ಸೋಷಿಯಲ್ ಮೀಡಿಯಾ ಟ್ರಾಲ್ ನೆನೆದು ಕಣ್ಣೀರು ಹಾಕಿದ ಸಾ.ರಾ.ಮಹೇಶ್

By Govindaraj S  |  First Published Aug 4, 2022, 12:35 PM IST

ನಾನು ನಿಮ್ಮ ಜಾತಿ ಅಲ್ಲ ಎಂಬ ಕಾರಣ ಕೆಟ್ಟಪದ ಬಳಕೆ ಮಾಡುತ್ತಿಯಾ, ಇದೇನಾ ನಿಮ್ಮ ತಂದೆ ತಾಯಿ ಕಲಿಸಿರುವ ಸಂಸ್ಕೃತಿ, ನೀನೊಬ್ಬ ಅನಾಗರೀಕ ವಿದ್ಯಾರ್ಥಿ ಎಂದು ಶಾಸಕ ಸಾ.ರಾ. ಮಹೇಶ್‌ ಆಕ್ರೋಶ ಭರಿತದ ಜೊತೆಗೆ ಕಣ್ಣೀರು ಹಾಕುತ್ತಾ ಮಾತುಗಳನ್ನಾಡಿದರು.


ಕೆ.ಆರ್‌. ನಗರ (ಆ.04): ನಾನು ನಿಮ್ಮ ಜಾತಿ ಅಲ್ಲ ಎಂಬ ಕಾರಣ ಕೆಟ್ಟಪದ ಬಳಕೆ ಮಾಡುತ್ತಿಯಾ, ಇದೇನಾ ನಿಮ್ಮ ತಂದೆ ತಾಯಿ ಕಲಿಸಿರುವ ಸಂಸ್ಕೃತಿ, ನೀನೊಬ್ಬ ಅನಾಗರೀಕ ವಿದ್ಯಾರ್ಥಿ ಎಂದು ಶಾಸಕ ಸಾ.ರಾ. ಮಹೇಶ್‌ ಆಕ್ರೋಶ ಭರಿತದ ಜೊತೆಗೆ ಕಣ್ಣೀರು ಹಾಕುತ್ತಾ ಮಾತುಗಳನ್ನಾಡಿದರು. ಪಟ್ಟದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ನಡೆದ ನಾಲ್ಕು ಕೋಟಿ ವೆಚ್ಚದ ನೂತನ ಕಟ್ಟಡ ಲೋಕಾರ್ಪಣೆ ಹಾಗೂ ಗ್ರಂಥಾಲಯ ಕಟ್ಟಡದ ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಕಾಲೇಜಿನ ವಿದ್ಯಾರ್ಥಿಯೋರ್ವ ಸಾಮಾಜಿಕ ಜಾಲತಾಣದಲ್ಲಿ ತಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸದಕ್ಕೆ ಬೇಸರಗೊಂಡು ನೋವನ್ನು ಹೊರಹಾಕಿದರು.

ಕಾಲೇಜಿಗೆ ಅನ್ಯಾಯವಾದಾಗ, ವಿದ್ಯಾರ್ಥಿಗಳಿಗೆ ತೊಂದರೆ ಆದರೆ, ಬಸ್‌ ಪಾಸ್‌ ವ್ಯವಸ್ಥೆ ಬಗ್ಗೆ, ಗ್ಯಾಸ್‌ ದರ ಏರಿಕೆ, ಬೆಲೆ ಏರಿಕೆ, ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆ ಆದರೆ ಇಂತಹ ಸಂದರ್ಭದಲ್ಲಿ ವಿದ್ಯಾರ್ಥಿಗಳು ಹೋರಾಟ ಮಾಡುವುದು ಸಹಜ, ಅದು ಬಿಟ್ಟು ನಾನೊಬ್ಬ ನಿಮ್ಮ ಜಾತಿ ಅಲ್ಲ ಎಂಬ ಕಾರಣಕ್ಕೆ ನನ್ನ ಬಗ್ಗೆ ಹಗುರವಾಗಿ ಮಾತನಾಡಿದ್ದೀಯ, ಇದರಲ್ಲಿಯೇ ಗೊತಾಗುತ್ತದೆ ನಿನ್ನ ಯೋಗ್ಯತೆ ಏನೂ ಎಂದು, ನಿನೊಬ್ಬ ವಿಕೃತ ಮನಸ್ಸಿನವ, ನೀನು ಯಾರಿಗಾದರೂ ವೋಟ್ ಹಾಕಪ್ಪ, ನಾನು ಕೂಡ 42 ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷನಾಗಿ ಬಂದವನು, ನಡೆನುಡಿ, ಸಂಸ್ಕೃತಿ ಇದ್ದಿದ್ದಕ್ಕೆ ಜನರು ಕೆ.ಆರ್‌. ನಗರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಬಾರಿ ಶಾಸಕನ್ನಾಗಿ ಮಾಡಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

