ಭದ್ರಾವತಿ ಶಿವಮೊಗ್ಗ ರೈತರು ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸಿದಕ್ಕೆ ಕಾಡಾ ಸಮಿತಿ ನೂರು ದಿನದಲ್ಲಿ 20 ದಿನ ಆಪ್ ಅಂಡ್ ಆನ್ ಮಾಡಲು ನಿರ್ಧರಿಸಿದೆ. ಪರಿಣಾಮ ಇಂದಿನಿಂದಲೇ ಜಲಾಶಯದಿಂದ ಹರಿಯುತ್ತಿದ್ದ 2500 ಕ್ಯೂಸಕ್ ನೀರಿಗೆ ಬ್ರೇಕ್ ಹಾಕಿದೆ. ಇದರಿಂದ ಆಕ್ರೋಶಗೊಂಡ ದಾವಣಗೆರೆ ಜಿಲ್ಲಾ ರೈತರು ಇಂದು ಸಹ ಪ್ರತಿಭಟನೆ ನಡೆಸಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.
ದಾವಣಗೆರೆ(ಸೆ.22): ದಾವಣಗೆರೆ ಜಿಲ್ಲೆಯಲ್ಲಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಭದ್ರಾ ಜಲಾಶಯದಿಂದ ನೀರು ಹಠಾತ್ ನಿಲುಗಡೆ ಮಾಡಿದ್ದರಿಂದ ಸರ್ಕಾರದ ವಿರುದ್ಧ ದಾವಣಗೆರೆ ಜಿಲ್ಲೆಯ ರೈತರು ಸಿಡಿದೆದ್ದಿದ್ದಾರೆ. ಇಂದು(ಶುಕ್ರವಾರ) ದಾವಣಗೆರೆ ನಗರದಲ್ಲಿ ಬೃಹತ್ ಪ್ರತಿಭಟನೆಗೆ ಮುಂದಾಗಿ 35 ಕ್ಕೂ ರೈತರು ರೈತ ಮುಖಂಡರು ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ.
ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿಯಾಗಿರುವ ಭದ್ರಾ ಜಲಾಶಯದಿಂದ ಭದ್ರಾ ಬಲದಂಡೆ ಕಾಲುವೆಗೆ ಹರಿಯುವ ನೀರು ನಿಲುಗಡೆಯಾಗಿ ನಾಲ್ಕು ದಿನ ಕಳೆದಿದೆ. ಇದರಿಂದ ದಾವಣಗೆರೆ ಜಿಲ್ಲೆಯ ರೈತ ಸಮೂಹ ಬೆಳೆ ಕಳೆದುಕೊಳ್ಳುವ ಆತಂಕಕ್ಕೆ ಸಿಲುಕಿದೆ. ಮಳೆಗಾಲದ ಭತ್ತದ ಬೆಳೆಗೆ ನೂರು ದಿನಗಳ ನೀರು ಬಿಡುತ್ತೇವೆಂದು ಹೇಳಿದ್ದ ಸರ್ಕಾರ ಒತ್ತಡಕ್ಕೆ ಮಣಿದು ಏಕಾಏಕಿ ತನ್ನ ನಿಲುವು ಬದಲಿಸಿದೆ.
