Mysuru: 'ಸಮಯ ಪ್ರಜ್ಞೆ ಇಲ್ವೇರಿ', ಯತೀಂದ್ರ ವಿರುದ್ಧ ಶಾಸಕ ತನ್ವೀರ್ ಶೇಠ್ ಗರಂ! ದಸರಾ ಆರಂಭದಲ್ಲೇ ಭಿನ್ನಮತ ಸ್ಫೋಟ

Published : Sep 28, 2026, 02:28 PM IST
Tanveer Sait

ಸಾರಾಂಶ

2026ರ ಮೈಸೂರು ದಸರಾ ಆರಂಭದಲ್ಲೇ ಮಾವುತರ ಉಪಹಾರ ಕೂಟಕ್ಕೆ ಸಚಿವ ಯತೀಂದ್ರ ಸಿದ್ದರಾಮಯ್ಯ ತಡವಾಗಿ ಬಂದಿದ್ದಕ್ಕೆ ಶಾಸಕ ತನ್ವೀರ್ ಸೇಠ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಳಿಕ ಆಗಮಿಸಿದ ಸಚಿವರು ವಿಳಂಬಕ್ಕೆ ಕಾರಣ ತಿಳಿಸಿ, ಮುಡಾ ಅಕ್ರಮ ಸೈಟ್‌ಗಳ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದರು.

ಮೈಸೂರು: 2026ರ ಮೈಸೂರು ದಸರಾ ಆರಂಭದಲ್ಲೇ ಜನಪ್ರತಿನಿಧಿಗಳ ಭಿನ್ನಮತ ಸ್ಪೋಟಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಶಾಸಕ ತನ್ವೀರ್ ಶೇಠ್ ಬಹಿರಂಗ ಅಸಮಾಧಾನ ಹೊರ ಹಾಕಿದ್ದಾರೆ.

ತನ್ವೀರ್ ಶೇಠ್ ಅಸಮಾಧಾನಕ್ಕೆ ಕಾರಣವೇನು?

ಇಂದು ಅರಮನೆ ಆವರಣದಲ್ಲಿ ದಸರಾ ಗಜಪಡೆಯ ಮಾವುತರು ಹಾಗೂ ಕಾವಾಡಿ ಕುಟುಂಬಕ್ಕೆ ಜಿಲ್ಲಾಡಳಿತ ವತಿಯಿಂದ ಉಪಹಾರ ಕೂಟ ಏರ್ಪಡಿಸಲಾಗಿತ್ತು. ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ನಿಗದಿತ ಸಮಯಕ್ಕೆ ಉಸ್ತುವಾರಿ ಸಚಿವ ಯತೀಂದ್ರ ಅವರು ಆಗಮಿಸಿರಲಿಲ್ಲ. ಸುಮಾರು ಅರ್ಥ ಗಂಟೆವರೆಗೂ ಕಾದು ಬೇಸರಗೊಂಡ ಶಾಸಕ ತನ್ವೀರ್ ಸೇಠ್, ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿ ಅಲ್ಲಿಂದ ತೆರಳಿದರು.

ಜಿಲ್ಲಾಧಿಕಾರಿಗಳಿಗೆ ಶಾಸಕ ತನ್ವೀರ್ ಸೇಠ್ ಕರೆ!

ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಸಮಯಕ್ಕೆ ಸರಿಯಾಗಿ ಬಾರದ ಹಿನ್ನೆಲೆಯಲ್ಲಿ, ಮಾವುತರು ಹಾಗೂ ಕಾವಾಡಿಗಳ ಕುಟುಂಬ ಹಾಗೂ ಅಧಿಕಾರಿಗಳು ಕಾಯುತ್ತಿದ್ದರು. ಇದರಿಂದ ಸಮಾಧಾನಗೊಂಡ ಶಾಸಕ ತನ್ವೀರ್ ಸೇಠ್, ಕೋಪದಿಂದ ಸಮಾರಂಭದಿಂದ ಹೋರಟು ಹೋದರು. ಆದರೆ ಇದಕ್ಕೂ ಮುನ್ನ ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ, ಸಮಯ ಪ್ರಜ್ಞೆ ಇರಬೇಕು. ಬೇರೆ ಕಾರ್ಯಕ್ರಮ ಆದರೆ ತಡ ಆದರೂ ಹೇಗೋ ಸರಿ ಮಾಡಬಹುದು. ಮಾವುತರಿಗೆ ಕಾಯುಸಿವುದಾ? ಸಮಯ ಪ್ರಜ್ಞೆ ಇಲ್ಲ ಅಂದ್ರೆ ಏನ್ಮಾಡಬೇಕು? ಇಂತಹ ಕಾರ್ಯಕ್ರಮಕ್ಕೆ ತಡವಾಗಿ ಬಂದರೆ ಅದರ ಅರ್ಥ ಏನು? ಇದನ್ನೆಲ್ಲ ಸಹಿಸಿಕೊಳ್ಳಲು ಆಗಲ್ಲ. ಬೇರೆದೆಲ್ಲ ಏನು ಬೇಕಾದರೂ ಮಾಡಲಿ, ಆದರೆ ದೇರ್ ಇಸ್ ಎ ಲಿಮಿಟ್ ಫಾರ್ ಎವರಿಥಿಂಗ್. ನಾನು ಹೊರಡುತ್ತಿದ್ದೇನೆ ಎಂದು ಹೇಳಿ ಸಿಟ್ಟು ಹೊರಹಾಕಿದರು.