Tap to resize

Latest Videos

ದಸರಾ ಬಹಿಷ್ಕರಿಸಲು ಆನೆ ಮಾವುತ, ಕಾವಡಿಗರ ಸಂಘ ನಿರ್ಧಾರ

ಈ ಕ್ಷೇತ್ರದಲ್ಲಿ ಅತಿಸೂಕ್ಷ್ಮಾತಿ ಸೂಕ್ಷ್ಮ ಸಮಾಜ ನನ್ನನ್ನು ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದಾರೆ, ನಿಮ್ಮ ನೆಂಟ ಕೂಡ ಮೂರು ಬಾರಿ ಜಿಪಂ ಸದಸ್ಯ ಆಗಿದ್ದ, ಏನೇನು ದಬಾಕವನೇ ಹೇಳಿಸು ಎಂದು ಆಕ್ರೋಶ ಭರಿತವಾಗಿ ಮಾತನಾಡಿದರು. ಕಾಲೇಜು ಕಟ್ಟಡದ ಕಾಮಗಾರಿ ಮುಗಿದಿದೆ, ಉದ್ಘಾಟನೆಗೆ ನೀತಿ ಸಂಹಿತೆ ಇತ್ತು, ಅಲ್ಲದೆ ಗುತ್ತಿಗೆದಾರರು ಕಂಪ್ಲೀಷನ್‌ ವರದಿ ಕೊಟ್ಟಿಲ್ಲ ಹೇಗೆ ಉದ್ಘಾಟಿಸುವುದು, ಅಷ್ಟೊಂದು ಸಮಸ್ಯೆ ಇದ್ದರೆ ನನಗೆ ಒಂದು ಮಾತು ಯಾರಾದರೂ ಕಾಲೇಜಿನಿಂದ ತಿಳಿಸಿದ್ದರೆ ಉದ್ಘಾಟನೆ ಮಾಡುವ ಮೊದಲೇ ಕಾಲೇಜಿನ ಹೊಸ ಕಟ್ಟಡದಲ್ಲಿ ತರಗತಿ ಪ್ರಾರಂಭಿಸಿ ಎನ್ನುತ್ತಿದ್ದೆ ಎಂದು ಅವರು ತಿಳಿಸಿದರು.

ಶಾಸಕರು ಕೈಯಲ್ಲಿ ವಿದ್ಯಾರ್ಥಿ ಕೆಟ್ಟದಾಗಿ ಬರೆದಿದ್ದ ಭಿತ್ತಿಪತ್ರವನ್ನು ಹಿಡಿದುಕೊಂಡು ಆಕ್ರೋಶ ಭರಿತವಾಗಿ ಮಾತನಾಡಿದರು. ಸಿಡಿಸಿ ಕಾರ್ಯದರ್ಶಿ ಚಂದ್ರಶೇಖರ್‌, ಪುರಸಭಾ ಸದಸ್ಯರಾದ ಕೆ.ಪಿ. ಪ್ರಭುಶಂಕರ್‌, ಕೆ.ಎಲ್. ಜಗದೀಶ್‌, ಸಿಡಿಸಿ ಸದಸ್ಯರಾದ ಎಚ್‌.ಪಿ. ಶಿವಣ್ಣ, ಕೃಷ್ಣಶೆಟ್ಟಿ, ಸುನೀತಾ, ಎಂ.ಕೆ. ಮಹದೇವ್‌, ಸಿದ್ದರಾಮೇಶ್‌, ನಗರ ಯುವ ಜೆಡಿಎಸ್‌ ಅಧ್ಯಕ್ಷ ಹರ್ಷಿತ್‌, ಜೆಡಿಎಸ್‌ ಮುಖಂಡ ಹರೀಶ್‌, ಸಾ.ರಾ. ಸ್ನೇಹ ಬಳಗದ ಮಹೇಶ್‌, ಪ್ರಾಂಶುಪಾಲ ಪ್ರೊ.ಎಂ. ಪ್ರಸನ್ನಕುಮಾರ್‌, ಉಪನ್ಯಾಸಕರಾದ ಕೆ.ಎಸ್‌. ಜ್ಯೋತಿ, ಮಾದಯ್ಯ, ವರದರಾಜು, ಉರಿಗೌಡ, ಗುತ್ತಿಗೆದಾರ ಕೃಷ್ಣಮೂರ್ತಿ, ಮಹೇಶ್‌ ಇದ್ದರು.

