ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭೆಗೆ 2023ರ ಸಾರ್ವತ್ರಿಕ ಚುನಾವಣೆಗಾಗಿ 248 ಮತಗಟ್ಟೆಗಳಿದ್ದು 1,90,214 ಮತದಾನದ ಹಕ್ಕನ್ನು ಮತದಾರರು ಪಡೆದಿರುತ್ತಾರೆಂದು ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ರಿಷಿ ಆನಂದ್ ತಿಳಿಸಿದರು.
,ಮಧುಗಿರಿ.: ಮಧುಗಿರಿ ವಿಧಾನಸಭಾ ಕ್ಷೇತ್ರದಲ್ಲಿ ವಿಧಾನಸಭೆಗೆ 2023ರ ಸಾರ್ವತ್ರಿಕ ಚುನಾವಣೆಗಾಗಿ 248 ಮತಗಟ್ಟೆಗಳಿದ್ದು 1,90,214 ಮತದಾನದ ಹಕ್ಕನ್ನು ಮತದಾರರು ಪಡೆದಿರುತ್ತಾರೆಂದು ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ರಿಷಿ ಆನಂದ್ ತಿಳಿಸಿದರು.
ಸೋಮವಾರ ಇಲ್ಲಿನ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಪೂರ್ವ ಸಿದ್ಧೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, 95,661 ಪುರುಷ ಮತದಾರರು, 94,551 ಮಹಿಳಾ ಮತದಾರರು 2 ಇತರೆ ಮತದಾರರಿದ್ದಾರೆ. 248 ಮತದಾನ ಕೇಂದ್ರಗಳ ಪೈಕಿ 12 ಸೂಕ್ಷ್ಮ, 1 ಅತಿ ವಲ್ನಬಲ್‌ಎಂದು ಗುರುತಿಸಲಾಗಿದೆ. 80 ವರ್ಷ ಮೇಲ್ಪಟ್ಟ5444 ಹಾಗೂ ವಿಶೇಷ ಚೇತನ 2848 ಮತದಾರರಿದ್ದಾರೆ. ಕಸಿನಾಯಕನಹಳ್ಳಿ ಮತಗಟ್ಟೆವ್ಯಾಪ್ತಿಯಲ್ಲಿ ಮಧುಗಿರಿ ಪಟ್ಟಣದ ರಾಘವೇಂದ್ರಕಾಲೋನಿ ವಾಸಿ ರವಿಕುಮಾರ್ ಅವರು 18 ಮತದಾರರನ್ನು ದುರ್ಬಲತೆ ಮಾಡುತ್ತಿದ್ದಾರೆಂದು 2023ರ ಫೆ.14 ರಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಸ್ಮಂಗಿಕಾವಲ್,ಬೂತನಹಳ್ಳಿ, ಬೋರಾಗಂಟೆ,ದೇವರತೋಪು,ಮಧುಗಿರಿ, 1,2,4,16,20,21,22,ಮತಗಟ್ಟೆಕೇಂದ್ರಗಳನ್ನು ಅತಿ ಸೂಕ್ಷ್ಮವೆಂದು ಗುರುತಿಸಲಾಗಿದೆ. 25 ಮತಗಟ್ಟೆಗಳು ಪಟ್ಟಣದಲ್ಲಿದ್ದು, 223 ಮತಗಟ್ಟೆಗಳು ಗ್ರಾಮಾಂತರದಲ್ಲಿವೆ. 162 ಏಕ ಮತಗಟ್ಟೆಗಳು, 34 ಎರೆಡು ಮತಗಟ್ಟೆಗಳನ್ನು ಹೊಂದ್ದಿದ್ದು, 6 ಕಟ್ಟಡಗಳಲ್ಲಿ 3 ಮತಗಟ್ಟೆಗಳು ಹೊಂದಿರುವ ಮತಗಟ್ಟೆಕೇಂದ್ರಗಳಿವೆ ಎಂದು ಮಾಹಿತಿ ನೀಡಿದರು.
