ಒನಕೆ ಓಬವ್ವ ಕ್ರೀಡಾಂಗಣ ಅವ್ಯವಸ್ಥೆಗೆ ಶಾಸಕ ತಿಪ್ಪಾರೆಡ್ಡಿ ಗರಂ

By Kannadaprabha News  |  First Published Nov 6, 2022, 11:59 AM IST
  • ಒನಕೆ ಓಬವ್ವ ಕ್ರೀಡಾಂಗಣ ಅವ್ಯವಸ್ಥೆಗೆ ಶಾಸಕ ತಿಪ್ಪಾರೆಡ್ಡಿ ಗರಂ
  • ಕ್ರೀಡಾಪಟುಗಳು - ಸಾರ್ವಜನಿಕ ಅಹವಾಲು ಆಲಿಸಿ ಕ್ರೀಡಾ ಇಲಾಖೆ ಅಧಿಕಾರಿಗೆ ತರಾಟೆ

ಚಿತ್ರದುರ್ಗ (ನ.6) : ಇಲ್ಲಿನ ಒನಕೆ ಓಬವ್ವ ಕ್ರೀಡಾಂಗಣದ ಅವ್ಯವಸ್ಥೆಗೆ ಶಾಸಕ ತಿಪ್ಪಾರೆಡ್ಡಿ ತೀವ್ರ ಅಸಮಧಾನ ವ್ಯಕ್ತಪಡಿಸಿದ್ದು ಈ ಸಂಬಂಧ ಕ್ರೀಡಾ ಇಲಾಖೆ ಅಧಿಕಾರಿಗಳ ತೀವ್ರವಾಗಿ ತರಾಟೆಗೆ ತೆಗೆದುಕೊಂಂಡಿದ್ದಾರೆ.

Chitradurga; ಸ್ಟೇಡಿಯಂಗಳಲ್ಲಿ ಆಟ ಆಡ್ಬೇಕಂದ್ರೆ ದುಡ್ಡು ಕೊಡ್ಬೇಕು ಆದೇಶಕ್ಕೆ ಕ್ರೀಡಾರ್ಥಿಗಳ ಆಕ್ರೋಶ

Tap to resize

Latest Videos

ಕ್ರೀಡಾಂಗಣದ ಅವ್ಯವಸ್ಥೆ ಕುರಿತು ಸಾರ್ವಜನಿಕರು ಹಾಗೂ ಕ್ರೀಡಾಪಟುಗಳ ದೂರಿನ ಮೇರೆಗೆ ಖುದ್ದು ಭೇಟಿ ನೀಡಿ ಪರಿಶೀಲಿಸಿದ ಅವರು ಕಾಲಮಿತಿಯೊಳಗೆ ಎಲ್ಲವನ್ನೂ ಸರಿಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕ್ರೀಡಾಂಗಣದಲ್ಲಿ ಸ್ವಚ್ಛತೆಗಾಗಿ ನಗರಸಭೆಯಿಂದ ಕಸದ ಬುಟ್ಟಿಗಳನ್ನು ಅಳವಡಿಸಲಾಗುವುದು. ಕ್ರೀಡಾಂಗಣ ಸುತ್ತ ಎಲ…ಇಡಿ ದೀಪ ಅಳವಡಿಸಲಾಗತ್ತದೆ. ನಾಯಿ ಮತ್ತು ದನಗಳು ಒಳ ಬಾರದಂತೆ ಸೆಕ್ಯುರಿಟಿ ನೇಮಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಶೌಚಾಲಯ ನವೀಕರಣವನ್ನು ತುರ್ತಾಗಿ ಕೈಗೆತ್ತಿಕೊಳ್ಳಲಾಗುವುದು. ಕುಡಿಯುವ ನೀರಿನ ವ್ಯವಸ್ಥೆಗೆ ಇಂದೇ ಕೊಳವೆ ಬಾವಿ ಕೊರೆಸಲಾಗುವುದು, ಡ್ರೆಸ್ಸಿಂಗ್‌ ರೂಂ ಸರಿಪಡಿಸಲಾಗುವುದು. ಉತ್ತಮ ಮತ್ತು ಗುಣಮಟ್ಟದ ಕ್ರೀಡಾ ಸಾಮಗ್ರಿಗಳನ್ನು ಸರಬರಾಜು ಮಾಡಲು ಕ್ರಮ ತೆಗೆದುಕೊಳ್ಳತ್ತೇವೆ. ಎಲ್ಲಾ 16 ಸಿಬ್ಬಂದಿ ಅವರ ವ್ಯಾಪ್ತಿಯಲ್ಲಿ ಸರಿಯಾಗಿ ಕೆಲಸ ಮಾಡದಿದ್ದರೆ ಸೇವೆಯಿಂದ ವಜಾ ಮಾಡುವುದಾಗಿ ಎಚ್ಚರಿಸಿದರು.

ಕ್ರೀಡಾಪಟುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಬದ್ಧನಾಗಿದ್ದು ಸದ್ಯಕ್ಕೆ ಅನುದಾನ ಕೊರತೆ ಇದೆ. ಸಮಸ್ಯೆಗಳ ಪಟ್ಟಿಮಾಡಿಕೊಂಡಿದ್ದು ಅನುದಾನ ಕ್ರೋಡೀಕರಿಸಿಕೊಂಡು ಹಂತ ಹಂತವಾಗಿ ಬಗೆಹರಿಸಲಾಗುವುದು. ಇಷ್ಟೊಂದು ಸಮಸ್ಯೆ ಇಟ್ಟುಕೊಂಡು ಕ್ರೀಡಾ ಇಲಾಖೆ ಅಧಿಕಾರಿ ಸುಮ್ಮನೆ ಇದ್ದರೆ ಸಹಿಸಲ್ಲ , ಕ್ರೀಡಾ ಇಲಾಖೆಯಲ್ಲಿ 4 ಲಕ್ಷ ಹಣ ಇದ್ದು ಮತ್ತು ನಗರಸಭೆಯ 10 ರಿಂದ 20 ಲಕ್ಷ ಹಣ ಬಳಸಿ ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು ಎಂದು ತಿಪ್ಪಾರೆಡ್ಡಿ ಹೇಳಿದರು.

ಕ್ರೀಡಾ ಇಲಾಖೆ ಹಾಸ್ಟೆಲ… ಮಕ್ಕಳಿಗೆ ನಿತ್ಯದ ಪಟ್ಟಿಪ್ರಕಾರ ಊಟ ನೀಡಬೇಕು. ಮೊಟ್ಟೆ, ಚಿಕನ್‌ , ಬಾಳೆಹಣ್ಣು, ಜ್ಯೂಸ್‌, ಹಾಲು ತರಕಾರಿ ಸೇರಿ ಪೌಷ್ಟಿಕಾಂಶ ಆಹಾರ ನೀಡಬೇಕು ಎಂದರು. ಮದ್ಯಪಾನ ಮಾಡಿ ಬರುವ ಸ್ಥಳೀಯ ಯುವಕರು ಕ್ರೀಡಾಂಗಣದಲ್ಲಿ ಗಲಾಟೆ ಮಾಡುತ್ತಾರೆ ಎಂಬ ಸಂಗತಿ ಕೂಡಾ ಗಮನಕ್ಕೆ ಬಂದಿದೆ. ರಾತ್ರಿ ವೇಳೆ ಬಂದು ಪರಿಶೀಲಿಸುವಂತೆ ಬಡಾವಣೆ ಪೋಲಿಸ್‌ ಠಾಣೆಯ ಪಿಎಸ್‌ಐ ಅವರಿಗೆ ತಿಳಿಸಿದ್ದೇನೆ. ಹಾಗೊಂದು ವೇಳೆ ಕುಡಿದು ದಾಂಧಲೆ ಮಾಡುವವರು ಕಂಡು ಬಂದರೆ ಮುಲಾಜಿಲ್ಲದೆ ಕೇಸು ದಾಖಲಿಸುವಂತೆ ಸೂಚಿಸಿರುವುದಾಗಿ ಹೇಳಿದರು.

Chitradurga: ಪ್ರಧಾನಿ ಮೋದಿ ಟ್ವೀಟ್‌ ಎಫೆಕ್ಟ್, ಓಬವ್ವ ಸಮಾಧಿ ಕಾಮಗಾರಿ ಶುರು

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿವಾಕರ್‌ ಮಾತನಾಡಿ, ಕ್ರೀಡಾಂಗಣದ ಎಲ್ಲಾ ಸಮಸ್ಯೆಗಳ ನಿವಾರಣೆ ಕುರಿತು ಶೀಘ್ರ ಸಭೆ ನಡೆಸುತ್ತೇನೆ. ಅನುದಾನ ಲಭ್ಯತೆ ನೋಡಿಕೊಂಡು ಸಮಸ್ಯೆ ನಿವರಣೆಗೆ ಯತ್ನಿಸುತ್ತೇನೆ. ಸೆಕ್ಯುರಿಟಿ ಅವರು ಅಚ್ಚುಕಟ್ಟಾಗಿ ಕೆಲಸ ಮಾಡಬೇಕು. ನಾಯಿ ಮತ್ತು ದನಗಳು ಕ್ರೀಡಾಂಗಣ ಒಳಗೆ ಇದ್ದರೆ ಆ ಸಮಯದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿ ವಜಾ ಮಾಡುತ್ತೇನೆ. ಕ್ರೀಡಾ ಉಪಕರಣಗಳನ್ನು ಉತ್ತಮವಾಗಿ ಬಳಸಲು ವ್ಯವಸ್ಥೆ ಮಾಡಲಾಗುವುದು. ಉತ್ತಮ ಗುಣಮಟ್ಟದ ಕ್ರೀಡಾ ಸಾಮಗ್ರಿ ಖದೀದಿಸಲು ಸೂಚಿಸಲಾಗುವುದು ಎಂದರು.

click me!