Karnataka Politics : 500ಕ್ಕೂ ಅಧಿಕ ಮಂದಿ ಬಿಜೆಪಿ ನಾಯಕರು ಜೆಡಿಎಸ್‌ಗೆ

By Kannadaprabha News  |  First Published Feb 17, 2023, 6:00 AM IST

ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಪಕ್ಷಾಂತರದ ಪರ್ವ ಪ್ರಾರಂಭಗೊಂಡಿದ್ದು, ಒಂದೇ ದಿನ 500ಕ್ಕೂ ಅಧಿಕ ಮಂದಿ ಬಿಜೆಪಿ ನಾಯಕರು ಶಾಸಕ ಡಿ.ಸಿ.ಗೌರಿಶಂಕರ್‌ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಗೊಂಡರು.


 ತುಮಕೂರು :  ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಪಕ್ಷಾಂತರದ ಪರ್ವ ಪ್ರಾರಂಭಗೊಂಡಿದ್ದು, ಒಂದೇ ದಿನ 500ಕ್ಕೂ ಅಧಿಕ ಮಂದಿ ಬಿಜೆಪಿ ನಾಯಕರು ಶಾಸಕ ಡಿ.ಸಿ.ಗೌರಿಶಂಕರ್‌ ಸಮ್ಮುಖದಲ್ಲಿ ಜೆಡಿಎಸ್‌ ಸೇರ್ಪಡೆಗೊಂಡರು.

ತುಮಕೂರು ತಾಲೂಕು ನರುಗನಹಳ್ಳಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಬೃಹತ್‌ ಸೇರ್ಪಡೆ ಸಮಾರಂಭದಲ್ಲಿ ಗ್ರಾಮಾಂತರ ದ ಸುಮಾರು 500ಕ್ಕೂ ಅಧಿಕ ಮಂದಿ ವಿವಿಧ ಜನಾಂಗಗಳ ಬಿಜೆಪಿ ಮುಖಂಡರಾದ ಹನುಮಂತಯ್ಯ, ಮಹಾಲಿಂಗಪ್ಪ, ನರಸೇಗೌಡ, ಶ್ರೀನಿವಾಸ್‌, ಜನಾರ್ದನ್‌, ಮೀಸೆ ರಂಗನಾಥ್‌, ಸೇರಿದಂತೆ ವಿಎಸ್‌ಎಸ್‌ಎನ್‌ ಸದಸ್ಯರು, ಗ್ರಾ.ಪಂ. ಹಾಲಿ ಸದಸ್ಯರು, ಮಾಜಿ ಸದಸ್ಯ ಹಾಗೂ ಭಾಜಪ ಮುಖಂಡರು ಅಪಾರ ಬೆಂಬಲಿಗರೊಂದಿಗೆ ಕಮಲ ಪಕ್ಷ ತೊರೆದು ತೆನೆಹೊತ್ತ ರೈತ ಮಹಿಳೆಯ ಕೈ ಹಿಡಿದರು. ಈ ವೇಳೆ ಪಕ್ಷ ಸೇರ್ಪಡೆಗೊಂಡ ಮುಖಂಡರನ್ನು ಜೆಡಿಎಸ್‌ ಬಾವುಟ ನೀಡಿ ಶಾಸಕ ಗೌರಿಶಂಕರ್‌ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.

Tap to resize

Latest Videos

ಈ ಸಂದರ್ಭದಲ್ಲಿ ಮುಖಂಡರು ಹಾಗೂ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಶಾಸಕ ಡಿ.ಸಿ.ಗೌರಿಶಂಕರ್‌ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ತಾವು ಮಾಡಿರುವ ಅಭಿವೃದ್ಧಿ ಕೆಲಸಗಳೇ ಶ್ರೀರಕ್ಷೆಯಾಗಿದ್ದು, ಇದನ್ನು ಮೆಚ್ಚಿ ಈಗಾಗಲೇ ಸಾವಿರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಕೈ ಬಲಪಡಿಸಲು ಜೆಡಿಎಸ್‌ ಸೇರ್ಪಡೆಗೊಳ್ಳುತ್ತಿದ್ದಾರೆ. ಇಂದೂ ಸಹ 500ಕ್ಕೂ ಅಧಿಕ ಮಂದಿ ಜೆಡಿಎಸ್‌ ಸೇರ್ಪಡೆಗೊಂಡಿದ್ದು, ಕ್ಷೇತ್ರದಲ್ಲಿ ಜೆಡಿಎಸ್‌ ಗೆಲುವು ನಿಶ್ಚಿತ ಎಂದರು.