ಇತ್ತ, 9 ಗಂಟೆಗೆ ನಿಗದಿಯಾಗಿದ್ದ ಮಾವುತರ ಔತಣಕೂಟ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯತೀಂದ್ರ ಸಿದ್ದರಾಮಯ್ಯ 10.15ಕ್ಕೆ ಆಗಮಿಸಿದರು. ಈ ವೇಳೆ ಶಾಸಕರಾದ ಜಿಟಿ ದೇವೇಗೌಡ, ಅನಿಲ್ ಚಿಕ್ಕಮಾಧು ಹಾಗೂ ಸ್ಥಳೀಯ ನಾಯಕರ ಸಾಥ್ ನೀಡಿದರು.

ಇನ್ನು, ತಡವಾದ ಬಗ್ಗೆ ಸ್ಪಷ್ಟನೆ ನೀಡಿರುವ ಯತೀಂದ್ರ ಸಿದ್ದರಾಮಯ್ಯ, ನಮ್ಮದು ಹೊಸ ಮನೆ. ವಸ್ತುಗಳ ಬಹಳ ಕಡೆ ಚೆಲ್ಲಾ ಪಿಲ್ಲಿ ಆಗಿದೆ. ಮನೆಯಲ್ಲಿ ಅಮ್ಮ ಇರಲಿಲ್ಲ. ಕೆಲಸಗಾರರು ಇರಲಿಲ್ಲ. ಹೀಗಾಗಿ ಕೆಲವೊಂದಿಷ್ಟು ವ್ಯವಸ್ಥೆಗಳನ್ನ ಮಾಡಿ ಬರುವುದರಲ್ಲಿ ತಡವಾಯಿತು. ಉದ್ದೇಶ ಪೂರ್ವಕವಾಗಿ ನಾನು ತಡವಾಗಿ ಬಂದಿಲ್ಲ. ತನ್ವೀರ್ ಸೇಠ್ ಜೊತೆ ಫೋನ್ ನಲ್ಲಿ ಈ ವಿಚಾರದಲ್ಲಿ ಮಾತನಾಡಿದ್ದೇನೆ ಎಂದು ಹೇಳಿದರು.

ಮುಡಾ 50:50 ಸೈಟ್ ವಿಚಾರವಾಗಿ ಮಾತನಾಡಿ, ಶೀಘ್ರದಲ್ಲೇ ಅಕ್ರಮ ಸೈಟ್ ಗಳ ಪಟ್ಟಿ ಬಿಡುಗಡೆಮಾಡುತ್ತೇವೆ‌. ಬಿಜೆಪಿ ಶಾಸಕ ಶ್ರೀ ವತ್ಸ ಈ ಬಗ್ಗೆ ಮನವಿ ಕೊಟ್ಟಿದ್ದಾರೆ. ಅದರ ಪಟ್ಟಿ ಸಿದ್ದ ಮಾಡುತ್ತಿದ್ದೇವೆ. ನ್ಯಾಯಮೂರ್ತಿ ದೇಸಾಯಿ ಆಯೋಗದ ವರದಿಯಂತಯೇ ಎಲ್ಲಾ ಸೈಟ್ ರದ್ದು ಮಾಡಿದ್ದೇವೆ. ದೇಸಾಯಿ ಆಯೋಗದ ವರದಿಯಲ್ಲಿ ಕಾನೂನು ಬದ್ದವಾಗಿ ಸೈಟ್ ಪಡೆದವರನ್ನು ಪಟ್ಟಿಯಿಂದ ಹೊರಗಡೆ ಇಡಲಾಗಿದೆ. ಪ್ರತಿ ಸೈಟ್ ನ್ನ ಅವರು ತನಿಖೆ ಮಾಡಿ ವರದಿ ಕೊಟ್ಟಿದ್ದಾರೆ. ಈಗ ಮತ್ತೆ ಅದನ್ನ ಪರಶೀಲನೆ ಮಾಡುವ ಅಗತ್ಯ ಇಲ್ಲ. ಅವರು ಕೊಟ್ಟಿರುವ ಅಕ್ರಮದ ಪಟ್ಟಿಯನ್ನೇ ನಾವು ಪ್ರಕಟಿಸುತ್ತೇವೆ. ಅಕ್ರಮದಿಂದ ಪಡೆದ ಸೈಟ್ ಬೇರೆಯವರಿಗೆ ಮಾರಿದರೆ ಖರೀದಿದಾರರಿಗೆ ಸಮಸ್ಯೆಯಾಗದಂತೆ ತಪ್ಪಿಸಬಹುದಾ ಎಂಬುದನ್ನ ಪರಿಶೀಲನೆ ನಡೆಸುತ್ತೇನೆ ಎಂದುನ ಸಚಿವ ಯತೀಂದ್ರ ತಿಳಿಸಿದರು.

PREV
Read more Articles on
click me!

Recommended Stories

ರೇಣುಕಾಸ್ವಾಮಿ ಪ್ರಕರಣ: ದರ್ಶನ್ ಪರ ವಕೀಲರ ಎರಡೂ ಯತ್ನ ವಿಫಲ, 'ಇದ್ರಲ್ಲಿ ವಿಶೇಷ ಏನೂ ಇಲ್ಲ'ಎಂದ ಜಡ್ಜ್
ಬೆಂಗಳೂರಿನಲ್ಲಿ ಪೆಪೆ ಜೀನ್ಸ್ ಲಂಡನ್ ಭಾರಿ ವಿಸ್ತರಣೆ: ಒಂದೇ ದಿನ ಮೂರು ಹೊಸ ಎಕ್ಸ್‌ಪೀರಿಯೆನ್ಸ್ ಮಳಿಗೆಗಳ ಶುಭಾರಂಭ!