ಜೆಡಿಎಸ್‌ ಭದ್ರಕೋಟೆ ಸಾಬೀತು : ಸೂರಜ್ ರೇವಣ್ಣ ಎಂಟ್ರಿ

By Kannadaprabha NewsFirst Published Apr 19, 2021, 11:15 AM IST
Highlights

ಇದೀಗ ಜೆಡಿಎಸ್ ಪಕ್ಷದ ವಿವಿಧ ಚಟುವಟಿಕೆಗಳಲ್ಲಿ ಎಚ್ ಡಿ ರೇವಣ್ಣ ಪುತ್ರ ಸೂರಜ್ ರೇವಣ್ಣ ಸಕ್ರೀಯವಾಗಿ ತೊಡಗಿಸಿಕೊಳ್ಳುತ್ತಿದ್ದಾರೆ.  ಮಂಡ್ಯಕ್ಕೆ ಭೇಟಿ ನೀಡಿದ ಸೂರಜ್ ಭದ್ರಕೋಟೆಯ ನೆಲದಲ್ಲಿ ಮತ್ತೆ ಪಕ್ಷ ಅಸ್ತಿತ್ವ ತೋರಲಿದೆ ಭರವಸೆ ವ್ಯಕ್ತಪಡಿಸಿದರು. 

ಕಿಕ್ಕೇರಿ (ಏ.19): ಕೆ.ಆರ್ ಪೇಟೆ ಜೆಡಿಎಸ್ ಭದ್ರಕೋಟೆ. ಇದನ್ನು ಕಾರ್ಯಕರ್ತರು ಮುಂದಿನ ಚುನಾವಣೆಯಲ್ಲಿ ಸಾಬೀತುಪಡಿಸಬೇಕು ಎಂದು ಹಾಸನ ಡಿಸಿಸಿ ಬ್ಯಾಂಕ್ ನಿರ್ದೇಶಕ, ಜೆಡಿಎಸ್ ಯುವ ನಾಯಕ ಸೂರಜ್ ರೇವಣ್ಣ ಹೇಳಿದರು.

ಹೋಬಳಿಯ ಆನೆಗೊಳದಲ್ಲಿ ಜೆಡಿಎಸ್ ಕಚೇರಿ ಉದ್ಘಾಟಿಸಿ ಮಾತನಾಡಿ ಜಿಲ್ಲೆಯಲ್ಲಿ ಆನೆಗೊಳ ಜೆಡಿಎಸ್‌ನ ತಾಯಿ ಬೇರು. ಇಡೀ ಜಿಲ್ಲೆ ಜೆಡಿಎಸ್  ಮರುಜೀವ ಜೀಡಿದ ಪುಣ್ಯ ಭೂಮಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷ ತನ್ನ ಅಸ್ತಿತ್ವ ತೋರಲಿದೆ ಎಂದರು. 

ದಳಕ್ಕೆ ಅಧಿಕಾರದ ಚುಕ್ಕಾಣಿ : ಪ್ರಜ್ವಲ್ ರೇವಣ್ಣ ಭರವಸೆ ...

ಕಳೆದ ಬಾರಿ ಉಪ ಚುನಾವಣೆಯಲ್ಲಿನ ಸೋಲು ಆಕಸ್ಮಿಕ . ಒಳ ಏಟು, ಕುರುಡು ಕಾಂಚಾಣದಿಂದ ಸ್ವಲ್ಪ ಹಿನ್ನಡೆಯಾಗಿದೆ. ಜೆಡಿಎಸ್ ತನ್ನ ಅವಧಿಯಲ್ಲಿ ತಾಲೂಕಿಗೆ ಸಾಕಷ್ಟು ಕೊಡುಗೆ ನೀಡಿದೆ. ಮುಂದಿನ ದಿನದಲ್ಲಿ ಎಲ್ಲವೂ ಸರಿಯಾಗಲಿದೆ. ಕಾರ್ಯಕರ್ತರು ಯುವಕರನ್ನು ಸಂಘಟನೆಗೆ ತೊಡಗಿಸಿಕೊಳ್ಳಬೇಕು ಎಂದರು. 

ಬಸ್, ಡಿಪೋ, ಎಂಜಿನಿಯರಿಂಗ್ ಕಾಲೇಜು, ಸ್ನಾತಕೋತ್ತರ ಕಾಲೇಜು ಮಿನಿ, ವಿಧಾನಸೌಧ, ವಿದ್ಯುತ್ ಉಪ ಕೇಂದ್ರ, ಗೂಡೆಹೊಸಹಳ್ಳಿ ಏತ ನೀರಾವರಿ ಎಲ್ಲವೂ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವಧಿಯಲ್ಲಿ ಆಗಿರುವ ಬೃಹತ್  ಯೋಜನೆಗಳು. ತಾಲೂಕಿಗೆ ಸಾಕಷ್ಟು ಅನುದಾನ ನೀಡಿದ್ದರು ಜೆಡಿಎಸ್ ಏನು ನೀಡಿಲ್ಲ ಎಂದು ಜನರಲ್ಲಿ ತಪ್ಪು ಭಾವನೆ ಮೂಡಿಸುವುದು ಸರಿಯಲ್ಲ ಎಂದು ಸೂರಜ್ ರೇವಣ್ಣ ಹೇಳಿದರು.  

click me!