ನಾಗರಿಕರಿಗೆ ಶಾಂತಿ ನೆಮ್ಮದಿಯ ವಾತಾವರಣ ಕಲ್ಪಿಸಲು ಸರ್ಕಾರ ಪೊಲೀಸ್ ಇಲಾಖೆಗೆ ಹೆಚ್ಚಿನ ಅನುದಾನವನ್ನು ನೀಡುತ್ತಿದ್ದು. ಈಗಾಗಲೇ ಇಲಾಖೆಗೆ ಅತ್ಯುನ್ನತ ಶಸ್ತ್ರಾಸ್ತ್ರ, ತರಬೇತಿ ಜತೆಗೆ 11 ಸಾವಿರ ಪೊಲೀಸ್ ಕುಟುಂಬಕ್ಕೆ ವಸತಿ ಗೃಹಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ಶಿಕಾರಿಪುರ (ಅ.11) : ನಾಗರಿಕರಿಗೆ ಶಾಂತಿ ನೆಮ್ಮದಿಯ ವಾತಾವರಣ ಕಲ್ಪಿಸಲು ಸರ್ಕಾರ ಪೊಲೀಸ್ ಇಲಾಖೆಗೆ ಹೆಚ್ಚಿನ ಅನುದಾನವನ್ನು ನೀಡುತ್ತಿದ್ದು. ಈಗಾಗಲೇ ಇಲಾಖೆಗೆ ಅತ್ಯುನ್ನತ ಶಸ್ತ್ರಾಸ್ತ್ರ, ತರಬೇತಿ ಜತೆಗೆ 11 ಸಾವಿರ ಪೊಲೀಸ್ ಕುಟುಂಬಕ್ಕೆ ವಸತಿ ಗೃಹಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ ಎಂದು ರಾಜ್ಯದ ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.
ರಾಜ್ಯಾದ್ಯಂತ 200 ಕೋಟಿ ವೆಚ್ಚದಲ್ಲಿ 117 ಪೊಲೀಸ್ ಠಾಣೆ: ಆರಗ ಜ್ಞಾನೇಂದ್ರ
ಸೋಮವಾರ ಕರ್ನಾಟಕ ರಾಜ್ಯ ಪೊಲೀಸ್ ವಸತಿ ಮತ್ತು ಮೂಲಭೂತ ಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತ ವತಿಯಿಂದ ಪಟ್ಟಣದ ಗ್ರಾಮಾಂತರ ಠಾಣೆ ಆವರಣದಲ್ಲಿ 60 ಹಾಗೂ ಶಿರಾಳಕೊಪ್ಪದಲ್ಲಿನ 12 ಪೊಲೀಸ್ ವಸತಿ ಗೃಹಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಶೇ.49 ಸಿಬ್ಬಂದಿಗೆ ನೂತನ ವಸತಿ ಗೃಹ ನಿರ್ಮಿಸಲಾಗಿದ್ದು ಇದೀಗ 11 ಸಾವಿರ ಅಧಿಕಾರಿ ಸಿಬ್ಬಂದಿಗೆ ವಸತಿ ಗೃಹ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ವರ್ಷಕ್ಕೆ ಕೇವಲ 3-4 ಮಾತ್ರ ಸ್ಟೇಷನ್ ನಿರ್ಮಿಸಲಾಗುತ್ತಿದ್ದು ಇದೀಗ ರಾಜ್ಯಾದ್ಯಂತ ರು. 200 ಕೋಟಿ ವೆಚ್ಚದಲ್ಲಿ 117 ಹೊಸ ಸ್ಟೇಷನ್ ನಿರ್ಮಿಸಲಾಗುತ್ತಿದೆ ಎಂದು ತಿಳಿಸಿದರು.