ಕೆ.ಆರ್‌.ನಗರ ನಂ.1 ಸ್ಥಾನ: ಮೈಸೂರು ನಗರ ಬಿಟ್ಟರೆ ಜಿಲ್ಲೆಯಲ್ಲಿ ಶೈಕ್ಷಣಿಕವಾಗಿ ಕೆ.ಆರ್‌. ನಗರ ತಾಲೂಕು ನಂಬರ್‌ ಒನ್‌ ಸ್ಥಾನದಲ್ಲಿ ಇದೆ, ಈ ಕ್ಷೇತ್ರದ ಜನತೆಗೆ ರಸ್ತೆ, ಶಿಕ್ಷಣ, ಆರೋಗ್ಯ, ರೈತರಿಗೆ ನೀರು ಇವೆಲ್ಲವನ್ನು ನಾನು ಯಾರಿಂದ ಹೇಳಿಸಿಕೊಂಡು ಮಾಡಿಲ್ಲ ಎಂದ ಅವರು, ತಾಲೂಕಿನಲ್ಲಿ ಎಲ್ಲ ಮಕ್ಕಳಿಗೂ ಉತ್ತಮ ಗುಣಮಟ್ಟದ ಶಿಕ್ಷಣ ದೊರಕಲಿ ಎಂಬ ಉದ್ದೇಶದಿಂದ ಆರು ವಸತಿ ಶಾಲೆಯನ್ನು ಭೇರ್ಯ, ರಾಂಪುರ ಗ್ರಾಮದಲ್ಲಿ ಮೊರಾರ್ಜಿ ದೇಸಾಯಿ, ಗಡಿಭಾಗವಾದ ಹೆಬ್ಸೂರು ಗ್ರಾಮದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಕೆ.ಆರ್‌. ನಗರ ಪಟ್ಟಣದಲ್ಲಿ ಕಸ್ತೂರಬಾ ಶಾಲೆ ಮತ್ತು ಆದರ್ಶ ಅಂಗ್ಲ ಮಾಧ್ಯಮ ಶಾಲೆ ಪ್ರಾರಂಭ ಮಾಡಲಾಗಿದೆ. 

Mysuru Dasara ಮೈಸೂರು ದಸರಾ ಸಿದ್ಧತೆ ಜೋರು: ಗಜಪಡೆ ಸ್ವಾಗತಕ್ಕೆ ಜಿಲ್ಲಾಡಳಿತ ಸಜ್ಜು

ಇದರ ಜೊತೆಗೆ ಮಿರ್ಲೆ ಗ್ರಾಮದಲ್ಲಿ ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜು, ಪಟ್ಟಣದಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ನಾನು ಶಾಸಕನಾಗು ಮೊದಲು ನಿಮ್ಮ ಪ್ರಥಮ ದರ್ಜೆ ಕಾಲೇಜು ಯಾವ ರೀತಿ ಇತ್ತು ಈಗ ಹೇಗಿದೆ ನೋಡಿ, ಶಿಕ್ಷಣ ಕ್ಷೇತ್ರಕ್ಕೆ ಕೋಟ್ಯಂತರ ಹಣ ಖರ್ಚು ಮಾಡಲಾಗಿದ್ದು, ನಮ್ಮ ನಾಯಕರಾದ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸರ್ಕಾರದಲ್ಲಿ 24 ಕೋಟಿ ವೆಚ್ಚದಲ್ಲಿ 102 ಹಳೆಯ ಶಾಲೆಗಳನ್ನು ಕೆಡವಿ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ ಇದು ನಾನು ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಅನುದಾನ ಎಂದರು.

click me!