ಕೆಲವರು ತಮ್ಮ ಪಕ್ಷ ಬಿಟ್ಟು ಮೂರು ವರ್ಷ ಕಳೆದಿದ್ದು ಅವರನ್ನು ಮಾಜಿ ಶಾಸಕರು ಮುಖ್ಯಮಂತ್ರಿಗಳ ಬಳಿಗೆ ಕರೆದೊಯ್ದು ಪಕ್ಷದ ಶಾಲು ಹಾಕಿಸಿ ದೊಡ್ಡದಾಗಿ ಪಕ್ಷ ಸೇರಿದ್ದಾರೆ ಎಂದು ಬಿಂಬಿಸಿದ್ದಾರೆ. ಆದರೆ ವಾಸ್ತವಿಕವಾಗಿ ಇಬ್ಬರು ಮೂವರು ಮುಖಂಡರನ್ನು ಹೊರತುಪಡಿಸಿದರೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಗೊಂಡ ಮುಖಂಡರು ಜೆಡಿಎಸ್‌ ಬಿಟ್ಟು ಈಗಾಗಲೇ ಮೂರು ವಷÜರ್‍ಗಳು ಕಳೆದಿವೆ. ಅವರು ಯಾರೂ ಸಹ ತಮ್ಮ ಸಂಪರ್ಕದಲ್ಲಿ ಇರುವವರಲ್ಲ ಎಂದರು.

ಕ್ಷೇತ್ರದಲ್ಲಿ ಮಾಜಿ ಶಾಸಕರು ಮಾಡಿರುವ ಕೆಲಸ ಏನೆಂಬುದು ಸಾಮಾನ್ಯ ಜನರಿಗೂ ಗೊತ್ತು. ಅವರು ಮತ್ತೆ ಅಧಿಕಾರಕ್ಕೆ ಬಂದರೆ ಪಂಚಾಯ್ತಿಗೊಂದು ಫೋಲಿಸ್‌ ಠಾಣೆ ತಂದು ಜನಸಾಮಾನ್ಯರ ಮೇಲೆ ಪ್ರಕರಣ ದಾಖಲಿಸುವ ಕೆಲಸ ಮಾಡುತ್ತಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಸಾರ್ವಜನಿಕರಿಗೆ ಸತ್ಯಾಂಶವನ್ನು ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕೆಂದು ಕರೆ ನೀಡಿದರು. ಈ ವೇಳೆ ಗ್ರಾಮಾಂತರ ಕ್ಷೇತ್ರದ ಹಿರಿಯ ಜೆಡಿಎಸ್‌ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

BJP - JDS ವಾಕ್ಸಮರ

ವಿಧಾನಸಭೆ  : ‘ದೇವೇಗೌಡರ ಕುಟುಂಬ ಎಟಿಎಂ ಇದ್ದಂತೆ’ ಎಂದಿದ್ದ ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸುತ್ತಿದ್ದ ಜೆಡಿಎಸ್‌ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಧೋರಣೆಯಿಂದ ಕ್ರುದ್ಧರಾದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು ನೀವು ಏನೇನು ಬೊಗಳಿದ್ದೀರಿ ನಾವು ಹೇಳಬೇಕಾ ಎಂದು ಪ್ರಶ್ನಿಸಿದ್ದು ಸದನದಲ್ಲಿ ಕೋಲಾಹಲಕರ ಸನ್ನಿವೇಶ ನಿರ್ಮಿಸಿ, ಬೊಗಳಿದ್ದೀರಿ ಪದ ಕಡತದಿಂದ ತೆಗೆಯುವಂತೆ ಆಗ್ರಹಿಸಿ ಜೆಡಿಎಸ್‌ ಸದಸ್ಯರು ಧರಣಿ ನಡೆಸಿದ ಘಟನೆ ನಡೆಯಿತು.

ಗುರುವಾರ ಭೋಜನ ವಿರಾಮದ ಬಳಿಕ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಯಲ್ಲಿ ಮಾತು ಮುಂದುವರೆಸಿದ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಯಾವನ್ರೀ ಗೃಹ ಸಚಿವ ಮಂಡ್ಯಕ್ಕೆ ಬಂದು ದೇವೇಗೌಡರ ಕುಟುಂಬ ಎಟಿಎಂ ಇದ್ದಂತೆ ಎಂದು ಹೇಳಿಕೆ ನೀಡುತ್ತಾನೆ. ನನ್ನ ಬಗ್ಗೆ ಬೇಕಾದರೆ ಮಾತನಾಡಲಿ, ಸಹಿಸಿಕೊಳ್ಳುತ್ತೇನೆ. ಚುನಾವಣೆ ಸಂದರ್ಭದಲ್ಲಿ ನಾಲ್ಕು ಜನರ ಬಳಿ ಹಣ ತಂದಿದ್ದೇನೆ. ಆದರೆ, ದೇವೇಗೌಡರು ಎಂದೂ ಹಣ, ಅಧಿಕಾರದ ಹಿಂದೆ ಹೋದವರಲ್ಲ, ಭ್ರಷ್ಟಾಚಾರ ನಡೆಸಿದವರಲ್ಲ. 

click me!