ಬೀದರ್‌: ಖರ್ಗೆ, ಖಂಡ್ರೆ ವಿರುದ್ಧ ವರ್ಣಭೇದದ ಮಾತು, ಶಾಸಕ ಅರಳಿ ಖಂಡನೀಯ

By Kannadaprabha News  |  First Published Aug 3, 2023, 10:00 PM IST

ತಾವು ಮಲೆನಾಡಿನ ಜನ ತುಂಬ ಶ್ರೇಷ್ಠರು, ಕಲ್ಯಾಣ ಕರ್ನಾಟಕದವರು ಧಡ್ಡರೂ ಎನ್ನುವ ಮನಸ್ಥಿತಿ ಮಾನವೀಯತೆಗೆ ಕಳಂಕಪ್ರಾಯವಾಗಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಆತನ ಕೆಲಸ ಮತ್ತು ಗುಣಗಳಿಂದ ನಿರ್ಧಾರಿಸಲಾಗುತ್ತದೆಯೇ ಹೊರತು ಅವರ ಬಣ್ಣ ಅಥವಾ ಅವರು ಪ್ರತಿನಿಧಿಸುವ ಸ್ಥಳದಿಂದಲ್ಲ ಎಂದ ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ 


ಬೀದರ್‌(ಆ.03): ಕಸ್ತೂರಿರಂಗನ್‌ ವರದಿ ಜಾರಿ ಕುರಿತು ಸಚಿವರ ಹೇಳಿಕೆ ವಿರೋಧಿಸಿ ನಡೆದ ಪ್ರತಿಭಟನೆಯಲ್ಲಿ ಕರ್ನಾಟಕದ ಮಾಜಿ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ವರ್ಣ (ಬಣ್ಣ)ದ ಆಧಾರದಲ್ಲಿ ಹಾಗೂ ಈಶ್ವರ ಖಂಡ್ರೆ ಅವರ ಜ್ಞಾನ ಪ್ರಶ್ನಿಸಿ ಅವಮಾನಿಸಿದ್ದು ಅಕ್ಷಮ್ಯ ಅಪರಾಧವಾಗಿದೆ ಎಂದು ವಿಧಾನ ಪರಿಷತ್‌ ಸದಸ್ಯ ಅರವಿಂದಕುಮಾರ ಅರಳಿ ಖಂಡಿಸಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿದ್ದು, ತಾವು ಮಲೆನಾಡಿನ ಜನ ತುಂಬ ಶ್ರೇಷ್ಠರು, ಕಲ್ಯಾಣ ಕರ್ನಾಟಕದವರು ಧಡ್ಡರೂ ಎನ್ನುವ ಮನಸ್ಥಿತಿ ಮಾನವೀಯತೆಗೆ ಕಳಂಕಪ್ರಾಯವಾಗಿದೆ. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಆತನ ಕೆಲಸ ಮತ್ತು ಗುಣಗಳಿಂದ ನಿರ್ಧಾರಿಸಲಾಗುತ್ತದೆಯೇ ಹೊರತು ಅವರ ಬಣ್ಣ ಅಥವಾ ಅವರು ಪ್ರತಿನಿಧಿಸುವ ಸ್ಥಳದಿಂದಲ್ಲ ಎಂದಿದ್ದಾರೆ.

Latest Videos

undefined

ರಾಜ್ಯದಲ್ಲಿ ಇನ್ನೂ ಜೀವಂತ ಭ್ರೂಣ ಹತ್ಯೆ, 4 ತಿಂಗಳ ಭ್ರೂಣದ ಶವ ರಸ್ತೆ ಬದಿ ಎಸೆದ ಕಿಡಿಗೇಡಿಗಳು!

ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾದ ನಂತರ ರಾಜ್ಯದ ಅರಣ್ಯ ಹಾಗೂ ವನ್ಯ ಸಂಪತ್ತನ್ನು ಉಳಿಸುವ ಕೆಲಸ ಮಾಡುತ್ತಿದ್ದಾರೆಯೇ ಹೊರತು, ನಾಶ ಮಾಡುವ ಕೆಲಸ ಮಾಡುತ್ತಿಲ್ಲ. ಇದು ಅರಣ್ಯಗಳ ನಡುವೆ ಜೀವಿಸುವ ಮಲೆನಾಡಿನ ನಾಯಕರಿಗೆ ಅರ್ಥವಾಗಬೇಕಿದೆ. ಇಡೀ ದೇಶದಲ್ಲಿ ಅತಿ ಹೆಚ್ಚು ಮಳೆ ಬೀಳುವ ಜಿಲ್ಲೆಗಳಲ್ಲಿ ಒಂದಾದ ಉಡುಪಿಯಲ್ಲಿ ಈ ಬೇಸಿಗೆಯಲ್ಲಿ ಟ್ಯಾಂಕರ್‌ ಮೂಲಕ ನೀರು ಪೂರೈಸಬೇಕಾಗಿತ್ತು ಎನ್ನುವುದು ಮಹಾನಾಯಕರಿಗೆ ನೆನೆಪಿರಲಿ ಎಂದು ಅರಳಿ ಟೀಕಿಸಿದ್ದಾರೆ.

ಕಸ್ತೂರಿರಂಗನ್‌ ವರದಿ ಇರುವುದು ಇಡೀ ವಿಶ್ವದಲ್ಲಿಯೇ ಸೂಕ್ಷ್ಮ ಪ್ರದೇಶವಾದ ಪಶ್ಚಿಮ ಘಟ್ಟದ ಅರಣ್ಯ ಉಳಿಸಲಿಕ್ಕಾಗಿ. ಅದು ಈ ದೇಶದ, ಸರ್ವ ಸಮುದಾಯದ ಸಂಪತ್ತೇ ಹೊರತು ಯಾವುದೇ ಒಂದು ಜಿಲ್ಲೆಯ, ಪ್ರದೇಶದವರ ಖಾಸಗಿ ಆಸ್ತಿ ಅಲ್ಲ. ಇದನ್ನು ಉಳಿಸುವುದು ಈ ದೇಶದ ಎಲ್ಲ ನಾಗರಿಕರ ಮೂಲಭೂತ ಕರ್ತವ್ಯಗಳಲ್ಲಿ ಒಂದು ಎಂದು ತಿಳಿಸಿದ್ದಾರೆ.

ಬೀದರ್‌: ಬಾಲಕಿಯರೊಂದಿಗೆ ಅಸಭ್ಯ ವರ್ತನೆ, ಪ್ರಾಂಶುಪಾಲ ಸೆರೆ

ಇನ್ನು ‘ಅವರು ಕಪ್ಪು ಬಣ್ಣದವರು, ಅವರಿಗೆ ತಲೆ ಕೂದಲಿನಿಂದಾಗಿ ಅಲ್ಪಸ್ವಲ್ಪ ಕಾಣುವಂತಿದ್ದಾರೆ’ ಎಂದು ಹೇಳಿಕೆ ನೀಡುವದು ಅವರ ಹೀನಾಯ ಪ್ರವೃತ್ತಿಯ ಲಕ್ಷಣ. ಇದರ ಹಿಂದೆ ‘ಕಪ್ಪು ಬಣ್ಣದವರು ಎಂದರೆ ದಲಿತ/ ಆದಿವಾಸಿ ಜಾತಿಯವರು ಎಂದೂ, ಬಿಳಿ ಬಣ್ಣದವರು ಎಂದರೆ ಮೇಲು ಜಾತಿಯವರು’ ಎನ್ನುವ ಕೀಳು ಮನೋಭಾವ ಎದ್ದು ಕಾಣುತಿದೆ. ಇದು ಬಿಜೆಪಿಯ ಮಾಜಿ ಸಚಿವ ಅರಗ ಜ್ಞಾನೇಂದ್ರ ಅವರ ಜಾತಿ ದುರಹಂಕಾರದ ಮಾತು ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.

ವರ್ಣಭೇಧ ಮಾಡುವ ಮೂಲಕ ಜನರ ಮನಸ್ಥಿತಿಗೆ ಅಶಾಂತಿಗೆ ಕಾರಣವಾಗಿರುವ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಬೇಕು ಮತ್ತು ಜನರ ಮುಂದೆ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಶಾಸಕ ಅರಳಿ ಒತ್ತಾಯಿಸಿದ್ದಾರೆ.

click me!