ಅಧಿಕಾರಿಗೆ ಅಶ್ಲೀಲವಾಗಿ ನಿಂದಿಸಿದ ಶಾಸಕ ಶಿವನಗೌಡ: ಆಡಿಯೋ ವೈರಲ್‌

Published : May 18, 2022, 08:27 AM IST
ಅಧಿಕಾರಿಗೆ ಅಶ್ಲೀಲವಾಗಿ ನಿಂದಿಸಿದ ಶಾಸಕ ಶಿವನಗೌಡ: ಆಡಿಯೋ ವೈರಲ್‌

ಸಾರಾಂಶ

*   ಕೆಬಿಜಿಎನ್‌ಎಲ್‌ ಮುಖ್ಯ ಎಂಜಿನಿಯರ್‌ ಜೊತೆ ನಡೆಸಿದ ಫೋನ್‌ ಸಂಭಾಷಣೆ *  ಈ ಹಿಂದೆಯೂ ಅವಾಚ್ಯ ಪದ ಪ್ರಯೋಗ ಮಾಡಿ ನೌಕರರ ಕೆಂಗಣ್ಣಿಗೆ ಗುರಿಯಾಗಿದ್ದ ಶಿವನಗೌಡ *  ಮತ್ತೆ ಅದೇ ಪ್ರವೃತ್ತಿ ಮುಂದುರಿಸಿರುವ ಶಾಸಕರು   

ರಾಯಚೂರು(ಮೇ.18):  ತಮ್ಮ ಗಮನಕ್ಕೆ ತಾರದೇ ಬಿಲ್‌ ಮಂಜೂರು ಮಾಡಿದ ಕೃಷ್ಣ ಭಾಗ್ಯ ಜಲ ನಿಗಮದ ಮುಖ್ಯ ಎಂಜಿನಿಯರ್‌ಗೆ ದೇವದುರ್ಗ ಶಾಸಕ ಕೆ.ಶಿವನಗೌಡ ಅವಾಚ್ಯ ಶಬ್ದ ಬಳಸಿ ತೀವ್ರ ತರಾಟೆಗೆ ತೆಗೆದುಕೊಂಡಿರುವುದು ಇದೀಗ ಹೊಸ ವಿವಾದ ಸೃಷ್ಟಿಸಿದೆ.

ಕಳೆದ ಆರು ತಿಂಗಳ ಹಿಂದೆ ನಡೆಸಿರುವ ಫೋನ್‌ ಸಂಭಾಷಣೆಯ ಆಡಿಯೋ ಕ್ಲಿಪ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಕೆಬಿಜಿಎನ್‌ಎಲ್‌ ಮುಖ್ಯ ಎಂಜಿನಿಯರ್‌ ಶಾಸಕರ ಗಮನಕ್ಕೆ ತಾರದೇ ಗುತ್ತಿಗೆದಾರರಿಗೆ 1400 ಕೋಟಿ ರು. ಬಿಲ್‌ ಮಂಜೂರು ಮಾಡಿರುವುದರ ಕುರಿತು ಫೋನಿನಲ್ಲಿ ಮಾತನಾಡಿದ ಶಾಸಕ ಕೆ.ಶಿವನಗೌಡ ನಾಯಕ, ತೀವ್ರ ಅವಾಚ್ಯ ಶಬ್ದಗಳನ್ನು ಬಳಸಿ ನಿಂದಿಸಿದ್ದಾರೆ. ವರ್ಗಾವಣೆಗೊಂಡು ಬಂದು ಭೇಟಿಯಾಗಿಲ್ಲ, ಬಂದು ಭೇಟಿಯಾಗುವಂತೆ ಆರು ಬಾರಿ ಕರೆ ಕಳುಹಿಸಿದರೂ ಬಾರದೇ ನಿರ್ಲಕ್ಷ್ಯ ವಹಿಸಿದ್ದಕ್ಕೆ ಕೋಪಗೊಂಡಿರುವ ಶಾಸಕರು, ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿರುವುದು ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ನನಗೆ ಹಿರಿಯ ನಾಯಕರು ಅನ್ಯಾಯ ಮಾಡಿದ್ದಾರೆ : ಬಿಜೆಪಿ ಶಾಸಕ

ಇದೇ ಶಾಸಕ ಕೆ.ಶಿವನಗೌಡ ನಾಯಕ ಅವರು ಹಿಂದೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೂ ಅವಾಚ್ಯ ಪದ ಪ್ರಯೋಗ ಮಾಡಿ ನೌಕರರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಅದೇ ಪ್ರವೃತ್ತಿಯು ಮುಂದುರಿಸಿರುವ ಶಾಸಕರ ವಿರುದ್ಧ ಎಲ್ಲೆಡೆ ಆಕ್ರೋಶಗಳು ವ್ಯಕ್ತವಾಗುತ್ತಿವೆ.
 

PREV
Read more Articles on
click me!

Recommended Stories

ದೀಪಾಂಜಲಿ ನಗರ ಜಂಕ್ಷನ್‌ನ ಬಳಿಯ ನೈಸ್‌ ರಸ್ತೆ ಸಾರ್ವಜನಿಕರಿಗೆ ಶೀಘ್ರ ಮುಕ್ತ
ಬೆಂಗಳೂರಿನ ಬೀದಿ ನಾಯಿಗಳಿಗೆ ಪ್ರತಿನಿತ್ಯ 2 ಬಾರಿ ಚಿಕನ್‌ ರೈಸ್‌ !