ಅತ್ಯಾಚಾರ, ಕೊಲೆ ಮತ್ತಿತರ ಗಂಭೀರ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಸೂಕ್ತ ದಾಖಲೆ ಸಲ್ಲಿಸಲು ವಿಫಲವಾಗಿ ಶೇ.10 ಪ್ರಕರಣದಲ್ಲಿ ಮಾತ್ರ ಆರೋಪಿಗಳಿಗೆ ಶಿಕ್ಷೆಯಾಗುತ್ತಿದ್ದು, ಈ ದಿಸೆಯಲ್ಲಿ ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ನ್ಯಾಯಾಲಯಕ್ಕೆ ಸಲ್ಲಿಸಿ ಪ್ರಕರಣದಲ್ಲಿ ಆರೋಪಿಗಳು ದೋಷಮುಕ್ತರಾಗದಂತೆ ಜಾಗ್ರತೆ ವಹಿಸಲು ಸೀನ್ ಆಫ್ ಕ್ರೈಂ ಆಫೀಸರ್ ಎಂಬ ಹುದ್ದೆ ಸೃಷ್ಟಿಸಿ ತರಬೇತಿ ನೀಡಲಾಗುತ್ತಿದೆ. ಸುಶಿಕ್ಷಿತರು ಹೆಚ್ಚಾದಂತೆ ಅಪರಾಧ ಕಡಿಮೆಯಾಗುತ್ತದೆ ಎಂಬ ನಂಬಿಕೆ ಸುಳ್ಳಾಗಿದ್ದು ಪೊಲೀಸ್ ಸ್ಟೇಷನ್, ಜೈಲು ಸಂಗ್ರಹ ಹೆಚ್ಚಳಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಪಿಎಸ್‌ಐ ನೇಮಕಾತಿ ಹಗರಣದ ಬಗ್ಗೆ ತೀವ್ರ ನೋವು ಇದ್ದು, ಬೇಲಿಯೇ ಎದ್ದು ಹೊಲ ಮೇಯ್ದ ರೀತಿಯಾಗಿದೆ. ಸಂಪೂರ್ಣ ದೇಶಕ್ಕೆ ಮಾದರಿಯಾದ ಪರೀಕ್ಷೆ ಬಗೆಗಿನ ಹಗರಣದಲ್ಲಿ ಐಪಿಎಸ್ ಅಧಿಕಾರಿ ಸಹಿತ 98 ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ ಕಾಂಗ್ರೆಸ್ ಸರ್ಕಾರದಲ್ಲಿನ ಶಿಕ್ಷಕರ ನೇಮಕಾತಿ ಹಗರಣದಲ್ಲಿ ಭಾಗಿಯಾದವರ ಬಗ್ಗೆ ಸಿಒಡಿ ತನಿಖೆ ಆರಂಭವಾಗಿದೆ ಇದೀಗ ಇಡಿ ತನಿಖೆ ಆರಂಭವಾಗಿದ್ದು ಆರೋಪಿಗಳ ಆಸ್ತಿ ಜಪ್ತಿ ಮಾಡಲಾಗುವುದು ಎಂದು ತಿಳಿಸಿದರು.
ಸಂಸದ ರಾಘವೇಂದ್ರ ಮಾತನಾಡಿ, ಅರಗ ಜ್ಞಾನೇಂದ್ರ ಗೃಹಮಂತ್ರಿಯಾದ ನಂತರದಲ್ಲಿ ರಾಜ್ಯದ 11 ಸಾವಿರ ಪೊಲೀಸ್ ಕುಟುಂಬಕ್ಕೆ ರು. 2.25 ಸಾವಿರ ಕೋಟಿ ವೆಚ್ಚದಲ್ಲಿ ವಸತಿ ಗೃಹ ನಿರ್ಮಿಸಲಾಗಿದೆ. ದಿನಪೂರ್ತಿ ಸಮಾಜದ ರಕ್ಷಣೆಗೆ ಸೀಮಿತವಾಗಿರುವ ಪೊಲೀಸರು ಶಾಂತಿ ನೆಮ್ಮದಿ ಮೂಲಕ ಸ್ವಾಭಿಮಾನದಿಂದ ಕರ್ತವ್ಯ ನಿರ್ವಹಿಸಲು ಸರ್ಕಾರ ಎಲ್ಲ ಸೌಲಭ್ಯವನ್ನು ಕಲ್ಪಿಸಿಕೊಡುತ್ತಿದೆ ಎಂದು ಪ್ರಶಂಸಿಸಿದರು.
