ಪ್ರಧಾನಿ ಮೋದಿ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಸಬ್‌ಕೆ ಸಾತ್ ಅಂದ್ರೆ ಆರ್ಎಸ್ಎಸ್ ಜೊತೆ ಮಾತ್ರ ಎನ್ನುವಂತಾಗಿದೆ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ನಾವೀಗ ಬದಲಾವಣೆಯ ಕಾಲ ಘಟ್ಟದಲ್ಲಿದ್ದೇವೆ. ಕಾಂಗ್ರೆಸ್ ತಳಮಟ್ಟದಿಂದ ಕಟ್ಟಬೇಕು ಎಂದು ಅವರು ತಿಳಿಸಿದ್ದಾರೆ.
ಶಿವಮೊಗ್ಗ(ಸೆ.11): ನಾವೀಗ ಬದಲಾವಣೆಯ ಕಾಲ ಘಟ್ಟದಲ್ಲಿದ್ದೇವೆ. ಕಾಂಗ್ರೆಸ್ ತಳಮಟ್ಟದಿಂದ ಕಟ್ಟಬೇಕು. ಪ್ರಧಾನಿ ಮೋದಿ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸುತ್ತಿದ್ದಾರೆ. ಸಬ್‌ಕೆ ಸಾತ್ ಅಂದ್ರೆ ಆರ್ಎಸ್ಎಸ್ ಜೊತೆ ಮಾತ್ರ ಎನ್ನುವಂತಾಗಿದೆ ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ತೀರ್ಥಹಳ್ಳಿಯಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಗ್ರಾಪಂ ಮತ್ತು ಪಪಂ ಚುನಾವಣಾ ಪೂರ್ವ ಸಿದ್ಧತೆಯ ಬಗ್ಗೆ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಮೋದಿ ಅವರದ್ದು ಬುರುಡೆ ಮಾತು. ಹಿಂದೆ ಪ್ರಧಾನಿ ಮನಮೋಹನ್ ಸಿಂಗ್ ಅವಧಿಯಲ್ಲಿ ಜನರಿಗೆ ದುಡಿಯುವ ಹಕ್ಕು ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ. ಆದರೆ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದ ಬಡವರಿಗೆ ಕಳೆದ ಎರಡು ವರ್ಷಗಳಿಂದ ದುಡ್ಡೇ ಬಂದಿಲ್ಲ ಎಂದು ಹೇಳಿದರು.
ಶಿವಮೊಗ್ಗ: ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯುವಕ ಯತ್ನ..ವೈರಲ್ ವಿಡಿಯೋ
ರಾಜಕೀಯ ಎನ್ನುವುದು ಜನರ ಸಮಾಜಿಕ ಸೇವೆಯ ಹೋರಾಟದ ಕ್ಷೇತ್ರ. ಕೇವಲ ಚುನಾವಣೆಗೆ ಮಾತ್ರ ಸೀಮಿತವಲ್ಲ. ಕಾಂಗ್ರೆಸ್ ಕಾರ್ಯಕರ್ತರಿಗೆ ಪಕ್ಷದ ತತ್ವ ಸಿದ್ಧಾಂತ ತಿಳಿಸುವ ಅಗತ್ಯವಿದೆ. ಪ್ರತಿ ಪಂಚಾಯಿತಿಯಲ್ಲೂ ಕಾರ್ಯಕರ್ತರ ಪಡೆ ಬೇಕು ಎಂದರು.
ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮಾತನಾಡಿ, ಸಿದ್ಧಾಂತದ ಮೇಲೆ ನಂಬಿಕೆ ಇಟ್ಟಚುನಾವಣೆ ಇದಲ್ಲ. ಸಂಘಟನೆಯ ದೃಷ್ಟಿಇಲ್ಲಿದೆ. ಕ್ಷೇತ್ರದ ಎಲ್ಲ ಗ್ರಾಪಂಗೂ ಭೇಟಿ ನೀಡಿ ಕಾರ್ಯಕರ್ತರಿಗೆ ಮನವರಿಕೆ ಮಾಡಿಕೊಡಲಾಗುವುದು. ಅ.30ರೊಳಗೆ ಪ್ರತಿ ಗ್ರಾಪಂನಲ್ಲೂ ಸಭೆ ನೆಡೆಸಲಿದ್ದೇವೆ. ಬಿಜೆಪಿಯನ್ನು ತಡೆಯಲು ಹೋರಾಟ ಮಾಡಬೇಕಾಗುತ್ತದೆ. ಜನರ ಧಾರ್ಮಿಕ ಭಾವನೆ ಕೆರಳಿಸುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ಹಿಂದು ಮಹಾಸಭಾ ಗಣಪತಿ ಭವ್ಯ ಮೆರವಣಿಗೆ
ಈ ಸಂದರ್ಭದಲ್ಲಿ ನೂತನವಾಗಿ ಜಾರಿಗೆ ತಂದಿರುವ ಸಂಚಾರ ನಿಯಂತ್ರಣ ನಿಯಮಗಳಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳಿಗೆ ಪರಿಹಾರ ಒದಗಿಸುವಂತೆ ರಾಜ್ಯ ಸರ್ಕಾರವನ್ನು ಕೋರಿ ನಿರ್ಣಯವನ್ನು ಅಂಗೀಕರಿಸಲಾಯಿತು. ಜನಸಾಮಾನ್ಯರ ಬದುಕನ್ನೇ ಈ ತಿದ್ದುಪಡಿ ಕಾಯಿದೆ ದುರ್ಬಲಗೊಳಿಸಿದೆ. ನಿರ್ಣಯದಲ್ಲಿ ನಿಯಮಾವಳಿಗೆ ತಿದ್ದುಪಡಿ ತಂದು ಜನತೆಗೆ ಕಾನೂನಿನ ಅರಿವು ಮೂಡಿಸಿ, ಎರಡು ವರ್ಷಗಳ ವರೆಗೆ ದಂಡ ಶುಲ್ಕದಲ್ಲಿ ಅರ್ಧದಷ್ಟುವಿನಾಯಿತಿ ನೀಡಬೇಕು ಎಂದು ಒತ್ತಾಯಿಸಿದರು.
ಶಿಕಾರಿಪುರಕ್ಕೆ ನೂತನ ಬಸ್ ಡಿಪೋ ಮಂಜೂರು