರಾರು ಸಮಸ್ಯೆಗಳನ್ನು ಬಡ, ಮಧ್ಯಮ ವರ್ಗದ ಜನ ಅನುಭವಿಸುತ್ತಿದ್ದಾರೆ. ಆ ದೃಷ್ಟಿಯಲ್ಲಿ ಮತ್ತೊಮ್ಮೆ ಸ್ವಾಭಿಮಾನವಾಗಿ ಬದುಕಬೇಕಾದ ಸ್ವಾತಂತ್ರ್ಯಕ್ಕಾಗಿ ಹೋರಾಡಬೇಕಾದ ಅನಿವಾರ್ಯತೆ ನಮ್ಮ ಮುಂದಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಹಿರಿಯ ಮುಖಂಡರೊಂದಿಗೆ ಮುಸ್ಲಿಂ ಮುಖಂಡರು ಕೈ ತೊರೆದು ಬಿಜೆಪಿ ಸೇರ್ಪಡೆ

ಈ ಹಿನ್ನೆಲೆಯಲ್ಲಿ ಎಲ್ಲರೂ ಒಗ್ಗಟ್ಟಾಗಿ ಈ ರಾಜ್ಯದಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. 2023ಕ್ಕೆ ಮತ್ತೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ಶತಸಿದ್ಧ. ನಿರಂತರವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸೋಣ. ಇಂದು ಶ್ರಮವಹಿಸಿ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿದಿದ್ದೆ. ಆದರೆ ಭವಿಷ್ಯದಲ್ಲಿ ಎತ್ತರದ ಸ್ಥಾನಕ್ಕೆ ಬೆಳೆಯಬಹುದು. ಅಧಿಕಾರ ಅದಾಗಿಯೇ ಹುಡುಕಿಕೊಂಡು ಬರುತ್ತದೆ ಎಂದು ಅವರು ತಿಳಿಸಿದರು.

click me!