ಶಿವಮೊಗ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೃಷಿ ಚಟುವಟಿಕೆಗೆ ರೈತರು ಅಣಿಯಾಗುತ್ತಿದ್ದಾರೆ. ಕೆಲವೆಡೆ ಭೂಮಿ ಹಸನು ಕಾರ್ಯ ನಡೆಸಲಾಗುತ್ತಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಮೂಡ ಕವಿದ ವಾತಾವರಣವೇ ಮುಂದುವರೆದಿದೆ.ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜೂ.27): ಕಳೆದ ಮೂರ್ನಾಲ್ಕು ದಿನದಿಂದ ಜಿಲ್ಲೆಯಲ್ಲಿ ಮುಂಗಾರು ಕ್ಷಿಣಿಸಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾದ ವರದಿಯಾಗಿದೆ.
ಶಿವಮೊಗ್ಗ ನಗರದಲ್ಲೂ ಶುಕ್ರವಾರ ಮೋಡ-ಬಿಸಿಲಿನ ವಾತಾವರಣ ಕಂಡುಬಂದಿತು. ಈಗಾಗಲೇ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕೃಷಿ ಚಟುವಟಿಕೆಗೆ ರೈತರು ಅಣಿಯಾಗುತ್ತಿದ್ದಾರೆ. ಕೆಲವೆಡೆ ಭೂಮಿ ಹಸನು ಕಾರ್ಯ ನಡೆಸಲಾಗುತ್ತಿದೆ.
ಹೆಚ್ಚಿದ ಕಡಲ್ಕೊರೆತ: ನೆಲಕಚ್ಚುತ್ತಿದೆ ತಿಮ್ಮಕ್ಕ ವನದ ಬೇಲಿ
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಸರಾಸರಿ 3.80 ಮಿ.ಮೀ. ಮಳೆ ದಾಖಲಾಗಿದೆ. ಜೂನ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 390.67 ಮಿ.ಮೀ. ಇದ್ದು, ಇದುವರೆಗೆ ಸರಾಸರಿ 253.62 ಮಿ.ಮೀ. ಮಳೆ ದಾಖಲಾಗಿದೆ. ಶಿವಮೊಗ್ಗ 6.80 ಮಿ.ಮೀ., ಭದ್ರಾವತಿ 7.40 ಮಿ.ಮೀ., ತೀರ್ಥಹಳ್ಳಿ 0.00 ಮಿ.ಮೀ., ಸಾಗರ 3.40 ಮಿ.ಮೀ. ಶಿಕಾರಿಪುರ 3.60 ಮಿ.ಮೀ. ಸೊರಬ 3.20 ಮಿ.ಮೀ. ಹಾಗೂ ಹೊಸನಗರ 2.20 ಮಿ.ಮೀ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ:
ಲಿಂಗನಮಕ್ಕಿ: 1819 (ಗರಿಷ್ಠ), 1757.40 (ಇಂದಿನ ಮಟ್ಟ), 0.00 (ಒಳಹರಿವು), 8293.01 (ಹೊರಹರಿವು).
ಭದ್ರಾ: 186 (ಗರಿಷ್ಠ), 138.70 (ಇಂದಿನ ಮಟ್ಟ), 2420.00 (ಒಳಹರಿವು), 163.00 (ಹೊರಹರಿವು).
ತುಂಗಾ: 588.24 (ಗರಿಷ್ಠ), 587.72 (ಇಂದಿನ ಮಟ್ಟ), 2335.00 (ಒಳಹರಿವು), 2335.00 (ಹೊರಹರಿವು).
ಮಾಣಿ: 595 (ಎಂಎಸ್‌ಎಲ್‌ಗಳಲ್ಲಿ), 572.22 (ಇಂದಿನ ಮಟ್ಟಎಂ.ಎಸ್.ಎಲ್‌ನಲ್ಲಿ), 260 (ಒಳಹರಿವು), 2158.00 (ಹೊರಹರಿವು ಕ್ಯೂಸೆಕ್‌ಗಳಲ್ಲಿ).
ಪಿಕ್‌ಅಪ್: 563.88 (ಎಂಎಸ್‌ಎಲ್‌ಗಳಲ್ಲಿ), 561.82 (ಇಂದಿನ ಮಟ್ಟಎಂ.ಎಸ್.ಎಲ್‌ನಲ್ಲಿ), 2914 (ಒಳಹರಿವು), 0.00(ಹೊರಹರಿವು ಕ್ಯೂಸೆಕ್‌ಗಳಲ್ಲಿ).
ಚಕ್ರ: 580.57 (ಎಂ.ಎಸ್.ಎಲ್‌ಗಳಲ್ಲಿ), 565.60 (ಇಂದಿನ ಮಟ್ಟಎಂ.ಎಸ್.ಎಲ್‌ನಲ್ಲಿ), 323.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್‌ಗಳಲ್ಲಿ).
ಸಾವೆಹಕ್ಲು: 583.70 (ಗರಿಷ್ಠ ಎಂಎಸ್‌ಎಲ್‌ಗಳಲ್ಲಿ), 574.51 (ಇಂದಿನ ಮಟ್ಟಎಂ.ಎಸ್.ಎಲ್‌ನಲ್ಲಿ), 327.00 (ಒಳಹರಿವು), 0.00 (ಹೊರಹರಿವು ಕ್ಯೂಸೆಕ್‌ಗಳಲ್ಲಿ).