Bengaluru WTC: ರಾಜಧಾನಿಯ ವರ್ಲ್ಡ್ ಟ್ರೇಡ್ ಸೆಂಟರ್‌ನ ರೋಚಕ, ಅಚ್ಚರಿ ಸಂಗತಿಗಳು!

Published : Sep 28, 2026, 11:58 AM IST
WTC

ಸಾರಾಂಶ

ಬೆಂಗಳೂರಿನ ಮಲ್ಲೇಶ್ವರಂ ಬಳಿ ಇರುವ ವರ್ಲ್ಡ್ ಟ್ರೇಡ್ ಸೆಂಟರ್ ನಗರದ ಅತ್ಯಂತ ಎತ್ತರದ ಕಟ್ಟಡಗಳಲ್ಲಿ ಒಂದಾಗಿದೆ. 32 ಅಂತಸ್ತುಗಳನ್ನು ಹೊಂದಿರುವ ಈ ಕಟ್ಟಡವು ಶಾಪಿಂಗ್, ಹೋಟೆಲ್ ಮತ್ತು ಕಚೇರಿ ಸೌಲಭ್ಯಗಳನ್ನು ಒಳಗೊಂಡಿದೆ.

ಬೆಂಗಳೂರು: ರಾಜಧಾನಿ ಬೆಂಗಳೂರಿಗೆ ತುಮಕೂರು ಭಾಗದಿಂದ ನೀವು ಬರುತ್ತಿದ್ರೆ ಯಶವಂತಪುರ ರೈಲ್ವೆ ಅಥವಾ ಬಸ್ ನಿಲ್ದಾಣದಿಂದ ನಿಮಗೆ ಬೃಹತ್ ಕಟ್ಟಡವೊಂದು ಕಾಣಿಸುತ್ತದೆ. ಈ ಕಟ್ಟಡದ ಹೆಸರು ವರ್ಲ್ಡ್ ಟ್ರೇಡ್ ಸೆಂಟರ್. ಇದು (World Trade Center) ಬೆಂಗಳೂರು ನಗರದ ಅತ್ಯಂತ ಪ್ರಮುಖ ಮತ್ತು ಎತ್ತರದ ಕಟ್ಟಡಗಳಲ್ಲಿ ಒಂದಾಗಿದೆ. ಮಲ್ಲೇಶ್ವರಂ ಮತ್ತು ರಾಜಾಜಿನಗರದ ವ್ಯಾಪ್ತಿಯಲ್ಲಿ ಕಾಣಿಸುವ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡ ಬೆಂಗಳೂರಿನ ಸಂಕೇತವಾಗಿ ಬದಲಾಗಿದೆ. ಈ ಲೇಖನ ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಕುರಿತ ಕೆಲ ಆಸಕ್ತಿದಾಯಕ ವಿಷಯಗಳನ್ನು ಒಳಗೊಂಡಿದೆ.

ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ವಿಶೇಷತೆಗಳು

ಇದು 128 ಮೀಟರ್‌ (420 ft) ಎತ್ತರವಾಗಿದ್ದು, 32 ಅಂತಸ್ತುಗಳನ್ನು ಹೊಂದಿದೆ. ನಗರದ ಅತ್ಯಂತ ಪ್ರಮುಖ ಹಾಗೂ ಎತ್ತರದ ಕಟ್ಟಡಗಳಲ್ಲಿ (ಸ್ಕೈಸ್ಕ್ರೇಪರ್) ಒಂದಾಗಿದೆ. ಬ್ರಿಗೇಡ್ ಗ್ರೂಪ್‌ನಿಂದ (Brigade Group Developer) ಈ ಕಟ್ಟಡವನ್ನು ಡೆವಲಪ್ ಮಾಡಲಾಗಿದೆ.

ಈ ಕಟ್ಟಡ 2010ರಿಂದ ತನ್ನ ಕಾರ್ಯಾಚರಣೆಯನ್ನು ಆರಂಭಿಸಿತು. ಮುಂಬೈನ ನಂತರ ಭಾರತದಲ್ಲಿ ಸ್ಥಾಪನೆಯಾದ ಎರಡನೇ ವರ್ಲ್ಡ್ ಟ್ರೇಡ್ ಸೆಂಟರ್ ಇದಾಗಿದೆ

'ಸ್ಕೈಬ್ರಿಡ್ಜ್

ವರ್ಲ್ಡ್ ಟ್ರೇಡ್ ಸೆಂಟರ್ ಕಟ್ಟಡದ ಆವರಣದಲ್ಲಿಯೇ ಕೆಲಸದ ಜೊತೆಗೆ ಸಿನಿಮಾ ವೀಕ್ಷಣೆ, ಶಾಪಿಂಗ್, 5-ಸ್ಟಾರ್ ಹೋಟೆಲ್ ಮತ್ತು ಆರೋಗ್ಯ ಸೌಲಭ್ಯಗಳನ್ನು ಈ ಕಟ್ಟಡ ಒಳಗೊಂಡಿದೆ. ವರ್ಲ್ಡ್ ಟ್ರೇಡ್ ಸೆಂಟರ್‌ನ ಅಧಿಕೃತ ಕಚೇರಿಳು ಈ ಎಲ್ಲಾ ಸೌಲಭ್ಯಗಳ ಅನತಿ ದೂರದಲ್ಲಿವೆ. WTCಯನ್ನು ಶೆರಾಟನ್ ಹೋಟೆಲ್‌ನೊಂದಿಗೆ ಸಂಪರ್ಕಿಸುವ 'ಸ್ಕೈಬ್ರಿಡ್ಜ್' ಇಲ್ಲಿದೆ.

