'ದೇಶದ್ರೋಹದ ಘೋಷಣೆ ಕೂಗಿದವರನ್ನು ಒದ್ದು ಒಳಗೆ ಹಾಕಿ'

Kannadaprabha News   | Asianet News
Published : Feb 16, 2020, 07:19 AM IST
'ದೇಶದ್ರೋಹದ ಘೋಷಣೆ ಕೂಗಿದವರನ್ನು ಒದ್ದು ಒಳಗೆ ಹಾಕಿ'

ಸಾರಾಂಶ

ದೇಶದ್ರೋಹದ ಘೋಷಣೆ ಕೂಗಿದವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕು: ಬಸವರಾಜ ಹೊರಟ್ಟಿ|ನಮ್ಮ ಸಮಾಜದಲ್ಲಿ ಬೇಕಾದವರು ಬೇಕಾದ್ದನ್ನು ಮಾಡುತ್ತಿದ್ದಾರೆ| ಈ ವಿಷಯದಲ್ಲಿ ಏನು ಮಾಡುತ್ತಿದ್ದಾರೆ ನನಗೂ ತಿಳಿಯುತ್ತಿಲ್ಲ|

ಧಾರವಾಡ(ಫೆ.16): ಹುಬ್ಬಳ್ಳಿಯ ಕಾಲೇಜಿನಲ್ಲಿ ದೇಶದ್ರೋಹದ ಘೋಷಣೆ ಕೂಗಿದವರನ್ನು ಪೊಲೀಸರು ಒದ್ದು ಒಳಗೆ ಹಾಕಬೇಕೆಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.

ಧಾರವಾಡದಲ್ಲಿ ಶನಿವಾರ ಈ ಕುರಿತು ಮಾತನಾಡಿದದ ಅವರು, ನಮ್ಮ ಸಮಾಜದಲ್ಲಿ ಬೇಕಾದವರು ಬೇಕಾದ್ದನ್ನು ಮಾಡುತ್ತಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈ ವಿಷಯದಲ್ಲಿ ಏನು ಮಾಡುತ್ತಿದ್ದಾರೆ ನನಗೂ ತಿಳಿಯುತ್ತಿಲ್ಲ. ಈ ಬಗ್ಗೆ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದ್ದಾರೆ. 

'ಪಾಕಿಸ್ತಾನ್ ಜಿಂದಾಬಾದ್'ಎಂದ ಹುಬ್ಬಳ್ಳಿಯ KLE ವಿದ್ಯಾರ್ಥಿಗಳು ಅರೆಸ್ಟ್

ಈ ಸರ್ಕಾರ ಕೇವಲ ಪಕ್ಷದ ಸರ್ಕಾರವಾಗಿ ಹೋಗಿದೆ. ಇವರ ಹಿಂದೆ- ಮುಂದೆ ಇದ್ದವರೇ ಇಂತಹ ಕೆಲಸ ಮಾಡುತ್ತಿದ್ದಾರೆ. ಬಿಜೆಪಿ ಮುಖಂಡರು ಎಂತಹ ಅಧಿಕಾರ ನಡೆಸುತ್ತಿದ್ದಾರೆ ತಮಗೂ ತಿಳಿಯುತ್ತಿಲ್ಲ. ರಾಜಕೀಯ ಬೆಂಬಲ ಇದ್ದರೂ ದೇಶದ್ರೋಹಿಗಳನ್ನು ನೋಡುವ ಬದಲು ದೇಶಪ್ರೇಮವನ್ನು ತೋರಬೇಕು. ಕೂಡಲೇ ಪೊಲೀಸರು ಅವರನ್ನು ಒಳಗೆ ಹಾಕಬೇಕೆಂದು ಹೊರಟ್ಟಿ ಹೇಳಿದ್ದಾರೆ.
 

PREV
click me!

Recommended Stories

ಆತಂಕದ ವಿಷಯ: ಬೆಂಗಳೂರಿನಲ್ಲಿ 11 ವರ್ಷದ ಮಕ್ಕಳಿಗೂ ಡ್ರಗ್ಸ್‌ ಚಟ!
ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!