ಹನಿ ನೀರಿಗಾಗಿ ಬಾಯ್ತೆರೆದ ಮೊಳಕೆ; ಸಾಯುವ ಮುನ್ನ ಸುರಿಬಾರದೇ ಮಳೆರಾಯ!

By Ravi Janekal  |  First Published Jun 22, 2023, 12:19 PM IST

ಬೀದರ್ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೈಕೊಟ್ಟಿರುವ ಹಿನ್ನೆಲೆ ಕೃಷಿ ಚಟುವಟಿಕೆ ನಡೆಯದೆ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಬಹುತೇಕ ರೈತರು ಮುಂಗಾರು - ಹಂಗಾಮಿನ ಬೀಜ ಬಿತ್ತನೇ ಮಾಡಿದ್ದು, ಮಳೆಯ ಕೊರತೆಯಿಂದ ಆತಂಕ ದುಪ್ಪಟ್ಟಾಗಿದೆ.


ಬೀದರ್ (ಜೂ.22) : ಬೀದರ್ ಜಿಲ್ಲೆಯಲ್ಲಿ ಈ ಬಾರಿ ಮಳೆ ಕೈಕೊಟ್ಟಿರುವ ಹಿನ್ನೆಲೆ ಕೃಷಿ ಚಟುವಟಿಕೆ ನಡೆಯದೆ ರೈತರು ಕಂಗಾಲಾಗಿದ್ದಾರೆ. ಈಗಾಗಲೇ ಬಹುತೇಕ ರೈತರು ಮುಂಗಾರು - ಹಂಗಾಮಿನ ಬೀಜ ಬಿತ್ತನೇ ಮಾಡಿದ್ದು, ಮಳೆಯ ಕೊರತೆಯಿಂದ ಆತಂಕ ದುಪ್ಪಟ್ಟಾಗಿದೆ.

ಮತ್ತೊಂದು ಕಡೆ ಭೂಮಿ ಹದ ಮಾಡಿಟ್ಟು ಆಕಾಶದತ್ತ ಮುಖ‌ ಮಾಡಿ ಮಳೆರಾಯನಿಗಾಗಿ ಕಾದು ಕುಳಿತ ರೈತರು. ಇನ್ನು ನಾಲ್ಕೈದು ದಿನ ಕಳೆದರೇ ಉದ್ದು- ಹೆಸರು ಬಿತ್ತಲು ಬರಲ್ಲ ಎಂದ ಕೃಷಿ ಅಧಿಕಾರಿಗಳು. ಇದರಿಂದ ರೈತರು ಬೆಳೆಯಿಲ್ಲದೆ ದುಃಖಿರಾಗಿದ್ದಾರೆ. ಕಳೆದ ಬಾರಿ ಮಳೆ ಸುರಿದು ಬಿತ್ತನೆ ಕಾರ್ಯಗಳು ನಡೆದಿದ್ದವು. ಆದರೆ ಈ ಬಾರಿ ಮುಂಗಾರು ಬಂದು ತಿಂಗಳಾಗುತ್ತಾ ಬಂದರೂ ಹನಿ ನೀರಿಲ್ಲ. . 

Tap to resize

Latest Videos

undefined

ಕೈ ಕೊಟ್ಟ ಮಳೆರಾಯ: ಕಾದು ಕೂತಿದ್ದ ರೈತ​ರಿಗೆ ‘ಅನ್ಯಾಯ’

ಒಂದು ಬಾರಿ ಅತಿವೃಷ್ಠಿಯಿಂದ ರೈತರು ಕಂಗಾಲ ಆದರೆ ಈ ವರ್ಷ ಅನಾವೃಷ್ಠಿಯಿಂದ ದಿಕ್ಕುತೋಚದಂತಾದ ರೈತರು. ಬಿಪರ್ಜಾಯ್ ಚಂಡಮಾರುತದ ಹೊಡೆತಕ್ಕೆ ಜಿಲ್ಲೆಯಲ್ಲಿ ಕೈಕೊಟ್ಟಿರುವ ಮಳೆ. ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೀಜ ಬಿತ್ತನೇ ಮಾಡಿ ಆಕಾಶ ನೋಡುತ್ತಾ ಕುಳಿತಿರುವ ರೈತರು.

 ಈ ಬಾರಿ ಸಾಧಾರಣ ಮಳೆಯಾಗಲಿದೆ ಎಂದಿರುವ ಹವಾಮಾನ ಇಲಾಖೆ ಇದರಿಂದ ರೈತರನ್ನು ಇನ್ನಷ್ಟು ಆತಂಕಕ್ಕೀಡು ಮಾಡಿದೆ.  ಬಿತ್ತನೆ ಬೀಜ, ಗೊಬ್ಬರ ರೆಡಿ ಇಟ್ಟುಕೊಂಡು ಮಳೆರಾಯನ ಹಾದಿ ನೋಡುತ್ತಿರುವ ರೈತರು. ಇನ್ನು ಈಗಾಗಲೇ ಮಳೆರಾಯನ ನಂಬಿ ಬಿತ್ತನೆ ಮಾಡಿದ ಹೊಲದಲ್ಲಿ ಸಾಲು ಸಾಲು ಮೊಳಕೆ ಬಂದಿದೆ. ಆದರೆ ಮಳೆ ಇಲ್ಲದೇ ಮೊಳಕೆಗಳು ನಾಶವಾಗುವ ಭಯದಲ್ಲಿರುವ ಜಿಲ್ಲೆಯ ರೈತರು. ಬೆಳೆಗಳು ಉಳಿಸಿಕೊಳ್ಳಲು ಸರ್ಕಾರ ಮೋಡ ಬಿತ್ತನೆ ಮಾಡಬೇಕು ಎಂದು ಮನವಿ ಮಾಡುತ್ತಿರುವ ರೈತರು. ಇದರ ಜೊತೆಗೆ ಗ್ಯಾರಂಟಿ ಜೊತೆ ತೆಲಂಗಾಣ ‌ಮಾದರಿಯಲ್ಲಿ ರೈತರಿಗೆ ಪರಿಹಾರ ಘೋಷಣೆ ಮಾಡಲಿ ಎಂದು ರೈತರು ಮನವಿ ಮಾಡಿದ್ದಾರೆ.

ಯಾದಗಿರಿ: ಕೈಕೊಟ್ಟ ಮಳೆ, ಬೆಳೆಗೆ ನೀರುಣಿಸಲು ಸ್ಟ್ರಿಂಕ್ಲರ್‌ ಮೊರೆ..!

click me!