WTC ಬೆಂಗಳೂರು 'ವರ್ಲ್ಡ್ ಟ್ರೇಡ್ ಸೆಂಟರ್ಸ್ ಅಸೋಸಿಯೇಷನ್'ನ ಪರವಾನಗಿ ಪಡೆದ ಸದಸ್ಯ ಸಂಸ್ಥೆಯಾಗಿದೆ. ಇದು ಜಗತ್ತಿನ 90 ದೇಶಗಳ 330ಕ್ಕೂ ಹೆಚ್ಚು ನಗರಗಳನ್ನು ಒಳಗೊಂಡ ಜಾಗತಿಕ ಜಾಲದೊಂದಿಗೆ ಸಂಪರ್ಕ ಹೊಂದಿದೆ. ಈ ಕಟ್ಟಡದ ಆವರಣ ಸುಂದರವಾದ ಕೊಳವನ್ನು ಹೊಂದಿದೆ.

40 ಎಕರೆ ವಿಸ್ತೀರ್ಣದ ಈ ಆವರಣದಲ್ಲಿ ಸರೋವರ ಸುತ್ತಲೂ WTC, ಓರಿಯನ್ ಮಾಲ್, ಶೆರಾಟನ್ ಹೋಟೆಲ್, ಆಸ್ಪತ್ರೆ, ವಸತಿ ಸಮುಚ್ಚಯ, ಶಾಲೆ ಮತ್ತು ಗ್ಯಾಲಕ್ಸಿ ಕ್ಲಬ್‌ಗಳನ್ನು ಒಳಗೊಂಡಿದೆ.

ವರ್ಲ್ಡ್ ಟ್ರೇಡ್ ಸೆಂಟರ್‌ಗೆ ಹೋಗೋದು ಹೇಗೆ?

ನೀವು ಯಶವಂತಪುರ ಬಸ್‌ ನಿಲ್ದಾಣ ಅಥವಾ ಮೈಸೂರ್ ಸ್ಯಾಂಡಲ್ ಸೋಪ್ ಫ್ಯಾಕ್ಟರಿಯಿಂದ ವರ್ಲ್ಡ್ ಟ್ರೇಡ್ ಸೆಂಟರ್‌ಗೆ ಆವರಣ ಪ್ರವೇಶಿಸಬಹುದಾಗಿದೆ. ಇಲ್ಲಿರುವ ಓರಾಯನ್ ಮಾಲ್ ಮೂಲಕ ವರ್ಲ್ಡ್ ಟ್ರೇಡ್ ಸೆಂಟರ್ ನೋಟವನ್ನು ಕಣ್ತುಂಬಿಕೊಳ್ಳಬಹುದು.

ಇದನ್ನೂ ಓದಿ: ಬೆಂಗಳೂರಿನ ಮಾರುತಿ ಮಂದಿರ ಬಿಎಂಟಿಸಿ ಬಸ್ ನಿಲ್ದಾಣವೀಗ ಫುಡ್‌ಸ್ಟ್ರೀಟ್!

ಇದನ್ನೂ ಓದಿ: ಬೆಂಗಳೂರು ಉಪನಗರ ರೈಲು ಯೋಜನೆ 4 ಕಾರಿಡಾರ್‌ಗಳ ಕಾಮಗಾರಿ ಬಿರುಸಿನ ವೇಗ, ₹986 ಕೋಟಿ ಟೆಂಡರ್ ಆಹ್ವಾನ

PREV
Read more Articles on
click me!

Recommended Stories

ಗೇಟೆಡ್ ಕಮ್ಯುನಿಟಿಯಲ್ಲಿದ್ರೆ ಕಿರಿಕಿರಿ ಇಲ್ಲ ಅನ್ನೋ ಮಾತು ಸುಳ್ಳಾಯ್ತು, ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ಜಾಮ್!
ತೈಲ ಬೆಲೆ ಏರಿಕೆ ಬೆನ್ನಲ್ಲೇ ಚಿನ್ನದ ದರ ಭಾರಿ ಕುಸಿತ, ಬೆಂಗಳೂರು ಸೇರಿ ಭಾರತದಲ್ಲಿ ದಾಖಲೆ ಇಳಿಕೆ