ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಹಿನ್ನೆಲೆಯಲ್ಲಿ ಗ್ರಾಮದ ಕೆರೆಯ ಮೇಲ್ಭಾಗದಲ್ಲಿನ ಬಾವಿಯ ನೀರನ್ನು ಪೂರೈಸಲು ಬಳಸಲಾದ ಪೈಪ್ಲೈನ್ ದುರಾವಸ್ಥೆ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಬೀದರ್(ಜೂ.21): ಔರಾದ್ ತಾಲೂಕಿನ ಎಕಂಬಾ ಗ್ರಾಪಂ ವ್ಯಾಪ್ತಿಯ ಕರಕ್ಯಾಳ ಗ್ರಾಮದಲ್ಲಿ ಕಲಷಿತ ನೀರು ಕುಡಿದು ಮೂವರು ಮಕ್ಕಳು ಸೇರಿದಂತೆ ಮೂರ್ನಾಲ್ಕು ಕುಟಂಬಗಳ 20ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ.
ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಇತ್ಯರ್ಥಗೊಳಿಸುವ ಹಿನ್ನೆಲೆಯಲ್ಲಿ ಗ್ರಾಮದ ಕೆರೆಯ ಮೇಲ್ಭಾಗದಲ್ಲಿನ ಬಾವಿಯ ನೀರನ್ನು ಪೂರೈಸಲು ಬಳಸಲಾದ ಪೈಪ್ಲೈನ್ ದುರಾವಸ್ಥೆ ಈ ಘಟನೆಗೆ ಕಾರಣ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಈ ಮೂರ್ನಾಲ್ಕು ಮನೆಗಳಿಗೆ ಮನೆಯ ಸಮೀಪದ ಕೊಳವೆಬಾವಿಯಿಂದ ನೀರು ಪೂರೈಕೆಯಾಗಿದ್ದು, ಅದಕ್ಕೆ ಖಾಸಗಿಯಾಗಿ ಪೈಪ್ಲೈನ್ ಮಾಡಿಸಿಕೊಳ್ಳಲಾಗಿದೆ. ಈ ಪೈಪ್ಲೈನ್ ಚರಂಡಿ ಮೂಲಕ ಹಾದುಹೋಗಿದ್ದು, ಇಲ್ಲಿ ನೀರು ಕಲುಷಿತಗೊಂಡ ಘಟನೆ ನಡೆದಿದೆ. ಅಸ್ವಸ್ಥಗೊಂಡವರನ್ನು ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ.
undefined
ಕೊಪ್ಪಳ: ಕಲುಷಿತ ನೀರಿಗೆ 4ನೇ ಬಲಿ, ಕನಕಗಿರಿಯಲ್ಲಿ 5 ವರ್ಷದ ಮಗು ಸಾವು
ಜಿಲ್ಲಾ ಪಂಚಾಯತ್ ಸಿಇಒ ಶಿಲ್ಪಾ ಎಂ. ಮಾತನಾಡಿ, ಪೈಪ್ಲೈನ್ ದುರಾವಸ್ಥೆಯಿಂದಾಗಿ ಎಂಬುದು ಮೇಲ್ನೋಟಕ್ಕೆ ಕಂಡುಬಂದಿದೆ. ಆದರೂ ಎಲ್ಲ ರೀತಿಯ ನೀರು ತಪಾಸಣೆಗಳನ್ನು ನಡೆಸಿ ತಪ್ಪು ಕಂಡುಬಂದಲ್ಲಿ ಸಂಬಂಧಿತರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.