ಶಾಸಕಿ ರೂಪಕಲಾ ಮಳೆಯಲ್ಲೇ 3 ಗಂಟೆ ಏಕಾಂಗಿ ಪ್ರತಿಭಟನೆ

Kannadaprabha News   | Asianet News
Published : Sep 20, 2020, 08:44 AM ISTUpdated : Sep 20, 2020, 09:00 AM IST
ಶಾಸಕಿ ರೂಪಕಲಾ ಮಳೆಯಲ್ಲೇ 3 ಗಂಟೆ ಏಕಾಂಗಿ ಪ್ರತಿಭಟನೆ

ಸಾರಾಂಶ

ಕೆಜಿಎಫ್ ಶಾಸಕಿ ರೂಪಕಲಾ ಸತತ ಮೂರು ಗಂಟೆ ಕಾಲ ಮಳೆಯಲ್ಲೇ ನಿಂತು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ. 

ಕೋಲಾರ (ಸೆ.20): ಕೆಜಿಎಫ್‌ ಶಾಸಕಿ ರೂಪಕಲಾ ಅವರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಸತತ ಮೂರೂವರೆ ಗಂಟೆಗಳ ಕಾಲ ಮಳೆಯಲ್ಲೇ ನಿಂತು ಪ್ರತಿಭಟನೆ ನಡೆಸಿದ ಪ್ರಸಂಗ  ನಡೆದಿದೆ. ಕೆಜಿಎಫ್‌ ನಗರದಲ್ಲಿರುವ ಅಶೋಕ ರಸ್ತೆಯನ್ನು ತುರ್ತಾಗಿ ಅಗಲೀಕರಣಕ್ಕೇ ಹೈಕೋರ್ಟ್‌ನಲ್ಲಿ ಆದೇಶವಾಗಿದ್ದರೂ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿ ಅವರು 10.30ಕ್ಕೆ ಏಕಾಂಗಿ ಮೌನ ಪ್ರತಿಭಟನೆ ಆರಂಭಿಸಿದ್ದರು. ಆದರೆ ಜಿಲ್ಲಾಧಿಕಾರಿ ಸಿ.ಸತ್ಯಭಾಮ ಮಧ್ಯಾಹ್ನ 2.30ವರೆಗೂ ಸ್ಥಳಕ್ಕಾಗಮಿಸದ್ದರಿಂದ ರೂಪಕಲಾ ಮಳೆಯಲ್ಲೇ ಪ್ರತಿಭಟನೆ ಮುಂದುವರಿಸಬೇಕಾಯ್ತು.

ಅಶೋಕ ರಸ್ತೆಯ ಅಗಲೀಕರಣಕ್ಕಾಗಿ ಬಹಳ ಸಲ ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದರೂ ಕ್ರಮ ಜರುಗಿಸಿಲ್ಲ. ಕಾಮಗಾರಿ ಶುರುವಾಗುವ ನಿರ್ದಿಷ್ಟದಿನಾಂಕವನ್ನು ಜಿಲ್ಲಾಧಿಕಾರಿ ಸ್ಪಷ್ಟಪಡಿಸದಿದ್ದರೆ ಹೋರಾಟ ನಿಲ್ಲುವುದಿಲ್ಲ ಅಂತ ಶಾಸಕಿ ರೂಪಕಲಾ ಗುಡುಗಿದ್ದರು. ಅದರಂತೆ ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಮೌನ ಪ್ರತಿಭಟನೆ ಆರಂಭಿಸಿದರು. ಕೋಲಾರದಲ್ಲಿಯೇ ಇದ್ದ ಜಿಲ್ಲಾಧಿಕಾರಿ ಸತ್ಯಭಾಮ ಮಧ್ಯಾಹ್ನ 2 ಗಂಟೆ ಬಳಿಕ ಧರಣಿ ಸ್ಥಳಕ್ಕೆ ಆಗಮಿಸಿದರು. ಆ ವೇಳೆಗಾಗಲೇ ಜಡಿ ಮಳೆಗೆ ಶಾಸಕಿ ರೂಪ ಕೊಂಚ ತೊಯ್ದಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಶಾಸಕ ರೂಪಕಲಾ ಅವರು ಸ್ಥಳದಲ್ಲಿ ಡಿ.ಸಿ ಮತ್ತು ಶಾಸಕಿ ಮಧ್ಯೆ ಪರಸ್ಪರ ಬಿಸಿ-ಬಿಸಿ ಚರ್ಚೆಯಾಯ್ತು.

60 ನಾಯಕರು ಕಾಂಗ್ರೆಸ್ ಸೇರಲು ಅರ್ಜಿ: ಪಕ್ಷಾಂತರ ಪರ್ವಕ್ಕೆ ಮುನ್ನುಡಿ ಬರೆದ ಜೆಡಿಎಸ್ ನಾಯಕ ...

ವಿಧಾನಮಂಡಲದ ಅಧಿವೇಶನ ಮುಗಿದ ನಂತರವಷ್ಟೇ ಅಶೋಕ ರಸ್ತೆಯ ಕಾಂಗಾರಿಯನ್ನು ಮಾಡುವುದಾಗಿ ಭರವಸೆ ನೀಡಿದ ಜಿಲ್ಲಾಧಿಕಾರಿ ಸಿ.ಸತ್ಯಭಾಮ ನಿರ್ದಿಷ್ಟದಿನಾಂಕವನ್ನು ಪ್ರಕಟಿಸಲು ಮಾತ್ರ ನಿರಾಕರಿಸಿದರು. ಆದರೆ ಧರಣಿ ಮುಕ್ತಾಯದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಶಾಸಕಿ ರೂಪಾ, ರಸ್ತೆಯ ಕಾಮಗಾರಿ ಶುರು ಮಾಡುವುದಾಗಿ ಜಿಲ್ಲಾಧಿಕಾರಿ ಭರವಸೆ ಕೊಟ್ಟಿರುವ ಹಿನ್ನೆಲೆಯಲ್ಲಿ ಧರಣಿ ವಾಪಸ್‌ ಪಡೆದುಕೊಳ್ಳುತ್ತಿರುವುದಾಗಿ ಹೇಳಿ ನಿರ್ಗಮಿಸಿದರು.

PREV
click me!

Recommended Stories

ಪದೇಪದೆ 'ನಮ್ಮಪ್ಪನೇ ಸಿಎಂ..' ಯತೀಂದ್ರ ಹೇಳಿಕೆಯಿಂದ ಸರ್ಕಾರಕ್ಕೆ ಮುಜುಗರ? ಸತೀಶ್ ಜಾರಕಿಹೊಳಿ ಹೇಳಿದ್ದೇನು?
16 ಬಾರಿ ಬಜೆಟ್ ಮಂಡಿಸಿದ ವಿಶ್ವದ ಕುಖ್ಯಾತ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ, ಸತ್ತ ಸರ್ಕಾರದ ಮುಖ್ಯಮಂತ್ರಿ: ಪ್ರತಾಪ್ ಸಿಂಹ ವಾಗ್ದಾಳಿ