ಕಲಬುರಗಿ: ಮಾಜಿ ಸಚಿವ ಗುರುನಾಥ ಸಹೋದರ ಪುತ್ರನ ಭೀಕರ ಹತ್ಯೆ

By Kannadaprabha News  |  First Published Mar 1, 2020, 2:30 PM IST

ಮಾಜಿ ಸಚಿವ ಸಿ. ಗುರುನಾಥ ಅವರ ಸಹೋದರನ ಪುತ್ರನ ಕೊಲೆ| ಕಲಬುರಗಿ ಜಿಲ್ಲೆಯ ಶಹಾಬಾದನಲ್ಲಿ ನಡೆದ ಘಟನೆ| ಸತೀಶ್ ಬೈಲಪ್ಪ ಕಂಬಾನೋರ ಕೊಲೆಯಾದ ವ್ಯಕ್ತಿ| 


ಕಲಬುರಗಿ(ಮಾ.01):  ಮಾಜಿ ಸಚಿವ ಸಿ. ಗುರುನಾಥ ಅವರ ಸಹೋದರನ ಪುತ್ರನನ್ನು ಶನಿವಾರ ಹಾಡುಹಗಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಜಿಲ್ಲೆಯ ಶಹಾಬಾದನಲ್ಲಿ ನಡೆದಿದೆ. 

ವಾಡಿಯ ಎಸಿಸಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಮಾಜಿ ಸಚಿವ ಸಿ. ಗುರುನಾಥ ಅವರ ಸಹೋದರನ ಪುತ್ರ ಸತೀಶ್ ಬೈಲಪ್ಪ ಕಂಬಾನೋರ (42) ಎಂಬುವರ ಬೈಕ್‌ನ್ನು ದುಷ್ಕರ್ಮಿಗಳು ಶಂಕರವಾಡಿ ಗ್ರಾಮದ ರಘೋಜಿ ಫ್ಯಾಕ್ಟರಿ ಬಳಿ ಅಡ್ಡಗಟ್ಟಿ ಮಚ್ಚು ಚಾಕುವಿನಿಂದ ಮನಬಂದಂತೆ ಕೊಚ್ಚಿ ಕೊಲೆಗೈದಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೃತರು ಶಹಾಬಾದ್ ನಗರದ ಭೀಮ ಸೇನೆ ಅಧ್ಯಕ್ಷರಾಗಿದ್ದರು. ಎಂದಿನಂತೆ ಕೆಲಸಕ್ಕೆಂದು ಎಸಿಸಿ ಫ್ಯಾಕ್ಟರಿಗೆ ಹೊರಟಿದ್ದಾಗ ಈ ಕೊಲೆ ನಡೆದಿದೆ, ಕೊಲೆಗೆ ಹಳೆಯ ದ್ವೇಷವೆ ಕಾರಣವೆಂದು ಹೇಳಲಾಗುತ್ತಿದೆ. ಕೊಲೆಗಿಡಾಗಿರುವ ಸತೀಶ್ ಕಂಬಾನೋರ ಅವರ ಸಹೋದರ ನಗರಸಭೆ ಮಾಜಿ ಅಧ್ಯಕ್ಷ ಗಿರೀಶ್ ಕಂಬಾನೋರ ಮೇಲೆ ಇತ್ತೀಚೆಗೆ ಅಕ್ರಮ ಮರಳು ಸಾಗಿಸುವ ವಾಹನ ತಡೆದರೆಂಬ ಕಾರಣದಿಂದ ಇವರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು. 

ಇದೇ ಪ್ರಕರಣದ ಅರೋಪಿಗಳು ಸತೀಶ್ ಕಂಬಾನೋರ ಅವರ ಕೊಲೆ ಮಾಡಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಶಹಾಬಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಜಾರಿಯಲ್ಲಿದೆ.

click me!