20 ಸೆಕ್ಟರ್ ಅಧಿಕಾರಿಗಳು ನೇಮಕವಾಗಿದ್ದು, 4 ಎಸ್‌ಎಸ್‌ಟಿ ತಂಡಗಳು 1, ವಿಎಸ್‌ಟಿ ತಂಡ , 1 ವಿವಿಟಿ ತಂಡ , ಎಸ್‌ಎಸ್‌ಟಿ 5 ತಂಡಗಳು ನೇಮಕವಾಗಿವೆ ಎಂದರು. ಮಧುಗಿರಿ ಪಟ್ಟಣದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ಟ್ರಾಂಗ್ ರೂಮ್ ತೆರೆದಿದ್ದು ಅಲ್ಲಿ ಮತಪೆಟ್ಟಿಗೆ ಇವಿಎಂ ಮೆಷನ್‌ಗಳನ್ನು ಇರಿಸಿ ಪ್ರತಿನಿತ್ಯ ಕಾವಲು ಕಾಯಲಾಗುತ್ತಿದೆ. ತಾಲೂಕಿನ ಮುದ್ದೇನಹಳ್ಳಿ ,ರಂಟವಳಲು,ಚಂದ್ರಬಾವಿ,ಮಧುಗಿರಿ ಭೈಪಾಸ್‌ನಲ್ಲಿ 4 ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಏ.13 ರಂದು ಚುನಾವಣೆ ಆಧಿಸೂಚನೆ ಹೊರಡಿಸಲಾಗುವುದು. ಅಂದಿನಿಂದ ಏ.20ರವರೆಗೂ ನಾಮಪತ್ರ ಸಲ್ಲಿಸಬಹುದಾಗಿದೆ. 21ರಂದು ನಾಮಪತ್ರ ಪರಿಶೀಲನೆ 24 ನಾಮ ಪತ್ರ ಹಿಂಪಟೆಯಲು ಕೊನೆ ದಿನವಾಗಿದೆ. ಮೇ.10ರಂದು ಮತದಾನ ನಡೆಯಲಿದೆ. ಮೇ 13 ರಂದು ಫಲಿತಾಂಶ ಹೊರ ಬೀಳಲಿದೆ. ಚುನಾವಣಾ ಪ್ರಕ್ರಿಯೇ ಮೇ.15ಕ್ಕೆ ಪೂರ್ಣಗೊಳ್ಳಲಿದೆ ಎಂದರು.
ಸಹಾಯಕ ಚುನಾವಣಾಧಿಕಾರಿ ಹಾಗೂ ತಹಸೀಲ್ದಾರ್ ಸಿಗ್ಬತುಲ್ಲಾ ಚುನಾವಣಾ ಶಿರಸ್ತೇದಾರ ಪರಿವೀನ್ ಹಾಗೂ ಚುನಾವಣಾ ಸಿಬ್ಬಂದಿ ಇದ್ದರು.
ಚುನಾವಣಾ ಅಕ್ರಮ ಪ್ರಕರಣ ದಾಖಲು
ಅಬಕಾರಿ ಇಲಾಖೆಯವರು 4 ಕಡೆ ದಾಳಿ ನಡೆಸಿ 7 ಘೋರ ಪ್ರಕರಣಗಳು ಸೇರಿದಂತೆ 20 ಪ್ರಕರಣಗಳನ್ನು ದಾಖಲಿಸಿಕೊಂಡು 8 ಆರೋಪಿಗಳನ್ನು ಬಂಧಿಸಲಾಗಿದೆ. ಇಲ್ಲಿವರೆಗೂ 2 ಲಕ್ಷ 46 ಸಾವಿರದ 830 ರು.ಮೌಲ್ಯದ 599.94 ಲೀನಷ್ಟುಮದ್ಯವನ್ನು ಜಪ್ತಿ ಮಾಡಲಾಗಿದೆ. 5 ದ್ವಿಚಕ್ರವಾಹನ ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.
ನಿಷೇಧ: ನಾಮಪತ್ರ ಸಲ್ಲಿಕೆಯನ್ನು ತಾಲೂಕು ಆಡಳಿತ ಸೌಧದಲ್ಲಿರುವ ಸಭಾಭವನದಲ್ಲಿ ವ್ಯವಸ್ಥೆ ಮಾಡಲಾಗಿದೆ.ತಾಲೂಕು ಆಡಳಿತ ಸೌಧದ ಸುತ್ತ 144 ಸಕ್ಷನ್ ಜಾರಿಯಲ್ಲಿರುವ ಕಾರಣ ನಾಮಪತ್ರ ಸಲ್ಲಿಕೆ ದಿನಗಳಲ್ಲಿ ತಾಲೂಕು ಆಡಳಿತಕ್ಕೆ ಹೊಂದಿರುವ ಕಟ್ಟಡಗಳಲ್ಲಿ ಯಾವುದೇ ವ್ಯಾಪಾರ ವಹಿವಾಟನ್ನು ನಿಷೇಧಿಸಲಾಗಿದೆ ಎಂದು ಚುನಾವಣಾಧಿಕಾರಿ ರಿಷಿ ಆನಂದ್ ತಿಳಿಸಿದರು