ದಾವಣಗೆರೆ: ತೀವ್ರ ಸ್ವರೂಪ ಪಡೆದುಕೊಂಡ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಹೋರಾಟ
ಭದ್ರಾವತಿ ಶಿವಮೊಗ್ಗ ರೈತರು ಕಳೆದ ಎರಡು ವಾರಗಳಿಂದ ಪ್ರತಿಭಟನೆ ನಡೆಸಿದಕ್ಕೆ ಕಾಡಾ ಸಮಿತಿ ನೂರು ದಿನದಲ್ಲಿ 20 ದಿನ ಆಪ್ ಅಂಡ್ ಆನ್ ಮಾಡಲು ನಿರ್ಧರಿಸಿದೆ. ಪರಿಣಾಮ ಇಂದಿನಿಂದಲೇ ಜಲಾಶಯದಿಂದ ಹರಿಯುತ್ತಿದ್ದ 2500 ಕ್ಯೂಸಕ್ ನೀರಿಗೆ ಬ್ರೇಕ್ ಹಾಕಿದೆ. ಇದರಿಂದ ಆಕ್ರೋಶಗೊಂಡ ದಾವಣಗೆರೆ ಜಿಲ್ಲಾ ರೈತರು ಇಂದು ಸಹ ಪ್ರತಿಭಟನೆ ನಡೆಸಿ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾರೆ
ಭದ್ರಾ ಜಲಾಶಯದಿಂದ ನೀರನ್ನು ಉಪಯೋಗಿಸಿಕೊಳ್ಳುವ ರೈತರಲ್ಲಿ ಶೇ.75 ರಷ್ಟು ಜನ ರೈತರು ದಾವಣಗೆರೆ ಜಿಲ್ಲೆಯಲ್ಲೇ ಇದ್ದಾರೆ. ಶೇ.75 ರಷ್ಟು ರೈತರು ಜಲಾಶಯದ ನೀರನ್ನು ಪ್ರತಿ ಎಕರೆಗೆ 35- 40 ಸಾವಿರ ಖರ್ಚು ಮಾಡಿ ಭತ್ತ ನಾಟಿ ಮಾಡಿದ್ದಾರೆ.ಎರಡು ಕಳೆ ತೆಗೆದ ಮೇಲೆ ಭದ್ರಾ ನೀರಿಲ್ಲ ಎಂಬ ನಿರ್ಧಾರ ರೈತರನ್ನು ಅಕ್ಷರಶಃ ಕೆರಳಿಸಿದೆ. ಇದರಿಂದ ಆಕ್ರೋಶಗೊಂಡ ರೈತರು 6 ದಿನಗಳಿಂದ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ ನಿಲುವು ಬದಲಿಸಲೇಬೇಕೆಂದು ಹಠ ಹಿಡಿದಿರುವ ರೈತರು ದಾವಣಗೆರೆ ನಗರದಲ್ಲಿ ಟ್ರಾಕ್ಟರ್ ಚಲೋಗೆ ಮುಂದಾಗಿ ಪೊಲೀಸರಿಂದ 35 ಕ್ಕು ಹೆಚ್ಚು ರೈತರನ್ನು ಬಂಧಿಸಿದ್ದಾರೆ.
ಅಮಾವಾಸ್ಯೆ ಬಳಿಕ ರಾಜ್ಯದಲ್ಲಿ ಉತ್ತಮ ಮಳೆ, ಆದರೆ ಕೆಲವು ಅವಘಡ ನಡೆಯುವ ಸಂಭವ: ಕೋಡಿಮಠಶ್ರೀ ಭವಿಷ್ಯ
ಪ್ರತಿಭಟನೆ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನಾವು ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ 35 ಕ್ಕೂ ಹೆಚ್ಚು ರೈತರನ್ನು ಬಂಧಿಸಿದ್ದೆವೆ. ರೈತರ ಸಮಸ್ಯೆ ಬಗ್ಗೆ ಸರ್ಕಾರಕ್ಕು ವರದಿ ನೀಡಿದ್ದೇವೆ.ನಮ್ಮ ಜಿಲ್ಲಾಧಿಕಾರಿ ರೈತರ ಜೊತೆ ಮಾತನಾಡಿದ್ದಾರೆ. ಪ್ರತಿಭಟನೆ ಹೆಸರಿನಲ್ಲಿ ನಾಗರಿಕರಿಗೆ ತೊಂದೆರೆಯಾಗಬಾರದೆಂದು ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.
ಇಂದು ದಾವಣಗೆರೆ ನಗರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ರ ಬರ್ತಡೆ ಸಂಭ್ರಮ. ನಗರದಲ್ಲಿ ಬಂಟಿಗ್ಸ್ ಬ್ಯಾನರ್ ಪ್ಲೆಕ್ಸ್ ಗಳು ರಾರಾಜಿಸಿದ್ದು ಎಲ್ಲೆಡೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಭದ್ರಾ ಬಲದಂಡೆ ನಾಲೆಗೆ ನೀರು ನಿಲುಗಡೆಯಾಗಿ ಇಷ್ಟು ಸಮಸ್ಯೆ ಅನುಭವಿಸಿದ್ರು ಉಸ್ತುವಾರಿ ಸಚಿವರು ರೈತರ ಸಮಸ್ಯೆ ಆಲಿಸಿಲ್ಲ ಎಂದು ಪ್ರತಿಭಟನ ನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.