ನೂತನ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್ ಕುಮಾರ್ ಮಾತನಾಡಿ, ಇಲಾಖೆ ಬಗ್ಗೆ ಸಾರ್ವತ್ರಿಕವಾಗಿ ಅನುಕಂಪದ ಕೊರತೆಯಿದ್ದು ಶಿವಮೊಗ್ಗ ಜಿಲ್ಲೆಯಲ್ಲಿ ಮಾತ್ರ ಜನಪ್ರತಿನಿಧಿಗಳು ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. 60 ಕುಟುಂಬಕ್ಕೆ ಹೊಸ ವಸತಿ ಗೃಹದ ಮೂಲಕ ಆತ್ಮಸ್ಥೈರ್ಯ ಹೆಚ್ಚಳಕ್ಕೆ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ವೇದಿಕೆಯಲ್ಲಿ ಎಂಎಡಿಬಿ ಅಧ್ಯಕ್ಷ ಗುರುಮೂರ್ತಿ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ರೇವಣಪ್ಪ ಕೊಳಗಿ, ಪುರಸಭಾಧ್ಯಕ್ಷೆ ರೇಖಾಬಾಯಿ, ಪೊಲೀಸ್ ವಸತಿ ನಿಗಮದ ಇಇ ನಾಗಪ್ಪ ಬೆನ್ನೂರು, ಸಿಪಿಐ ಲಕ್ಷ್ಮಣ್, ಮುಖಂಡ ಹಾಲಪ್ಪ, ವಸಂತಗೌಡ, ಚನ್ನವೀರಪ್ಪ, ಡಾ.ಬಿ.ಡಿ ಭೂಕಾಂತ್, ಮೋಹನ್, ಸಣ್ಣ ಹನುಮಂತಪ್ಪ ಸಹಿತ ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದಲ್ಲಿ 110 ಪಿಎಫ್‌ಐ ಮುಖಂಡರ ಬಂಧನ: ಗೃಹ ಸಚಿವ ಅರಗ ಜ್ಞಾನೇಂದ್ರ
ತಲಾ ರು.10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಫೋರೆನ್ಸಿಕ್ ಲ್ಯಾಬ್:
ನಾಗರಿಕ ಸಮಾಜದ ಶಾಂತಿ, ನೆಮ್ಮದಿ ಕಾಪಾಡಲು ಇಲಾಖೆಯಲ್ಲಿ ಅತ್ಯಂತ ಕಠಿಣ ಕ್ರಮವನ್ನು ಕೈಗೊಳ್ಳಲಾಗುತ್ತಿದ್ದು, ಅತ್ಯುನ್ನತ ಶಸ್ತ್ರಾಸ್ತ್ರಗಳನ್ನು ಪೂರೈಸಿ ಪೊಲೀಸರಿಗೆ ತರಬೇತಿ ನೀಡಲಾಗುತ್ತಿದೆ. ಈ ದಿಸೆಯಲ್ಲಿ ದರೋಡೆ ಮತ್ತಿತರ ಅಪರಾಧ ಪ್ರಕರಣ ಕಡಿಮೆಯಾಗಿದ್ದು ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಖಾತೆಯಲ್ಲಿನ ಹಣ ಏಕಾಏಕಿ ಕಣ್ಮರೆಯಾಗುತ್ತಿದ್ದು ಪ್ರಕರಣ ಬೇಧಿಸಲು ಅನುಕೂಲವಾಗುವಂತೆ ಬಳ್ಳಾರಿ ಹುಬ್ಬಳ್ಳಿಯಲ್ಲಿ ತಲಾ ರು.10 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಫೋರೆನ್ಸಿಕ್ ಲ್ಯಾಬ್ ತೆರೆಯಲಾಗಿದ್ದು ಶಿವಮೊಗ್ಗದಲ್ಲಿ ಸಹ ಆರಂಭಿಸಲಾಗುವುದು ಎಂದು ತಿಳಿಸಿದರು.