ರಾಜ್ಯದಲ್ಲಿ ಮಹಾಮಾರಿ ಕೊರೋನಾ ಅಬ್ಬರ ಮಿತಿ ಮೀರುತ್ತಿದೆ. ಕೊರೋನಾ ಮಾರಿ ವಿಸ್ತಾರವಾಗುತ್ತಲೇ ಸಾಗಿದೆ. ಈಗ ಸರ್ಕಾರ ಕಠಿಣ ಕ್ರಮಗಳನ್ನು ಜರುಗಿಸುತ್ತಿದ್ದು ಬೆಂಗಳೂರಲ್ಲಿ ಈಗಲೇ ಲಾಕ್‌ಡೌನ್ ಬೇಡವೆಂದು ಶಾಸಕರು ಹೇಳಿದರು.
ಬೆಂಗಳೂರು (ಏ.19): ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು ಬೆಂಗಳೂರಲ್ಲಿ ಈಗಲೇ ಲಾಕ್ ಡೌನ್ ಬೇಡ ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ ಎಂದು ಶಾಸಕ ಉದಯ್ ಗರುಡಾಚಾರ್ಯ ಹೇಳಿದರು.
ಇಂದು ಸುವರ್ಣ ನ್ಯೂಸ್.ಕಾಂ ಜೊತೆ ಗೆ ಮಾತನಾಡಿದ ಶಾಸಕ ಉದಯ್ ಗರುಡಾಚಾರ್ಯ ಬೆಂಗಳೂರಿಗೆ ಈಗಲೇ ಲಾಕ್‌ಡೌನ್ ಅಗತ್ಯವಿಲ್ಲ. ಇನ್ನೂ ಸ್ವಲ್ಪ ದಿನ ಕಾದು ನೋಡೋಣ ಎಂದು ಹೇಳಿದರು.
undefined
ಲಾಕ್ ಡೌನ್ ಮೊದಲು ಬೆಂಗಳೂರಲ್ಲಿ ಕೊರೋನಾ ನಿಯಂತ್ರಣಕ್ಕೆ ಬಿಗಿ ಕ್ರಮಗಳನ್ನ ತೆಗೆದುಕೊಳ್ಳಲಿ. ಮೊದಲು ಕೊರೊನಾ ಸೊಂಕಿತರಿಗೆ ಬೆಡ್ ಗಳು ಸಿಗಬೇಕು. ಖಾಸಗಿ ಆಸ್ಪತ್ರೆಗಳು ಶೇ 50 ರಷ್ಟು ಬೆಡ್ ಗಳನ್ನ ಕೊರೋನಾ ನಿಯಂತ್ರಣಕ್ಕೆ ಮೀಸಲಿಡಲಿ ಎಂದರು.
2.50 ಲಕ್ಷ ದಾಟಿದ ಸೋಂಕು, 1500ರ ಗಡಿ ದಾಟಿದ ಸಾವು! ...
ದಿನದಿಂದ ದಿನಕ್ಕೆ ಬೆಂಗಳೂರಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿವೆ. ನಿನ್ನೆ ನನಗೆ ಬೆಡ್ ಗಳ ಕೊರತೆ ಇರುವ ಅನುಭವ ಆಯ್ತು. ಯಾರಿಗೆ ಕರೆ ಮಾಡಿದರು ಬೆಡ್ ಸಿಗುತ್ತಿಲ್ಲ. ಈ ರೀತಿಯ ಪರಿಸ್ಥಿತಿ ಎದುರಾಗಬಾರದರು. ಆಕ್ಷಿಜನ್, ಬೆಡ್, ಐಸಿಯು ಈ ಮೂರು ಸುಲಲಿತವಾಗಿ ಸಿಗುವಂತಾಗಬೇಕು ಎಂದು ಶಾಸಕ ಉದಯ್ ಗರುಡಾಚಾರ್ ಹೇಳಿದರು.
ಬೆಂಗಳೂರಲ್ಲಿ ವೀಕ್ ಎಂಡ್ ಕರ್ಫ್ಯೂ ಜಾರಿಯಾಗಲಿ : ಶನಿವಾರ ಭಾನುವಾರ ವೀಕ್ ಎಂಡ್ ಕರ್ಫ್ಯೂ ಜಾರಿ ಮಾಡುವ ಮೂಲಕ ಕೊರೋನಾ ಸ್ವಲ್ಪ ನಿಯಂತ್ರಣ ಮಾಡಬಹುದು. ರಾತ್ರಿ 10 ರ ಬದಲಿಗೆ 8 ಗಂಟೆಯಿಂದ ನೈಟ್ ಕರ್ಫ್ಯೂ ಜಾರಿ ಮಾಡಲಿ ಎಂದು ಸುವರ್ಣ ನ್ಯೂಸ್ ಗೆ ಬಿಜೆಪಿ ಶಾಸಕ ರಘು ಹೇಳಿದ್ದಾರೆ.
ಈ ವಿಚಾರವಾಗಿ ತಾಂತ್ರಿಕ ಸಲಹಾ ಸಮಿತಿ ಇಂದು ಏನು ವರದಿ ಕೊಡಲಿದೆ ನೋಡುತ್ತೇವೆ. ತಾಂತ್ರಿಕ ಸಲಹಾ ಸಮಿತಿ ವರದಿಗೆ ಎಲ್ಲ ಪಕ್ಷದ ಶಾಸಕರು ಬದ್ದರಾಗಬೇಕು. ಕೊರೋನಾ ನಿಯಂತ್ರಣದಲ್ಲಿ ಆಡಳಿತ ಪಕ್ಷ, ವಿಪಕ್ಷ ಬೇಡ. ರಾಜಕಾರಣ ಬೆರಸದೇ ಎಲ್ಲರು ಒಮ್ಮತದ ಅಭಿಪ್ರಾಯದಿಂದ ಕೊರೊನಾ ನಿಯಂತ್ರಣಕ್ಕೆ ತರಬೇಕು ಎಂದು ರಘು ಹೇಳಿದರು.