ತುಳಸಿಗೇರಿ ಮಾರುತೇಶ್ವರ ದೇವಾಲಯದಲ್ಲಿನ ಹುಂಡಿಯಲ್ಲಿ 5 ಲಕ್ಷಕ್ಕೂ ಅಧಿಕ ಹಣ|ಬಾಗಲಕೋಟೆ ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ ನೇತೃತ್ವದಲ್ಲಿ ಎಣಿಕೆ|
ಕಲಾದಗಿ(ನ.24): ತುಳಸಿಗೇರಿ ಮಾರುತೇಶ್ವರ ದೇವಾಲಯದಲ್ಲಿನ ಹುಂಡಿಗಳ ಹಣವನ್ನು ಬಾಗಲಕೋಟೆ ತಹಸೀಲ್ದಾರ್ ಗುರುಸಿದ್ದಯ್ಯ ಹಿರೇಮಠ ಅವರ ನೇತೃತ್ವದಲ್ಲಿ ಶುಕ್ರವಾರ ಎಣಿಕೆ ಮಾಡಲಾಯಿತು.
ಪ್ರತಿ ವರ್ಷದಂತೆ ಈ ವರ್ಷವೂ ಜಾತ್ರಾ ಮಹೋತ್ಸವದ ಮುಂಚಿತವಾಗಿ ಹುಂಡಿಗಳ ಹಣವನ್ನು ಕಂದಾಯ ಇಲಾಖಾ ಹಾಗೂ ತುಳಸಿಗೇರಿಯ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕಿನ ಸಿಬ್ಬಂದಿಗಳ ಸಹಯೋಗದಲ್ಲಿ ನಡೆಸಲಾದ ಹಣ ಏಣಿಕೆಯಲ್ಲಿ ನಾಲ್ಕು ಹುಂಡಿಗಳಲ್ಲಿ ಒಟ್ಟು 5,17,583 ಲಭ್ಯವಾಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮೊದಲ ಹುಂಡಿಯಲ್ಲಿ 1,92,191, ಎರಡನೇ ಹುಂಡಿಯಲ್ಲಿ 1,58,030, ಮೂರನೇ ಹುಂಡಿಯಲ್ಲಿ 1,04,130 ನಾಲ್ಕನೇ ಹುಂಡಿಯಲ್ಲಿ 63,232 ಇದ್ದವು. ಶುಕ್ರವಾರ ಬೆಳಿಗ್ಗೆಯಿಂದ ಪ್ರಾರಂಭವಾದ ಹುಂಡಿ ಹಣ ಏಣಿಕೆ ಸಂಜೆವರೆಗೂ ನಡೆಯಿತು. ಉಪತಹಸೀಲ್ದಾರ್ ಪಿ.ಬಿ.ಸಂಗ್ರಿ, ಕಂದಾಯ ನಿರೀಕ್ಷಕ ಆರ್.ಆರ್.ಕುಲಕರ್ಣಿ, ಕೆವಿಜಿ ಬ್ಯಾಂಕ್ ವ್ಯವಸ್ಥಾಪಕ ತಾಯಾ ನಾಯಕ, ಗ್ರಾಮ ಲೆಕ್ಕಾಧಿಕಾರಿ ಎ.ವಿ.ಸೂರ್ವವಂಶಿ, ಯು.ಎಸ್.ಸೌದಾಗರ್, ಎಸ್.ಜಿ.ಬಗಲಿ, ವಿಜಯಲಕ್ಷ್ಮೀ ನಾಯ್ಕರ್ ಇನ್ನಿತರರು ಇದ್ದರು.