
ಹೊಸಕೋಟೆ (ಏ.17): ಅಧಿಕಾರದ ದರ್ಪದಿಂದ ಯಾವೊಬ್ಬ ಜನಪ್ರತಿನಿಧಿಯು ಮತದಾರರನ್ನು ಗೆಲ್ಲಲು ಸಾಧ್ಯವಿಲ್ಲ. ಬದಲಾಗಿ ಪ್ರೀತಿ ವಿಶ್ವಾಸದಿಂದ ಗೆಲ್ಲಬಹುದು ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಗ್ರಾಪಂ ಕಟ್ಟಡದ ಉದ್ಘಾಟನೆಗೆ ನಾಮಫಲಕ ಅಳವಡಿಕೆಗೆ ಬಿಜೆಪಿ ಕಾರ್ಯಕರ್ತರು ಅಡ್ಡಿಪಡಿಸಿ, ಪೊಲೀಸರು ನಿಯಂತ್ರಣ ಮಾಡಿದ ಹಿನ್ನೆಲೆ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಶಾಸಕ ಶರತ್ ಬಚ್ಚೇಗೌಡ, ದೇಶದ ಸ್ವಾತಂತ್ರ್ಯ ಹೋರಾಟ ಸಮಯದಲ್ಲಿ ಬ್ರಿಟಿಷರು ಗಾಂಧೀಜಿಯವರ ಕೂಗನ್ನು ಯಾವ ಬಂದೂಕು, ಲಾಠಿ, ಅಧಿಕಾರದ ದರ್ಪದಿಂದ ಅಡಗಿಸಲು ಸಾಧ್ಯವಾಗಿಲ್ಲ. ಅಂತೆಯೇ ತಾಲೂಕಿನಲ್ಲಿ ಪೊಲೀಸರ ಬಂದೂಕು, ಲಾಠಿ ಏಟಿನಿಂದ ನಮ್ಮ ಹಕ್ಕನ್ನು ಕಸಿದುಕೊಳ್ಳಲು ಮುಂದಾಗುತ್ತಿದ್ದಾರೆ. ಆದರೆ ನಾವು ಹೋರಾಟದಿಂದ ಗೆದ್ದು ಬಂದಿದ್ದು, ಯಾವ ಪೊಲೀಸರ ದರ್ಪಕ್ಕೂ ಜಗ್ಗದೆ ಹೋರಾಟದಿಂದಲೆ ಎದುರಿಸುತ್ತೇವೆ ಎಂದರು.
ಶರತ್ ಬಚ್ಚೇಗೌಡ ಬೆನ್ನಿಗೆ ನಿಂತ ಸಿದ್ದು, ಎಂಟಿಬಿಗೆ ಗುದ್ದು
ಜಿಪಂ ಅಧ್ಯಕ್ಷ ವಿ.ಪ್ರಸಾದ್, ಉಪಾಧ್ಯಕ್ಷೆ ರೂಪ, ಇಓ ಶ್ರೀನಾಥ್‌ಗೌಡ, ಗ್ರಾಪಂ ಅಧ್ಯಕ್ಷೆ ಕಮಲಮ್ಮ, ಪಿಡಿಓ ಸುರೇಶ್, ಮುಖಂಡರಾದ ಟಿ.ಎಸ್.ರಾಜಶೇಖರ್, ಜಗದೀಶ್ ಇದ್ದರು.