ಬೆಂಗಳೂರು: ಮೆಟ್ರೋದಲ್ಲಿ ಇಂದಿನಿಂದ ಮೊಬಿಲಿಟಿ ಕಾರ್ಡ್‌ ಲಭ್ಯ

By Kannadaprabha News  |  First Published Mar 30, 2023, 6:30 AM IST

ಬೆಂಗಳೂರು ಮೆಟ್ರೋ ರೈಲು ನಿಗಮ ಆರ್‌ಬಿಎಲ್‌ (ರತ್ನಾಕರ) ಬ್ಯಾಂಕ್‌ ಸಹಯೋಗದಲ್ಲಿ ರುಪೇ ಎನ್‌ಸಿಎಂಸಿ ಕಾರ್ಡ್‌ ಪೂರೈಕೆಗೆ ಒಡಂಬಡಿಕೆ ಮಾಡಿಕೊಂಡಿದೆ. ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ನಂತೆ ಇದನ್ನು ರಿಚಾರ್ಜ್‌ ಮಾಡಿಸಿಕೊಂಡು ಮೆಟ್ರೋ ಪ್ರಯಾಣ ಮಾಡಬಹುದು.


ಬೆಂಗಳೂರು(ಮಾ.30): ನಗರದ ಎಲ್ಲಾ ಮೆಟ್ರೋ ನಿಲ್ದಾಣಗಳಲ್ಲಿ ಮಾ.30ರಿಂದ ನ್ಯಾಷನಲ್‌ ಕಾಮನ್‌ ಮೊಬಲಿಟಿ ಕಾರ್ಡ್‌ (ಎನ್‌ಸಿಎಂಸಿ) ಪ್ರಯಾಣಿಕರಿಗೆ ಲಭ್ಯವಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲ್ವೆ ನಿಗಮ ತಿಳಿಸಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಆರ್‌ಬಿಎಲ್‌ (ರತ್ನಾಕರ) ಬ್ಯಾಂಕ್‌ ಸಹಯೋಗದಲ್ಲಿ ರುಪೇ ಎನ್‌ಸಿಎಂಸಿ ಕಾರ್ಡ್‌ ಪೂರೈಕೆಗೆ ಒಡಂಬಡಿಕೆ ಮಾಡಿಕೊಂಡಿದೆ. ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ನಂತೆ ಇದನ್ನು ರಿಚಾರ್ಜ್‌ ಮಾಡಿಸಿಕೊಂಡು ಮೆಟ್ರೋ ಪ್ರಯಾಣ ಮಾಡಬಹುದು.

‘ಒಂದು ರಾಷ್ಟ್ರ ಒಂದು ಕಾರ್ಡ್‌’ ಘೋಷಣೆಯಡಿ ಇದನ್ನು ಪ್ರಯಾಣಿಕರಿಗೆ ವಿತರಿಸಲಾಗುತ್ತಿದೆ. ನಗರದ 6 ಲಕ್ಷಕ್ಕೂ ಹೆಚ್ಚಿನ ಮೆಟ್ರೋ ಬಳಕೆದಾರರಿಗೆ ಎನ್‌ಸಿಎಂಸಿ ಕಾರ್ಡ್‌ ಬಳಕೆಗೆ ಲಭ್ಯವಾಗಲಿದೆ. ಎಲ್ಲ ಮೆಟ್ರೋ ನಿಲ್ದಾಣದಲ್ಲಿ ಹಾಗೂ ಆರ್‌ಬಿಎಲ್‌ ಬ್ಯಾಂಕ್‌ ಶಾಖೆಗಳಲ್ಲಿ ಎನ್‌ಸಿಎಂಸಿ ಕಾರ್ಡನ್ನು ಪಡೆದುಕೊಳ್ಳಬಹುದು. ಇದರ ಬಳಕೆಗಾಗಿ ಎಲ್ಲ ನಿಲ್ದಾಣಕ್ಕೆ ಆರ್‌ಬಿಎಲ್‌ ವತಿಯಿಂದ ಪಿಒಎಸ್‌ ಮಷಿನ್‌ಗಳನ್ನು ನೀಡಿದೆ.

Tap to resize

Latest Videos

ಮೋದಿಯಿಂದ ಅಪೂರ್ಣ ಮೆಟ್ರೋ ಉದ್ಘಾಟನೆ: ಸುರ್ಜೇವಾಲಾ

ನಿಲ್ದಾಣಗಳಲ್ಲಿ ಹಾಗೂ ಜತೆಗೆ ಆರ್‌ಬಿಎಲ್‌ ಬ್ಯಾಂಕ್‌ನ MoBank ಆ್ಯಪ್‌ ಮೂಲಕವೂ ಎನ್‌ಸಿಎಂಸಿ ಕಾರ್ಡನ್ನು ರಿಚಾಜ್‌ರ್‍ ಮಾಡಿಕೊಳ್ಳಲು ಅವಕಾಶವಿದೆ. ಅದಲ್ಲದೆ ಎನ್‌ಸಿಎಂಸಿ ಕಾರ್ಡನ್ನು ಖಾಸಗಿ ವಾಹನಗಳಿಗೆ ಇಂಧನ ಭರ್ತಿ, ಶಾಪಿಂಗ್‌, ಟೋಲ್‌ ಶುಲ್ಕ ಪಾವತಿ, ಪಾರ್ಕಿಂಗ್‌ ಸೇರಿ ಇತರೆ ಪಾವತಿಗೂ ಬಳಸಲು ಸಾಧ್ಯವಿದೆ.

click me!