ಉಡುಪಿ ಜಿಲ್ಲೆಯಲ್ಲಿ ವಿದೇಶದಿಂದ ಬಂದಿದ್ದ 2 ಸಾವಿರಕ್ಕೂ ಅಧಿಕ ಮಂದಿಯ 14 ದಿನಗಳ ಹೋಮ್ ಕ್ವಾರಂಟೈನ್ ಮುಗಿದಿದ್ದು, ಅವರಿಗೆ ಯಾರಿಗೂ ಕೊರೋನಾ ಸೋಂಕು ಇಲ್ಲದಿರುವುದು ಸಮಾಧಾನಕ್ಕೆ ಕಾರಣವಾಗಿದೆ.
ಉಡುಪಿ(ಏ.05): ಜಿಲ್ಲೆಯಲ್ಲಿ ವಿದೇಶದಿಂದ ಬಂದಿದ್ದ 2 ಸಾವಿರಕ್ಕೂ ಅಧಿಕ ಮಂದಿಯ 14 ದಿನಗಳ ಹೋಮ್ ಕ್ವಾರಂಟೈನ್ ಮುಗಿದಿದ್ದು, ಅವರಿಗೆ ಯಾರಿಗೂ ಕೊರೋನಾ ಸೋಂಕು ಇಲ್ಲದಿರುವುದು ಸಮಾಧಾನಕ್ಕೆ ಕಾರಣವಾಗಿದೆ.
ಆದರೆ, ದುಬೈಯಿಂದ ಬಂದ ಇಬ್ಬರು ಮತ್ತು ಕೇರಳದಿಂದ ಬಂದ ಒಬ್ಬರಿಗೆ ಕೊರೋನಾ ಸಾಬೀತಾಗಿದ್ದು, ಅವರಿನ್ನೂ ಡಾ. ಟಿ.ಎಂ.ಎ. ಪೈ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಚೇತರಿಕೆಯಾಗಿದ್ದು, ಅವರನ್ನು ಇನ್ನೂ 2 ಬಾರಿ ಪರೀಕ್ಷೆಗೊಳಪಡಿಸಲಾಗುವುದು. ಈ ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ.
ಕೊರೋನಾ: ಡಾಕ್ಟರ್ ಕಷ್ಟ ಸಚಿವರ ಅನುಭವಕ್ಕೆ ಬಂತು, ಅದನ್ನು ಜನರ ಮುಂದೆ ಇಟ್ರು..!
ಕ್ವಾರಂಟೈನ್ ಮುಗಿದ ನಂತರವೂ ಕೆಲವು ದಿನಗಳ ಕಾಲ ಅವರನ್ನು ಜಿಲ್ಲಾಡಳಿತ ಫಾಲೋ ಅಪ್ ಮಾಡಲಿದೆ. ಜಿಲ್ಲಾಧಿಕಾರಿ ಕಚೇರಿಯಿಂದಲೇ ಅವರಿಗೆ ದಿನನಿತ್ಯ ಕರೆ ಮಾಡಿ ಆರೋಗ್ಯ ವಿಚಾರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೋರೋನಾ ಸಮುದಾಯಕ್ಕೆ ಹರಡುವಿಕೆ (ಕಮ್ಯುನಿಟಿ ಸೆ್ೊ್ರಡ್)ಯ ಆತಂಕ ಇಲ್ಲ. ಉಡುಪಿಯಲ್ಲಿರುವ ಕೊರೋನಾ ರೋಗಿಗಳಿಂದ ಬೇರೆಯವರಿಗೆ ಕೊರೋನಾ ಹರಡಿಲ್ಲ. ಆಸ್ಪತ್ರೆಯ ಐಸೋಲೇಶನ್ ವಾರ್ಡ್‌ಗೆ ದಾಖಲಾಗುತ್ತಿರುವ ಶಂಕಿತ ಸೋಂಕಿತರ ಸಂಖ್ಯೆ ಕೂಡ ಕಡಿಮೆಯಾಗಿದೆ. ಮೊದಲು 20 - 25 ಜನ ದಾಖಲಾದರೆ, ಈಗ ಅದು 4 - 5ಕ್ಕೆ ಇಳಿದಿದೆ ಎಂದವರು ಸಮಾಧಾನ ವ್ಯಕ್ತಪಡಿಸಿದ್ದಾರೆ.
SSLC ಹೊರತುಪಡಿಸಿ ಪರೀಕ್ಷೆ ಇಲ್ಲದೇ ಎಲ್ಲಾ ವಿದ್ಯಾರ್ಥಿಗಳು ಪಾಸ್..!
ಮತ್ತೆ 6 ಮಂದಿ ದಾಖಲು
ಶನಿವಾರ ಉಡುಪಿಯಲ್ಲಿ 6 ಮಂದಿ ಶಂಕಿತರು ದಾಖಲಾಗಿದ್ದಾರೆ. ಅವರಲ್ಲಿ 5 ಮಂದಿ ಕೋರೋನಾ ಗುಣಲಕ್ಷಣಗಳನ್ನು ಹೊಂದಿದ್ದರೆ, ಒಬ್ಬರು ಮಾತ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಶನಿವಾರ 4 ಮಂದಿಯ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಬಂದಿದೆ. ಶನಿವಾರ ಮತ್ತೆ 30 (ಅವರಲ್ಲಿ 28 ಮಂದಿ ಕೋರೋನಾ ಸಂಕಿತರೊಂದಿಗೆ ಸಂಪರ್ಕ ಇದ್ದವರು) ಮಂದಿಯ ಗಂಟಲ ದ್ರವಗಳನ್ನು ಪರೀಕ್ಷೆ ಕಳುಹಿಸಲಾಗಿದ್ದು, ಒಟ್ಟು 41 ಮಂದಿಯ ಪರೀಕ್ಷೆಯ ವರದಿ ಬರುವುದಕ್ಕೆ ಬಾಕಿ ಇದೆ. ಪ್ರಸ್ತುತ ಜಿಲ್ಲೆಯಲ್ಲಿ 24 ಮಂದಿ ಐಸೋಲೇಶನ್ ವಾರ್ಡ್‌ನಲ್ಲಿ, 717 ಮಂದಿ ಹೋಮ್ ಕ್ವಾರಂಟೈನ್ ಮತ್ತು 87 ಮಂದಿ ಹಾಸ್ಪಿಟಲ್ ಕ್ವಾರಂಟೈನ್‌ನಲ್ಲಿದ್ದಾರೆ.